ಆತ್ಮಹತ್ಯೆ ಮಾಡಿಕೊಂಡ SL Dharmegowda ನನ್ನ ಆಪ್ತ ಸ್ನೇಹಿತ: ಸಿದ್ದರಾಮಯ್ಯ

ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಬಲತ್ಕಾರವಾಗಿ ಸಭಾಪತಿ‌ ಪೀಠದಲ್ಲಿ ಕೂರಿಸಿದ್ದರು. ಅದು ಧರ್ಮೇಗೌಡರಿಗೆ ಅವರಿಗೆ ಇಷ್ಟ ಇರಲಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

Written by - Yashaswini V | Last Updated : Dec 29, 2020, 02:25 PM IST
  • ಧರ್ಮೇಗೌಡರ ತಂದೆ ಎಸ್.ಆರ್ ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತ: ಸಿದ್ದರಾಮಯ್ಯ
  • ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದ ಧರ್ಮೇಗೌಡ
  • ಚರ್ಚೆ ಮಾಡದೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವ ರಾಜ್ಯ ಸರ್ಕಾರ
ಆತ್ಮಹತ್ಯೆ ಮಾಡಿಕೊಂಡ SL Dharmegowda ನನ್ನ ಆಪ್ತ ಸ್ನೇಹಿತ: ಸಿದ್ದರಾಮಯ್ಯ title=
File Image

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು.‌ ಅವರ ತಂದೆಯವರ ಕಾಲದಿಂದಲೂ ಆ ಕುಟುಂಬದವರ ಪರಿಚಯ ಇತ್ತು. ಧರ್ಮೇಗೌಡರ ತಂದೆ ಎಸ್.ಆರ್ ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಧರ್ಮೇಗೌಡ ತಳಮಟ್ಟದಿಂದ‌ ರಾಜಕರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು.‌ ರೈತಪರ, ಜನಪರ ಕಾಳಜಿಯುಳ್ಳ ವ್ತಕ್ತಿಯಾಗಿದ್ದ ಧರ್ಮೇಗೌಡ ನಮನ್ನು ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಉಪ ಸಭಾಪತಿಯಾಗಿದ್ದಎಸ್.ಎಲ್. ಧರ್ಮೇಗೌಡ (SL Dharmegowda) ಅವರನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಬಲತ್ಕಾರವಾಗಿ ಸಭಾಪತಿ‌ ಪೀಠದಲ್ಲಿ ಕೂರಿಸಿದ್ದರು. ಅದು ಧರ್ಮೇಗೌಡ ಅವರಿಗೆ ಇಷ್ಟ ಇರಲಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:  ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ

ಇದೇ ವೇಳೆ ಕೊರೊನಾ ರೂಪಾಂತರ ‌ಪತ್ತೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಜನರಲ್ಲಿ ಇರೋ ಆತಂಕ ದೂರ ಮಾಡಬೇಕು. ಬ್ರಿಟನ್ (Britain) ನಿಂದ ಬಂದ‌ ಮೇಲೆ ಹುಡುಕೋದಲ್ಲ. ಬರೋ ಮೊದಲೇ ವಿಮಾನ ನಿಲ್ದಾಣ ದಲ್ಲಿ ಪರೀಕ್ಷೆ ಮಾಡಿ, ಕ್ವಾರಂಟೈನ್ ಮಾಡಬೇಕಿತ್ತು. ಬಂದ ಮೇಲೆ ಹುಡುಕೋದಲ್ಲ ಜನರ ಆತಂಕ ದೂರ ಮಾಡಬೇಕು ಎಂದು ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಂದಿದ್ದಾರೆ. ವಿಧಾನಸಭೆ, ಪರಿಷತ್ ನಲ್ಲಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡದೇ ಆತುರವಾಗಿ ತಂದಿದ್ದಾರೆ. ಅಂತಹ ಅಗತ್ಯ ಇರಲಿಲ್ಲ.
ಸಾವಿರಾರು ಕುಟುಂಬಗಳು ಹೈನುಗಾರಿಕೆಯಲ್ಲಿ  ತೊಡಗಿವೆ. ಇವರುಗಳಿಗೆ ತೊಂದರೆ ಆಗಲಿದೆ 47 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ಭಾಗಿ ಆಗಿವೆ. ಕೃಷಿ (Agriculture) ಕ್ಷೇತ್ರ, ಚರ್ಮ ಉದ್ಯಮ ಮೇಲೆ ಪರಿಣಾಮ ಬೀಳಲಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಯಸ್ಸಾದ ಹಸು ಗಂಡು ಕರುಗಳನ್ನು ಏನು ಮಾಡಬೇಕು : ಸಿದ್ದರಾಮಯ್ಯ

ನಾವು ಹಾಕೋ ಚಪ್ಪಲಿಗಳು, ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗ್ ಗಳು ಚರ್ಮದಿಂದ ಆಗೋದು. ಇದರಿಂದ ಚರ್ಮ  ಉದ್ಯಮದ ಮೇಲೆ ತೊಂದರೆ ಆಗಲಿದೆ. ಲಿಡ್ಕರ್ ಮುಚ್ಚಬೇಕಾಗುತ್ತದೆ ಎಂದರು.

ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ. ಅವರ ಸುಳ್ಳುಗಳಿಗೆ ನಾನ್ಯಾಕೆ ರಿಯಾಕ್ಟ್ ಮಾಡಲಿ. ಅವರು ದುರುದ್ದೇಶಪೂರವಾಗಿ ಮಾತಾಡ್ತಾರೆ ಅದಕ್ಕೆಲ್ಲ ನಾನ್ಯಾಕೆ ರಿಯಾಕ್ಟ್ ಮಾಡಲಿ ಎಂದು ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪಗಳಿಗೆ ಉತ್ತರಿಸಲು ನಿರಾಕರಿಸಿದರು.

ಇದನ್ನೂ ಓದಿ:ಪರಿಷತ್ ಜಟಾಪಟಿಯಿಂದ ನೊಂದಿದ್ದರೆ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರು..? ಶುರುವಾಗಿದೆ ಹೀಗೊಂದು ರಾಜಕೀಯ ಚರ್ಚೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News