Lakhan Jarkiholi : ರಮೇಶ್ ಜಾರಕಿಹೊಳಿ ಆದಷ್ಟು ಬೇಗನೆ ಮಂತ್ರಿ ಆಗುತ್ತಾರೆ : ಲಖನ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದರೆ ಅಥಣಿಯ ಭಾಗ ನೀರಾವರಿ ಹೊಂದುತ್ತಿತ್ತು. ಅವರನ್ನು ಯಾರೂ ಕಡೆಗಣಿಸಿಲ್ಲ. ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. 

Written by - Zee Kannada News Desk | Last Updated : May 16, 2022, 05:59 PM IST
  • ಬಿಜೆಪಿ ನಾಯಕರ ಕೃಪಾಶೀರ್ವಾದ ರಮೇಶ್ ಜಾರಕಿಹೊಳಿ ಮೇಲೆ ಇದೆ
  • ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷದೊಂದಿಗೆ ಉತ್ತಮ ಸಂಬಂಧ
  • ಬಿಜೆಪಿ ಟಿಕೇಟ್ ಹಂಚಿಕೆಯ ಕುರಿತು ಭವಿಷ್ಯ ನುಡದಿದ ಲಖನ್ ಜಾರಕಿಹೊಳಿ
Lakhan Jarkiholi : ರಮೇಶ್ ಜಾರಕಿಹೊಳಿ ಆದಷ್ಟು ಬೇಗನೆ ಮಂತ್ರಿ ಆಗುತ್ತಾರೆ : ಲಖನ್ ಜಾರಕಿಹೊಳಿ title=

ಬೆಳಗಾವಿ : ಬಿಜೆಪಿ ನಾಯಕರ ಕೃಪಾಶೀರ್ವಾದ ರಮೇಶ್ ಜಾರಕಿಹೊಳಿ ಮೇಲೆ ಇದೆ. ಆದಷ್ಟು ಬೇಗನೆ ಅವರು ಮಂತ್ರಿ ಆಗುತ್ತಾರೆ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಾತನಾಡಿದ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದರೆ ಅಥಣಿಯ ಭಾಗ ನೀರಾವರಿ ಹೊಂದುತ್ತಿತ್ತು. ಅವರನ್ನು ಯಾರೂ ಕಡೆಗಣಿಸಿಲ್ಲ. ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. 

ಇದನ್ನೂ ಓದಿ : ‘ಆಪರೇಷನ್ ಕಮಲ’ಕ್ಕೆ 'ಕೈ' ಜೋಡಿಸಿದ್ದು ಸೈದಾಂತಿಕ ಬದ್ಧತೆಯಾ?: ರಾಹುಲ್ ಗಾಂಧಿಗೆ ಎಚ್‍ಡಿಕೆ ಪ್ರಶ್ನೆ

ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ಹಾಲಿ ಶಾಸಕರೆ ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಾಗ್ತಾರೆ. ಅವರೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಬಿಜೆಪಿ ಟಿಕೇಟ್ ಹಂಚಿಕೆಯ ಕುರಿತು ಭವಿಷ್ಯ ನುಡದಿದ್ದಾರೆ. ಈಗಾಗಲೇ ಮಹೇಶ್ ಕುಮಟಳ್ಳಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಲಖನ್ ಶಪಥ ಮಾಡಿದ್ದಾರೆ. ಸಹೋದರ ರಮೇಶ್ ನೇತೃತ್ವದಲ್ಲಿ ಬಿಜೆಪಿ ಬೆಂಬಲಿಸುವೆ. 

ಗ್ರಾಮ ಪಂಚಾಯತಿ ಸದಸ್ಯರ ಗೌರವಧನ 10ಸಾವಿರಕ್ಕೆ ಏರಿಸಬೇಕು. ಇದಕ್ಕಾಗಿ ಸದನದಲ್ಲಿ ಹಾಗೂ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿರುವೆ. ಜಿಲ್ಲೆಯಲ್ಲಿ 450 ಗ್ರಾಮ ಪಂಚಾಯತಿಗಳಿವೆ. ಇರುವ 1ಸಾವಿರ ಗೌರವಧನ ಸಾಲುವುದಿಲ್ಲ 10 ಸಾವಿರಕ್ಕೆರಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ : "ನನಗೆ ಮುಸ್ಲೀಂರ ಮತಗಳು ಬೇಡ, ಹಿಂದೂಗಳ ಮತಗಳಷ್ಟೇ ಸಾಕು"

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News