ಫೋನಿ ಚಂಡಮಾರುತ: ಒಡಿಶಾಗೆ ರಾಜ್ಯದಿಂದ 10 ಕೋಟಿ ರೂ. ನೆರವು

ಫೋನಿ ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. 

Updated: May 9, 2019 , 05:30 PM IST
ಫೋನಿ ಚಂಡಮಾರುತ: ಒಡಿಶಾಗೆ ರಾಜ್ಯದಿಂದ 10 ಕೋಟಿ ರೂ. ನೆರವು

ಬೆಂಗಳೂರು: ಫೋನಿ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಒಡಿಶಾ ರಾಜ್ಯಕ್ಕೆ  ಕರ್ನಾಟಕ ರಾಜ್ಯ ಸರ್ಕಾರ  10 ಕೋಟಿ ರೂ.ಗಳ ನೆರವನ್ನು ಗುರವಾರ ಘೋಷಿಸಿದೆ. 

ಒಡಿಶಾ ರಾಜ್ಯದಲ್ಲಿ ಫೋನಿ ಚಂಡಮಾರುತದಿಂದ ಆಗಿರುವ ಬೃಹತ್ ನಷ್ಟದ ಹಿನ್ನೆಲೆಯಲ್ಲಿ ಚಂಡಮಾರುತ ಸಂತ್ರಸ್ತರಿಗೆ ಹಾಗೂ ಪರಿಹಾರ ಕಾರ್ಯಗಳಿಗಾಗಿ 10 ಕೋಟಿ ರೂಗಳನ್ನು ನೀಡುತ್ತಿರುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. 

ಕಳೆದ ಕೆಲ ದಿನಗಳ ಹಿಂದೆ ಬೀಸಿದ ಫೋನಿ ಚಂಡಮಾರುತ, ಇಡೀ ಒಡಿಶಾ ರಾಜ್ಯದ ಚಿತ್ರಣವನ್ನೇ ಬದಲಿಸಿದೆ. ಹಲವೆಡೆ ಭೂಕುಸಿತ, ವಿದ್ಯುತ್ ಮತ್ತು ನೀರಿನ ಸಂಪರ್ಕ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸೌಕರ್ಯಗಳ ಪುನರ್ ಸ್ಥಾಪನಾ ಕಾರ್ಯ ಆರಂಭವಾಗಿದೆ.