ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ನಿಧನಕ್ಕೆ ಬಿಎಸ್‌ವೈ ಸಂತಾಪ

ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  

Last Updated : Oct 30, 2019, 12:21 PM IST
ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ನಿಧನಕ್ಕೆ ಬಿಎಸ್‌ವೈ ಸಂತಾಪ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್.ವೆಂಕಟಾಚಲ ಅವರು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿಎಸ್‌ವೈ, ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. 

ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ಹಾಗೂ ಭ್ರಷ್ಟಾಚಾರ ರಹಿತ ಸಮಾಜಕ್ಕಾಗಿ ವೆಂಕಟಾಚಲ ಅವರು ಶ್ರಮಿಸಿದರು.
ಅವರ ಕುಟುಂಬ ವರ್ಗ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಬಿಎಸ್‌ವೈ ಟ್ವೀಟ್ ಮಾಡಿದ್ದಾರೆ.

More Stories

Trending News