ದಾವಣಗೆರೆ : ವಿಧಾನಸಭೆ ಚುನಾವಣೆ ಮುನ್ನವೇ ಮುಂದಿನ ‘ಮುಖ್ಯಮಂತ್ರಿ ಗಾದಿ’ ವಿಚಾರ ಕಾಂಗ್ರೆಸ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದರೆ, ಅತ್ತ ಬೆಣ್ಣೆ ನಗರಿಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಆಗಸ್ಟ್ 3ರಂದು ನಡೆಯಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಅಮೃತ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇಂದು ಅಮೃತ ಮಹೋತ್ಸವ ಸಮಿತಿ ನಾಯಕರಾದ ಮಾಜಿ ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್ ಎಂ ರೇವಣ್ಣ, ಬಿಎಲ್ ಶಂಕರ್, ಶಾಸಕ ಬೈರತಿ ಸುರೇಶ್ ಹಾಗೂ ಸ್ಥಳೀಯ ಮುಖಂಡರು ಅಮೃತ ಮಹೋತ್ಸವದ 'ಲೋಗೋ' ಅನಾವರಣ ಮಾಡಿದ್ದಾರೆ.
ಇದನ್ನೂ ಓದಿ : Siddaramaiah : ಸಿದ್ದರಾಮಯ್ಯ 'ಅಮೃತ ಮಹೋತ್ಸವ' : 50 ಎಕರೆ ಜಾಗದಲ್ಲಿ ಬೃಹತ್ ವೇದಿಕೆ!
ಲೋಗೋದಲ್ಲಿ ಸಿದ್ದರಾಮಯ್ಯ ದೊಡ್ಡ ಪೋಟೋ ಹಾಗೂ 2022 ಹಾಗೂ ಸಿದ್ದರಾಮಯ್ಯ ಹೆಸರು ಹೈಲೈಟ್ ಮಾಡಲಾಗಿದೆ.
ಕಾರ್ಯಕ್ರಮಕ್ಕೆ 8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ, ಕಾರ್ಯಕ್ರಮ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಾಹನಗಳು ಹಾಗೂ ಜನರ ಸಂಚಾರ, ಮುಖ್ಯ ವೇದಿಕೆ, ಆಸನಗಳು ಸೇರಿದಂತೆ ಪ್ರಮುಖ ಸಿದ್ಧತೆಗಳ ಪರಿಶೀಲನೆ ಮಾಡಿದರು.
ಅಮೃತ ಮಹೋತ್ಸವ ಸಮಿತಿ ನಾಯಕರಾದ ಮಾಜಿ ಸಚಿವರಾದ ಎಚ್ ಸಿ ಮಹದೇವಪ್ಪ, ಎಚ್ ಎಂ ರೇವಣ್ಣ, ಬಿಎಲ್ ಶಂಕರ್, ಶಾಸಕ ಬೈರತಿ ಸುರೇಶ್ ಹಾಗೂ ಸ್ಥಳೀಯ ಮುಖಂಡರು ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದರು.
ಇದನ್ನೂ ಓದಿ : DK Shivakumar : 'ಒಬ್ಬ ಹೋಮ್ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ'
ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ನಾಲ್ಕು ಲಕ್ಷ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲು ಅಮೃತ ಮಹೋತ್ಸವ ಸಮಿತಿ ನಿರ್ಧರಿಸಿದೆ. ರಾಹುಲ್ ಗಾಂಧಿ ಮತ್ತಿತರ ಗಣ್ಯರು ಕಾರ್ಯಕ್ರಮಕ್ಕೆ ಬರಲು ಎರಡು ಹೆಲಿಪ್ಯಾಡ್ಗಳು ಸಿದ್ಧವಾಗುತ್ತಿದೆ.
ಐದು ಲಕ್ಷ ಮಂದಿಗೆ ಪಲಾವ್, ಮೊಸರನ್ನ ಮತ್ತು ಸಿಹಿ ತಿಂಡಿಯ ಭೋಜನ ವ್ಯವಸ್ಥೆ, ಆರು ಲಕ್ಷ ಮಂದಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಳೆ ಬಂದರೆ ಯಾವುದೇ ಸಮಸ್ಯೆ ಆಗದಂತೆ ಪೆಂಡಾಲ್ ವ್ಯವಸ್ಥೆ ಮಾಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.