ನ್ಯೂ ಇಯರ್ ದಿನ ಟ್ರಾಫಿಕ್ ರೂಲ್ಸ್’ನಲ್ಲಿ ಬದಲಾವಣೆ… ಹೀಗಿರಲಿದೆ ನೋಡಿ ‘ಹೊಸ’ ನಿಯಮ

New Year Traffic Rules: ಒಂದು ವೇಳೆ ಪಾರ್ಕ್ ಮಾಡಿದ್ದರೆ ದಿನಾಂಕ 31ರಂದು ಸಂಜೆ 4 ಗಂಟೆಯ ಒಳಗಾಗಿ ವಾಹನವನ್ನು ತೆರವುಗೊಳಿಸಬೇಕು. ನಿಯಮ ಉಲ್ಲಂಘನೆ ಆದಲ್ಲಿ ದಂಡ ಕಟ್ಟಬೇಕು.

Edited by - Bhavishya Shetty | Last Updated : Dec 26, 2023, 07:26 PM IST
    • ನ್ಯೂ ಇಯರ್ ದಿನ ಟ್ರಾಫಿಕ್ ನಿಯಮದಲ್ಲಿ ಕೆಲ ಬದಲಾವಣೆ
    • ವಾಹನ ಸಂಚಾರ ಮತ್ತು ನಿಲುಗಡೆ ಮೇಲೆ ನಿರ್ಬಂಧ ಹೇರಲಾಗಿದೆ
    • ಡಿಸೆಂಬರ್ 31ರ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿವರೆಗೆ ನಿರ್ಬಂಧ ಜಾರಿ
ನ್ಯೂ ಇಯರ್ ದಿನ ಟ್ರಾಫಿಕ್ ರೂಲ್ಸ್’ನಲ್ಲಿ ಬದಲಾವಣೆ… ಹೀಗಿರಲಿದೆ ನೋಡಿ ‘ಹೊಸ’ ನಿಯಮ title=
New Year Traffic Rules

New Year Traffic Rules: ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯೂ ಇಯರ್ ದಿನ ಟ್ರಾಫಿಕ್ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಡೇಗ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ಮೇಲೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ: 50 ವರ್ಷ ವಯಸ್ಸಾದ್ರೂ ನಟಿ ಸಿತಾರಾ ಮದುವೆಯಾಗದಿರಲು ಕಾರಣ ಇವರಿಬ್ಬರು..! ಸ್ವತಃ ನಟಿಯೇ ಬಿಚ್ಚಿಟ್ಟ ಸತ್ಯ

ಡಿಸೆಂಬರ್ 31ರ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿವರೆಗೆ ಈ ನಿರ್ಬಂಧ ಜಾರಿ ಇರಲಿದೆ. ಇನ್ನು ಎಂಜಿ ರಸ್ತೆಯಲ್ಲಿ, ಅನಿಲ್ ಕುಂಬ್ಲೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆಯ ಜಂಕ್ಷನ್ ವರೆಗೆ, ಬ್ರಿಗೇಡ್ ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್’ನಿಂದ ಅಪೇರಾ ಜಂಕ್ಷನ್ ವರೆಗೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್ ವರೆಗೆ, ಎಂಜಿ ರಸ್ತೆಯ ಜಂಕ್ಷನ್ ನಿಂದ ಎಸ್ಬಿಐ ವೃತ್ತದವರೆಗೆ, ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆಯ ಜಂಕ್ಷನ್’ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ, ರೆಸಿಡೆನ್ಸಿ ಜಂಕ್ಷನ್ ರಸ್ತೆಯಿಂದ ಎಂಜಿ ರಸ್ತೆ ಜಂಕ್ಷನ್ ವರೆಗೆ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳಿಗೆ ನೋ ಪಾರ್ಕಿಂಗ್:

ಎಂಜಿ ರಸ್ತೆ - ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದ‌ವರೆಗೆ

ಬ್ರಿಗೇಡ್ ರಸ್ತೆ - ಆರ್ಟ್ ಕ್ರ್ಯಾಫ್ಟ್ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ

ಚರ್ಚ್ ಸ್ರ್ಟೀಟ್ ರಸ್ತೆ - ಬ್ರಿಗೇಡ್ ರಸ್ತೆಯಿಂದ ಸೆಂಟ್ ಮಾರ್ಕ್ಸ್ ಜಂಕ್ಷನ್ ವರೆಗೆ

ರೆಸ್ಟ್ ಹೌಸ್ ರಸ್ತೆ- ಬ್ರಿಗೇಡ್‌ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್ ವರೆಗೆ

ಮ್ಯೂಸಿಯಂ ರಸ್ತೆ - ಎಂಜಿ ರಸ್ತೆ ಜಂಕ್ಷನ್ ನಿಂದ ಎಸ್.ಬಿ.ಐ ವೃತ್ತದವರೆಗೆ

ಒಂದು ವೇಳೆ ಪಾರ್ಕ್ ಮಾಡಿದ್ದರೆ ದಿನಾಂಕ 31ರಂದು ಸಂಜೆ 4 ಗಂಟೆಯ ಒಳಗಾಗಿ ವಾಹನವನ್ನು ತೆರವುಗೊಳಿಸಬೇಕು. ನಿಯಮ ಉಲ್ಲಂಘನೆ ಆದಲ್ಲಿ ದಂಡ ಕಟ್ಟಬೇಕು.

ವಾಹನ ಸಂಚಾರ ಮಾಡಬೇಕಾದ ಬದಲಿ ಮಾರ್ಗ:

ದಿನಾಂಕ 31 ರಂದು ರಾತ್ರಿ 2 ಗಂಟೆಯ ನಂತರ ಎಂಜಿ ರಸ್ತೆಯಿಂದ ಹಲಸೂರು ಕಡೆ ಹೋಗುವವರು- ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ರ್ರೀಟ್ - ಬಿ.ಆರ್.ವಿ ಜಂಕ್ಷನ್ ಬಲ‌ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿಯಿಂದ ಸಾಗಬೇಕು.

ಹಲಸೂರು ಕಡೆಯಿಂದ ಕಂಟೋನ್ ಮೆಂಟ್‌ಕಡೆ ಸಾಗುವವರು- ಟ್ರಿನಿಟಿ ವೃತ್ತದಲ್ಲಿ ಬಲ‌ ತಿರುವು ಪಡೆದು- ಹಲಸೂರು ರಸ್ತೆ- ಡಿಕಂನ್ಸ್’ನ್ ರಸ್ತೆಯ ಮಾರ್ಗವಾಗಿ - ಕಬ್ಬನ್ ರಸ್ತೆ ಮೂಲಕ‌ ಸಂಚರಿಸಬೇಕು.

ಕಾಮರಾಜ‌ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್’ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್’ವರೆಗು ವಾಹನಗಳ ನಿಲುಗಡೆಗೆ‌ ಅವಕಾಶವಿದೆ. ಇದಲ್ಲದೆ, ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್’ನಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.

ಪಾದಚಾರಿಗಳು ಬ್ರಿಗೇಡ್‌ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ - ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಅಂದಹಾಗೆ ಈ ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ಒನ್ ವೇನಲ್ಲಿ) ನಡೆದುಕೊಂಡು ಹೋಗುವುದಕ್ಕೆ ಸಹ‌ ನಿಷೇಧವಿದೆ. ಪುನಃ ಎಂಜಿ‌ ರಸ್ತೆಗೆ ಬರಬೇಕಾದ್ರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿಯೇ ಬರಬೇಕು.

ದಿನಾಂಕ 31 ರಂದು ರಾತ್ರಿ 9 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯ‌ವರೆಗೆ ಫ್ಲೈ ಓವರ್ ಮೇಲೆ ವಾಹನಗಳ‌ ಸಂಚಾರ ನಿಷೇಧಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ: ಇಷ್ಟು ಗಂಟೆಯೊಳಗೆ ಪಬ್-ಬಾರ್ ಬಂದ್ ಆಗಲೇಬೇಕು!

ಇನ್ನು ಮದ್ಯ ಸೇವಿಸಿ ವಾಹನ ಚಲಾವಣೆ, ವೀಲ್ಹಿಂಗ್, ಡ್ರ್ಯಾಗ್ ರೇಸ್’ನಲ್ಲಿ ಭಾಗಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಖಚಿತ ಎಂದು ಸೂಚನೆ ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News