ಧಾರವಾಡ: ಗೋಕಾಕ ಜಿಲ್ಲೆಯ ವಿದ್ಯಾನಗರದ ಬಸವರಾಜ ಇಳಿಗೇರ್ ಇವರು ರೂ.18,00,000/- ಹಣ ಸಂದಾಯ ಮಾಡಿ ಹುಬ್ಬಳ್ಳಿಯ ಗೋಲ್ಡನ್ ಹೈಟ್ಸ್ ಅಪಾರ್ಟಮೆಂಟ್, ಕಾರವಾರ ರೋಡನಲ್ಲಿ ಪ್ಲ್ಯಾಟ್ ಖರೀದಿಸಿದ್ದರು.
ಈ ಬಗ್ಗೆ ಉಭಯತರ ಮಧ್ಯ ಖರೀದಿ ಒಪ್ಪಂದ ಪತ್ರ ಆಗಿತ್ತು. ನಿಗದಿತ ಅವಧಿಯಲ್ಲಿ ಪ್ಲ್ಯಾಟ್‍ಗಳ ಅಪಾರ್ಟಮೆಂಟನ್ನು ಎದುರುದಾರ ಗೋಲ್ಟನ್ ಹೋಮ್ಸ್‍ರವರು ಕಟ್ಟಿಸಿ ಸ್ವಾದೀನತೆ ಕೊಟ್ಟಿದ್ದರು. ಆದರೆ ಅವರು ದೂರುದಾರರಿಗೆ ನೊಂದಣಿ ಕ್ರಯ ಪತ್ರ ಮಾಡಿಸಿ ಕೊಟ್ಟಿರಲಿಲ್ಲ. ಈ ಬಗ್ಗೆ ಹಲವಾರು ಬಾರಿ ದೂರುದಾರರರು ಎದುರುದಾರರಿಗೆ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:15/04/2024 ರಂದು ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಎಂದು ಗುಡುಗಿದ ಕೇಂದ್ರ ಸಚಿವರು
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರ ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್‍ರ್ಸ್‍ರವರು ಪ್ಲ್ಯಾಟ ನಿರ್ಮಿಸಿ ಸ್ವಾಧೀನತೆ ಕೊಟ್ಟಿದ್ದರು ಆ ಬಗ್ಗೆ ನೋಂದಾಯಿತ ಕ್ರಯ ಪತ್ರ ಮಾಡಿ ಕೊಡದೇ ಇರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ 30 ದಿವಸಗಳ ಒಳಗಾಗಿ ದೂರುದಾರರ ಪರವಾಗಿ ನೋಂದಾಯಿತ ಕ್ರಯ ಪತ್ರ ಮಾಡಿ ಕೊಡುವಂತೆ ಆದೇಶಿಸಿದೆ. ಅದಕ್ಕೆ ತಪ್ಪಿದ್ದಲ್ಲಿ ಕೋರ್ಟಕ ಮೀಷನರ್ ಮೂಲಕ ದೂರುದಾರರರು ತನ್ನ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯ ಪತ್ರ ಪಡೆಯಲು ಅರ್ಹರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.