ಬೆಂಗಳೂರು: ರಾಜ್ಯ ಸರ್ಕಾರ ಪಿ.ಎಸ್.ಐ ಆಕಾಂಕ್ಷಿಗಳಿಗೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಗುಡ್ ನ್ಯೂಸ್ ವೊಂದನ್ನು ನೀಡಿದೆ.ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಪೋಲಿಸ್ ಪಿ.ಎಸ್.ಐ ನೇಮಕಾತಿಗೆ ಇದ್ದ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿರುವ ಕುರಿತಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪೋಲಿಸ್ ಪಿ.ಎಸ್.ಐ ನೇಮಕಾತಿಗೆ ಇದ್ದ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ಹಾಗೂ ಪರಿಶಿಷ್ಟ ಅಭ್ಯರ್ಥಿಗಳಿಗೆ 32 ವಯಸ್ಸಿಗೆ ಹೆಚ್ಚಿಸಿ ಇಂದು ನಡೆದ ಸಚಿವ ಸಂಪುಟದಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ. ಇದು ಸದ್ಯದ ಹಾಗೂ ಮುಂದೆ ಕರೆಯಲಾಗುವ ನೇಮಕಾತಿಗೆ ಅನ್ವಯವಾಗಲಿದ್ದು ಸಾವಿರಾರು ಯವಕರಿಗೆ ಅನುಕೂಲವಾಗಲಿದೆ.
— Basavaraj S Bommai (@BSBommai) May 28, 2020
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ "ರಾಜ್ಯದಲ್ಲಿ ಪೋಲಿಸ್ ಪಿ.ಎಸ್.ಐ ನೇಮಕಾತಿಗೆ ಇದ್ದ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ಹಾಗೂ ಪರಿಶಿಷ್ಟ ಅಭ್ಯರ್ಥಿಗಳಿಗೆ 32 ವಯಸ್ಸಿಗೆ ಹೆಚ್ಚಿಸಿ ಇಂದು ನಡೆದ ಸಚಿವ ಸಂಪುಟದಲ್ಲಿ ತಿರ್ಮಾನ ಕೈಗೊಳ್ಳಲಾಗಿದೆ. ಇದು ಸದ್ಯದ ಹಾಗೂ ಮುಂದೆ ಕರೆಯಲಾಗುವ ನೇಮಕಾತಿಗೆ ಅನ್ವಯವಾಗಲಿದ್ದು ಸಾವಿರಾರು ಯುವಕರಿಗೆ ಅನುಕೂಲವಾಗಲಿದೆ."ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.