ಕಲ್ಬುರ್ಗಿ: ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಖಮರುಲ್ಲಾ ಇಸ್ಲಾಂ ಇಂದು ಬೆಳಿಗ್ಗೆ 10:30ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಪ್ರಸ್ತುತ ಕೇರಳ ಕಾಂಗ್ರೇಸ್ ಉಸ್ತುವಾರಿ ಆಗಿದ್ದ ಖಮರುಲ್ಲಾ ಇಸ್ಲಾಂ, ಕಲಬುರ್ಗಿಯ ಉತ್ತರ ಕ್ಷೇತ್ರದಲ್ಲಿ ಸತತ ಆರು ಬಾರಿ ಶಾಸಕರಾಗಿದ್ದರು. ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮೊದಲ ಮೂರು ವರ್ಷ ಪೌರಾಡಳಿತ ಸಚಿವರಾಗಿದ್ದರು. ಅಲ್ಲದೆ ರಾಜ್ಯ ಸರ್ಕಾರದಲ್ಲಿ ವಸತಿ, ಕಾರ್ಮಿಕ, ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
69ವರ್ಷದ ಖಮರುಲ್ ಇಸ್ಲಾಂ, ಪತ್ನಿ ಕನೀಷ್ ಫಾತಿಮಾ, ದತ್ತು ಪುತ್ರ ಫಾರಾಜ್ ಉಲ್ ಇಸ್ಲಾಂ ಅವರನ್ನು ಅಗಲಿದ್ದಾರೆ. ಗುಲ್ಬರ್ಗಾ ಪಟ್ಟಣಕ್ಕೆ ಇಂದು ಸಂಜೆಯೊಳಗೆ ಪಾರ್ಥಿವ ಶರೀರ ಕೊಂಡೊಯ್ಯುವ ಸಾಧ್ಯತೆ ಇದ್ದು, ಗುಲ್ಬರ್ಗ ಪಟ್ಟಣದಲ್ಲೇ ಖಮರುಲ್ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ.