District Health Department: ರಾಜ್ಯದಲ್ಲಿ ದಿನೇದಿನೇ ಕರೋನಾ ಆತಂಕ ಜಾಸ್ತಿಯಾಗ್ತಿದೆ. ನ್ಯೂ ಇಯರ್ ಬಳಿಕ ಕರೋನಾ ಸ್ಫೋಟವಾಗುತ್ತೆ ಅನ್ನೋ ವದಂತಿ ಕೂಡ ಕೇಳಿಬರ್ತಿದೆ. ಒಂದು ಕಡೆ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿದ್ರೆ, ಮತ್ತೊಂದೆಡೆ ಬೆಂಗಳೂರಿನ ಪಕ್ಕದಲ್ಲಿಯೇ ಇರೋ ತುಮಕೂರು ಜಿಲ್ಲೆಯ ಜನರಲ್ಲಿಯೂ ಭಯ ಶುರುವಾಗಿದೆ.
ಈಗಾಗಲೇ ತುಮಕೂರಿನಲ್ಲಿ 26 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರೋದ್ರಿಂದ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸೋದಕ್ಕೂ ಭಯಪಡುವಂತಾಗಿದೆ. ಹೀಗಾಗಿ ಕೆಲ ಖಾಸಗಿ ಶಾಲೆಗಳೇ ತಮ್ಮ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವನ್ನ ತೆಗೆದುಕೊಳ್ಳಲು ಮುಂದಾಗಿವೆ.
ಇದನ್ನೂ ಓದಿ-ವಸತಿ ಶಾಲೆಗಳಿಗೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಆದ್ರೆ ಪುಟಾಣಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಯಾವುದೇ ಗೈಡ್ ಲೈನ್ಸ್ ಬಿಡುಗಡೆ ಮಾಡಿರಲಿಲ್ಲ.. ಹೀಗಾಗಿ ತುಮಕೂರಿನ ಕೆಲ ಖಾಸಗಿ ಶಾಲೆಗಳೇ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಮಾಡಿವೆ.
ಇಂದಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು ಎಂದು ಸೂಚನೆ ನೀಡಿವೆ. ಒಂದು ಕಡೆ ಕರೋನಾ ಆತಂಕವಿದ್ರೆ, ಮತ್ತೊಂದೆಡೆ ಹವಾಮಾನದಲ್ಲಿನ ವೈಪರಿತ್ಯದಿಂದಾಗಿ ಮಕ್ಕಳಲ್ಲಿ ಸಹಜವಾಗಿಯೇ ನೆಗಡಿ, ಕೆಮ್ಮು ಕಾಣಿಸಿಕೊಳ್ತಿದೆ. ಹೀಗಾಗಿ ಇದು ಒಬ್ಬರಿಂದ ಒಬ್ಬರಿಗೆ ಹರಡಂತಿರಲಿ ಅಂತಾ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಇಂತಹ ನಿರ್ಧಾರ ಕೈಗೊಂಡಿದೆ.
ಶಾಲೆಯ ಆಡಳಿತ ಮಂಡಳಿಯ ಸೂಚನೆಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕೂಡ ಸ್ಪಂದಿಸಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಮಾಸ್ಕ್ ಹಾಕಿಯೇ ಶಾಲೆಗೆ ಕಳಿಸುತ್ತಿದ್ರೆ, ವಿದ್ಯಾರ್ಥಿಗಳು ಕೂಡ ಇದು ತಮ್ಮ ಸೇಫ್ಟಿಗಾಗಿ ಎಂದು ಅರಿತು ಮಾಸ್ಕ್ ಹಾಕಿಕೊಂಡೆ ಪಾಠ ಕೇಳುತ್ತಿದ್ದಾರೆ. ಇನ್ನು ಕೇವಲ ಮಾಸ್ಕ್ ಮಾತ್ರವಲ್ಲ, ಸ್ಯಾನಿಟೈಸರ್ ಬಳಕೆ, ನೀರಿನ ಬಾಟಲಿ ಹಂಚಿಕೊಳ್ಳುವುದು, ಊಟವನ್ನ ಹಂಚಿಕೊಳ್ಳುವುದಕ್ಕೂ ಶಾಲೆಯ ಆಡಳಿತ ಮಂಡಳಿ ಕಡಿವಾಣ ಹಾಕಿದೆ.
ಇದನ್ನೂ ಓದಿ-ಬಡ್ಡಿ ಸಮೇತ ಠೇವಣಿ ಹಣ ಹಿಂದಿರುಗಿಸದ ಧಾರವಾಡದ ಸಹಕಾರಿ ಸಂಘಕ್ಕೆ ದಂಡ
ಸ್ವಲ್ಪದ ದಿನದ ಮಟ್ಟಿಗೆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಕೈ ಕೈ ಹಿಡಿದು ಓಡಾಡೋದಕ್ಕೂ ಕೂಡ ಆಡಳಿತ ಮಂಡಳಿ ನಿರ್ಬಂಧ ಹೇರಿದೆ. ಇನ್ನೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆ ಫುಲ್ ಆಕ್ಟಿವ್ ಆಗಿದೆ. ಡಿ.ಎಚ್.ಒ ಮಂಜುನಾಥ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳ ಝೂಮ್ ಮೀಟಿಂಗ್ ಪ್ರತಿದಿನ ನಡೆಯುತ್ತಿದೆ. ಆ ಮೂಲಕ ಮಹಾಮಾರಿಯ ಕಂಟ್ರೋಲ್ ಗೆ ಈಗಿನಿಂದಲೇ ಮುಂದಾಗಿದ್ದಾರೆ.
ಈಗಾಲೇ ಜಿಲ್ಲೆಯಲ್ಲಿ ರ್ಯಾಪಿಡ್ ಟೆಸ್ಟ್ ಹಾಗೂ ಆರ್ ಟಿ ಪಿ ಆರ್ ಟೆಸ್ಟ್ ಶುರುಮಾಡಲಾಗಿದೆ. ತುಮಕೂರು, ಕುಣಿಗಲ್ ಮತ್ತು ತುರುವೇಕೆರೆ ಮೂಲದ ಪುರುಷರಿಗೆ ಜೆಎನ್ .1 ಪತ್ತೆಯಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಪಾಸಿಟಿವ್ ಪ್ರಕರಣ ಮತ್ತೆ ಹೆಚ್ಚಾಗುವ ಆತಂಕವೂ ಆರೋಗ್ಯ ಇಲಾಖೆಯಲ್ಲಿ ಮನೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.