ಜೆಡಿಎಸ್ ಸೇರ್ಪಡೆಗೊಂಡ ಬಿಎಸ್ವೈ ಬಲಗೈ ಬಂಟ

ವಿಧಾನಸಭಾ ಚುನಾವಣೆಯಲ್ಲಿ ಕೇವಲ 600 ಮತಗಳ ಅಂತರದಲ್ಲಿ ಸೋತಿದ್ದ ಬಿಎಸ್ವೈ ಬಲಗೈ ಬಂಟ ಮಂಜುನಾಥ ಗೌಡ.  

Last Updated : Jan 23, 2018, 01:48 PM IST
ಜೆಡಿಎಸ್ ಸೇರ್ಪಡೆಗೊಂಡ ಬಿಎಸ್ವೈ ಬಲಗೈ ಬಂಟ  title=

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಕೇವಲ 600 ಮತಗಳ ಅಂತರದಲ್ಲಿ ಸೋತಿದ್ದ ಬಿಎಸ್ವೈ ಬಲಗೈ ಬಂಟ ಮಂಜುನಾಥ ಗೌಡ ಇಂದು ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗದ ಜಿಲ್ಲಾ ಜೆಡಿಎಸ್ ಅದ್ಯಕ್ಷ  ಶ್ರೀಕಾಂತ್, ಜಿಲ್ಲಾ ಮುಖಂಡ ಮದನ್, ಮಾಜಿ ಶಾಶಕ ನಾಡಗೌಡ, ಅನ್ನದಾನಿ ಸಮ್ಮುಖದಲ್ಲಿ ಮಂಜುನಾಥ ಗೌಡ ಜೆಡಿಎಸ್ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹೈದರು. ಇದನ್ನು ಯಾರಾದರೂ ಸರ್ಕಾರ ಅಂತಾ ಕರೆಯಲು ಸಾಧ್ಯವೇ, ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಜನವರಿ 25 ಮತ್ತು ಫೆ.4 ರಂದು ಕರೆ ನೀಡಿರುವ ಬಂದ್'ಗೆ ಜೆಡಿಎಸ್ ಬೆಂಬಲವೂ ಇಲ್ಲ, ವಿರೋಧವು ಇಲ್ಲ. ಈ  ಬಂದ್'ಗಳಿಂದ  ಮಹಾದಾಯಿ ಸಮಸ್ಯೆ ವಿವಾದಕ್ಕೆ ಪರಿಹಾರ ಸಿಗುತ್ತಾ? ಎಂದು ಪ್ರಶ್ನಿಸಿದರು. 

Trending News