ಇನ್ನು ಮುಂದೆ ಜನ ಸಾಮಾನ್ಯರಿಗೆ ಎಂ ಸ್ಯಾಂಡ್ ಸುಗಮವಾಗಿ ಲಭ್ಯ!

ರಾಜ್ಯದಲ್ಲಿ ಮರಳಿನ ಅಭಾವ ನೀಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭ ಮತ್ತು ಕೈಗೆಟುವ ದರದಲ್ಲಿ ಎಂ. ಸ್ಯಾಂಡ್ ಪೂರೈಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದ ನಿಯಮಗಳನ್ನು ಪರಿಪಾಲಿಸುವಂತೆ ತಮ್ಮ ಉದ್ಯಮ ವಲಯಕ್ಕೆ ಸೂಚಿಸಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಮತ್ತು ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಹೇಳಿದೆ.

Written by - Manjunath Hosahalli | Edited by - Manjunath N | Last Updated : Mar 23, 2023, 06:07 PM IST
  • ಅಕ್ಕ-ಪಕ್ಕದಲ್ಲಿರುವ ಗಣಿಗುತ್ತಿಗೆ ಪ್ರದೇಶಗಳನ್ನು ಸಂಯೋಜಿಸಲು ಹಾಗೂ ನಡುವೆ ಇರುವ ಖಾಲಿ ಜಾಗಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದ್ದು,
  • ಪಟ್ಟಾ ಜಾಗದಲ್ಲಿ ಗಣಿಗುತ್ತಿಗೆ ನಿಯಮಗಳನ್ನು ಸರಳೀಕರಿಸಲಾಗಿದೆ
  • ಭೌಗೋಳಿಕವಾಗಿ ಬೇರೆ-ಬೇರೆಯಾಗಿದ್ದ ನಿಯಮಗಳನ್ನು ತೆಗೆದು “ಒಂದು ರಾಜ್ಯ-ಒಂದು ನಿಯಮ“ ಜಾರಿಗೆ ತಂದಿರುವುದು ಪ್ರಮುಖ ಬೆಳವಣಿಗೆ
ಇನ್ನು ಮುಂದೆ ಜನ ಸಾಮಾನ್ಯರಿಗೆ ಎಂ ಸ್ಯಾಂಡ್ ಸುಗಮವಾಗಿ ಲಭ್ಯ!  title=

ಬೆಂಗಳೂರು: ರಾಜ್ಯದಲ್ಲಿ ಮರಳಿನ ಅಭಾವ ನೀಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭ ಮತ್ತು ಕೈಗೆಟುವ ದರದಲ್ಲಿ ಎಂ. ಸ್ಯಾಂಡ್ ಪೂರೈಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದ ನಿಯಮಗಳನ್ನು ಪರಿಪಾಲಿಸುವಂತೆ ತಮ್ಮ ಉದ್ಯಮ ವಲಯಕ್ಕೆ ಸೂಚಿಸಲಾಗಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಮತ್ತು ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಹೇಳಿದೆ.

ಇಂದು ಪ್ರೆಸ್ ಕ್ಲಬ್ ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ಅಧ್ಯಕ್ಷ ಡಾ. ರವಿಂದ್ರ ಶೆಟ್ಟಿ ಬಜಗೋಳಿ, ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರಿ ಅಧ್ಯಕ್ಷ ಬಿ. ಉಮಾಶಂಕರ್, ಸರ್ಕಾರದ ನಿಯಮಗಳಿಂದ ರಾಜಧನ ಸೋರಿಕೆ ತಡೆಗಟ್ಟಿ, ಕಾನೂನುಬದ್ದ ಗಣಿಗಾರಿಕೆ ನಡೆಸಲು ಮತ್ತಷ್ಟು ಅವಕಾಶ ಕಲ್ಪಿಸಿದಂತಾಗಿದೆ ಎಂದರು.

ಇದನ್ನೂ ಓದಿ: Video Viral: ಮೈದಾನದಲ್ಲಿ ಈ ಆಟಗಾರನನ್ನು ನಿಂದಿಸಿದ ರೋಹಿತ್! ಮತ್ತೆ ಮತ್ತೆ ಈ ರೀತಿ ವರ್ತಿಸುತ್ತಿರೋದೇಕೆ ನಾಯಕ?

ಡಾ. ರವಿಂದ್ರ ಶೆಟ್ಟಿ ಬಜಗೋಳಿ ಮಾತನಾಡಿ 2016ಕ್ಕಿಂತ ಮುಂಚೆ ಗಣಿಗುತ್ತಿಗೆಗೆ ಅರ್ಜಿ ಸಲ್ಲಿಸಿ ಬಾಕಿ ಇರುವ 5,000ದಷ್ಟು ಅರ್ಜಿಗಳಿಗೆ ಕಾನೂನು ಪ್ರಕಾರ ಗಣಿಗುತ್ತಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎಂ-ಸ್ಯಾಂಡ್ ಕ್ರಷರ್ ಘಟಕ ಪ್ರಾರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ, ಎಂ-ಸ್ಯಾಂಡ್ ಕ್ರಷರ್ ಘಟಕ ಹೊಂದಿರುವವರು ಸದರಿ ಕ್ರಷರ್ ಘಟಕದಿಂದ 30 ಕಿ. ಮೀ. ವ್ಯಾಪ್ತಿಯೊಳಗೆ ಎಂ- ಸ್ಯಾಂಡ್ ಉತ್ಪಾದಿಸುವುದಕ್ಕೆ ಹೊಸದಾಗಿ ಗಣಿಗುತ್ತಿಗೆ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಎಂ.ಸ್ಯಾಂಡ್ ಸುಗಮವಾಗಿ ದೊರೆಯಲು ಸಹಕಾರಿಯಾಗಲಿದೆ. ಜೊತೆಗೆ ಸರ್ಕಾರದ ನಿರ್ಮಾಣ ಕೆಲಸಗಳು, ಜನ ಸಾಮಾನ್ಯರಿಗೆ ಮನೆ ಕಟ್ಟಿಕೊಳ್ಳಲು ಸಹ ನೆರವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಅಪಘಾತ; ಯುವತಿ ಸಾವು

ಸಾಮಾನ್ಯ ಕಟ್ಟಡಕಲ್ಲು ಗಣಿಗುತ್ತಿಗೆ ಅವಧಿಯನ್ನು 20 ರಿಂದ 30 ವರ್ಷಗಳಿಗೆ ಹಾಗೂ  ಅಲಂಕಾರಿಕ ಕಲ್ಲಿನ ಗಣಿ ಗುತ್ತಿಗೆ 30 ವರ್ಷಗಳಿಂದ 50 ವರ್ಷಗಳಿಗೆ ವಿಸ್ತರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಗಣಿಗುತ್ತಿಗೆ ಪ್ರದೇಶದ ಗಡಿ ಬಾಂದುಗಳಲ್ಲಿ  ವ್ಯತ್ಯಾಸವಿದ್ದಲ್ಲಿ, ಅವುಗಳನ್ನು ಒಂದು ಬಾರಿ ಸರಿಪಡಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಅಕ್ಕ-ಪಕ್ಕದಲ್ಲಿರುವ ಗಣಿಗುತ್ತಿಗೆ ಪ್ರದೇಶಗಳನ್ನು ಸಂಯೋಜಿಸಲು ಹಾಗೂ ನಡುವೆ ಇರುವ ಖಾಲಿ ಜಾಗಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಪಟ್ಟಾ ಜಾಗದಲ್ಲಿ ಗಣಿಗುತ್ತಿಗೆ ನಿಯಮಗಳನ್ನು ಸರಳೀಕರಿಸಲಾಗಿದೆ. ಭೌಗೋಳಿಕವಾಗಿ ಬೇರೆ-ಬೇರೆಯಾಗಿದ್ದ ನಿಯಮಗಳನ್ನು ತೆಗೆದು “ಒಂದು ರಾಜ್ಯ-ಒಂದು ನಿಯಮ“ ಜಾರಿಗೆ ತಂದಿರುವುದು ಪ್ರಮುಖ ಬೆಳವಣಿಗೆ ಎಂದು ಡಾ. ರವಿಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಇದನ್ನೂ ಓದಿ: IND vs PAK: 7 ವರ್ಷಗಳ ನಂತರ ಭಾರತಕ್ಕೆ ಬರಲಿದೆ ಪಾಕಿಸ್ತಾನ ತಂಡ! ಮತ್ತೆ ನೋಡಬಹುದು ಬದ್ಧವೈರಿಗಳ ಕಾದಾಟ?

ಬಿ. ಉಮಾಶಂಕರ್ ಮಾತನಾಡಿ, ಕಳೆದ 40 ವರ್ಷಗಳಿಂದ ಬಾಕಿ ಉಳಿದಿದ್ದ ಶೇ 80 ರಷ್ಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು, ಬಾಕಿ ಬೇಡಿಕೆಗಳಿಗಾಗಿ ಮುಂಬರುವ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೊಸಿಯೇಷನ್ ನ, ಉಪಾಧ್ಯಕ್ಷ ಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಬೆಂಗಳೂರಿನ ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಮತ್ತು ಸ್ಟೋನ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಜಶೇಖರ್, ಉದ್ಯಮ ವಲಯದ ಆಶಾ ಪ್ರಸನ್ನ ಕುಮಾರ್, ರಾಜೇಶ್, ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News