ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಭೇಟಿ: ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ

 "ಫ್ಲ್ಯಾಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ಜನರು ಹೋಟೇಲ್‌ಗಳಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಶ್ವತ್ಥ್‌ ನಾರಾಯಣ್‌ಗೆ ಬೆಂಗಳೂರು ವಲಯವಾರು ಉಸ್ತುವಾರಿ ನೀಡಲಾಗಿದೆ. ಆದರೆ ಅವರು ಇಂದು ವಿದೇಶ ಪ್ರವಾಸದಲ್ಲಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅವರು ಎಷ್ಟು ಅನುದಾನ ನೀಡಿದ್ದಾರೆ" ಎಂದು ಪ್ರಶ್ನಿಸಿದರು. 

Written by - Bhavishya Shetty | Last Updated : May 22, 2022, 04:47 PM IST
  • ಮಳೆ ಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಭೇಟಿ
  • ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ
  • ಜನರ ಸಂಕಷ್ಟಗಳನ್ನು ಆಲಿಸಿದ ಹೆಚ್‌ಡಿಕೆ
ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಭೇಟಿ: ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ title=
CM Kumaraswamy

ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಅನೇಕ ಕಡೆ ಕಳಪೆ ಕಾಮಗಾರಿ‌ ನಡೆದಿರುವುದು ಕಂಡುಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಇದನ್ನು ಓದಿ: ವರದಕ್ಷಿಣೆ ಪಡೆದಿದ್ರಾ ದಕ್ಷಿಣ ಭಾರತದ ಈ ಖ್ಯಾತ ನಟ: ಅಳಿಯನ ಬಗ್ಗೆ ಮಾವ ಹೇಳಿದ್ದೇನು?

ಪಂತರಪಾಳ್ಯ, ನಾಯಂಡಹಳ್ಳಿ ಮೆಟ್ರೋ ಲೇ-ಔಟ್, ರಾಜರಾಜೇಶ್ವರಿ ನಗರ ಕ್ಷೇತ್ರದ ನಾಯಂಡಹಳ್ಳಿ ಸರ್ಕಲ್‌ನ ತಗ್ಗು ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಅವರು, ಜನರ ಸಂಕಷ್ಟಗಳನ್ನು ಆಲಿಸಿದರು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಫ್ಲ್ಯಾಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ಜನರು ಹೋಟೇಲ್‌ಗಳಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಶ್ವತ್ಥ್‌ ನಾರಾಯಣ್‌ಗೆ ಬೆಂಗಳೂರು ವಲಯವಾರು ಉಸ್ತುವಾರಿ ನೀಡಲಾಗಿದೆ. ಆದರೆ ಅವರು ಇಂದು ವಿದೇಶ ಪ್ರವಾಸದಲ್ಲಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅವರು ಎಷ್ಟು ಅನುದಾನ ನೀಡಿದ್ದಾರೆ" ಎಂದು ಪ್ರಶ್ನಿಸಿದರು. 

"ಎಲ್ಲೆಡೆಯೂ ಕಳಪೆ‌ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ‌ ಸಿಎಂ ದಾವೋಸ್ ಪ್ರವಾಸದಲ್ಲಿದ್ದಾರೆ. ಯಾವ ಮುಖ‌ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ವಿದೇಶಿ ಕಂಪನಿಗಳನ್ನು ಕೇಳುತ್ತಾರೆ. ಇಲ್ಲಿ ಉದ್ಯಮಿಗಳು ದಿನ ಬೆಳಗಾದರೆ ಸರ್ಕಾರಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ" ಎಂದು ಅವರು ಚಾಟಿ ಬೀಸಿದರು.‌ 

ಶಾಸಕರಿಂದ ತಾರತಮ್ಯ ಧೋರಣೆ ನಡೆಯುತ್ತಿದೆ. ವೋಟ್‌ ಹಾಕಿದವರಿಗೊಂದು, ಹಾಕದವರಿಗೊಂದು ರೀತಿ ಮಾಡಲಾಗುತ್ತಿದೆ. ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.

ಇದನ್ನು ಓದಿ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಏಳು ಬಾರಿ ದೆಹಲಿಗೆ ದಂಡೆತ್ತಿ ಹೋಗಿದ್ದಾರೆ. ಆದರೆ ಯಾವುದೂ ಕೆಲಸ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News