ಅಪರಾಧ ಗುರುತಿಸುವಲ್ಲಿ ವಿಧಿ ವಿಜ್ಞಾನ ತಜ್ಞರು ಮುಖ್ಯ; ಎನ್.ಎಫ್.ಎಸ್ ವಿಶ್ವವಿದ್ಯಾಲಯ ಬೆಳವಣಿಗೆಗೆ ಆದ್ಯತೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರೀಯೆ ಮುಖ್ಯವಾಗಿದೆ. ಬೆರಳಚ್ಚು ಸೇರಿದಂತೆ ವಿಧಿ ವಿಜ್ಞಾನದ ತಜ್ಞರು ಬಹು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕೇಂದ್ರ ಸಕಾರವು ಅಗತ್ಯ ಸಹಾಯ ಮತ್ತು ಪ್ರೋತ್ಸಾಹವನ್ನು ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

Written by - Manjunath N | Last Updated : Dec 2, 2023, 03:50 PM IST
  • ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಪಿಗಳ ತನಿಖೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಅಗತ್ಯವಿದೆ.
  • ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ವ್ಯಾಸಾಂಗ ಮಾಡುವ ಪದವಿದರರು ಸಮರ್ಥವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಾರೆ.
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೃಹ ಇಲಾಖೆಯ ಮೂಲಕ ವಿಧಿ ವಿಜ್ಞಾನ ಪದವಿಧರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಪರಾಧ ಗುರುತಿಸುವಲ್ಲಿ ವಿಧಿ ವಿಜ್ಞಾನ ತಜ್ಞರು ಮುಖ್ಯ; ಎನ್.ಎಫ್.ಎಸ್ ವಿಶ್ವವಿದ್ಯಾಲಯ ಬೆಳವಣಿಗೆಗೆ ಆದ್ಯತೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ title=

ಧಾರವಾಡ: ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರೀಯೆ ಮುಖ್ಯವಾಗಿದೆ. ಬೆರಳಚ್ಚು ಸೇರಿದಂತೆ ವಿಧಿ ವಿಜ್ಞಾನದ ತಜ್ಞರು ಬಹು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕೇಂದ್ರ ಸಕಾರವು ಅಗತ್ಯ ಸಹಾಯ ಮತ್ತು ಪ್ರೋತ್ಸಾಹವನ್ನು ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

ಅವರು ವಾಲ್ಮೀ ಕಟ್ಟಡದಲ್ಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಯ ಧಾರವಾಡ ಹಾಗೂ ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಧಾರವಾಡ ಜಂಟಿಯಾಗಿ ಆಯೋಜಿಸಿದ್ದ ಡಿ.ಎನ್.ಎ ಫಾರೆನ್ಸಿಕ್ಸ್‍ನಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತ ನವೆಂಬರ್ 29 ಮತ್ತು 30 ರಂದು (ಎರಡು ದಿನಗಳ) ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ (ನ.30)ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಪಿಗಳ ತನಿಖೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಅಗತ್ಯವಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ವ್ಯಾಸಾಂಗ ಮಾಡುವ ಪದವಿದರರು ಸಮರ್ಥವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೃಹ ಇಲಾಖೆಯ ಮೂಲಕ ವಿಧಿ ವಿಜ್ಞಾನ ಪದವಿಧರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ 5 ಸಲ ಟ್ರೋಫಿ ಗೆದ್ದಿದ್ದು ಕೇವಲ ಒಂದೇ ತಂಡ: ಯಾವುದದು ಗೊತ್ತಾ?

ಧಾರವಾಡದಲ್ಲಿ ಇರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಡಿ.ಎನ್.ಎ. ಕೇಂದ್ರಗಳು ಉತ್ತಮ ಕಾರ್ಯ ಮಾಡುತ್ತಿದ್ದು, ಭವಿಷ್ಯತಿನ್ನಲ್ಲಿ ರಾಷ್ಟ್ರದ ಬೇಡಿಕೆಗಳನ್ನು ಪೂರ್ಣಗೊಳಿಸುತ್ತವೆ ಎಂದು ಅವರು ಹೇಳಿದರು.

ಎನ್ ಎಫ್ ಎಸ್‍ಯು ಕ್ಯಾಂಪಸ್‍ನ ನಿರ್ದೇಶಕ ಡಾ.ಮಂಜುನಾಥ ಘಾಟೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎನ್ ಎಫ್ ಎಸ್‍ಯು ಧಾರವಾಡದ ಸುದ್ದಿಪತ್ರದ ಮೊದಲ ಆವೃತ್ತಿಯನ್ನು ಸಚಿವರಾದ ಪ್ರಹ್ಲಾದ ಜೋಶಿ ಅವರು ಬಿಡುಗಡೆ ಮಾಡಿದರು.

ಅಂತರಾಷ್ಟ್ರೀಯ ಸಮೇಳನ: ಈ ಸಮ್ಮೇಳನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು, ರಾಜ್ಯ ಮತ್ತು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಆಹ್ವಾನಿತ ಅತಿಥಿಗಳು ಸೇರಿದಂತೆ 250 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ನ್ಯಾಯಶಾಸ್ತ್ರ ಮತ್ತು ವೈದ್ಯಕೀಯ ಕಾನೂನು ಪ್ರಕರಣಗಳಲ್ಲಿ ಡಿ.ಎನ್.ಎ ವಿಶ್ಲೇûಷಣೆ ಬಹುಮುಖಿ ಅನ್ವಯಗಳೂ, ವೈಲ್ಡ್ ಲೈಪ್ ಡಿ.ಎನ್‍ಎ ಫಾರೆನ್ಸಿಕ್ಸ್, ಫಾರೆನ್ಸಿಕ್ಸ್ ಜೆನಟಿಕ್ಸ್‍ನಲ್ಲಿ ಜೆನೆಟಿಕ್ ಮಾರ್ಕರ್‍ಗಳ ಅಪ್ಲಿಕೇಶನ್‍ಗಳು, ಶ್ರೀಲಂಕಾದ ಸನ್ನಿವೇಶದಿಂದ ಒಳನೋಟಗಳು, ನೇಪಾಳದಲ್ಲಿ ಡಿ.ಎನ್.ಎ ಫಾರೆನ್ಸಿಕ್ಸನಲ್ಲಿನ ಇತ್ತೀಚಿನ ಪ್ರವೃತ್ತಿ, ಡಿ.ಎನ್.ಎ ಫಾರೆನ್ಸಿಕ್ಸ್ನಲ್ಲಿ ನೆಕ್ಸ್ಟ್ ಜನರೇಶನ್ ಸಿಕ್ವೆನ್ಸಿಂಗ್ ಅಪ್ಲಿಕೇಶನ ಇತ್ಯಾದಿ ವಿಷಯಗಳ ಕುರಿತು ಭಾರತ, ನೇಪಾಳ, ಶ್ರೀಲಂಕಾ ಮತ್ತು ಅಮೇರಿಕಾದ ಪರಿಣಿತ ವಿಜ್ಞಾನಿಗಳು ವಿಶೇಷ ಉಪನ್ಯಾಸಗಳನ್ನು ನೀಡಿದರು.

ಇದನ್ನೂ ಓದಿ: ಹುಸಿ ಬಾಂಬ್ ಬೆದರಿಗೆ, ಯಾರು ಮಾಡಿದ್ದಾರೆ ಪತ್ತೆ ಹಚ್ಚುತ್ತೇವೆ

ಈ ಸಮ್ಮೇಳನದಲ್ಲಿ ಯುವ ವಿಜ್ಞಾನಿಗಳಲ್ಲಿ ವೈಜ್ಞಾನಿಕ ಜ್ಞಾನ ವಿನಿಮಯವನ್ನು ಉತ್ತೇಜಿಸಲು ಮೌಖಿಕ ಮತ್ತು ಪೋಸ್ಟರ್ ಮೇಕಿಂಗ್ ಸ್ಪರ್ದೆಯನ್ನು ನಡೆಸಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News