ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್... 'ಬಿಂದಾಸ್' ನಾಯಕಿ ಅರೆಸ್ಟ್‌ ಆಗ್ತಾರಾ!

Hansika Motwani Domestic Violence: ಪತಿಯ ಕುಟುಂಬಸ್ಥರು ನನ್ನ ಮತ್ತು ಗಂಡನ ಮಧ್ಯೆ ಬರುತ್ತಿದ್ದಾರೆ. ಅವರ ಮಾತು ಕೇಳಿ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ. ದುಬಾರಿ ಗಿಫ್ಟ್​ ಹಾಗೂ ಹಣ ನೀಡುವಂತೆ ನನಗೆ ಪೀಡಿಸುತ್ತಿದ್ದಾರೆ ಅಂತಾ ಮುಸ್ಕಾನ್ ಆರೋಪಿಸಿದ್ದಾರೆ.

Hansika Motwani: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಜೊತೆಗೆ ʼಬಿಂದಾಸ್‌ʼ ಆಗಿ ಕಾಣಿಸಿಕೊಂಡಿದ್ದ ಹನ್ಸಿಕಾ ಮೋಟ್ವಾನಿ ಸೌತ್ ಚಿತ್ರರಂಗದ ಪ್ರಮುಖ ನಟಿ. ಈ ನಟಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದಳು. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ ಕುರಿತು ಬಹಳ ಚರ್ಚೆಗೆ ಗ್ರಾಸವಾಗಿದ್ದರು. ಬಾಲಕಿಯಾಗಿರುವಾಗಲೇ ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆಂದು ಆರೋಪಿಸಲಾಗಿತ್ತು. ಇದೀಗ ಈ ನಟಿ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಅರೆಸ್ಟ್‌ ಆಗುವ ಸಂಕಷ್ಟ ಎದುರಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

31 ವರ್ಷದ ಹನ್ಸಿಕಾ ಮೋಟ್ವಾನಿ 2007ರಲ್ಲಿ ಹಿಮೇಶ್ ರೇಶಮಿಯಾರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅಂದು ಅವರ ದೈಹಿಕ ರೂಪಾಂತರವನ್ನ ಕಂಡು ಎಲ್ಲರೂ ಆಶ್ಚರ್ಯಗೊಂಡಿದ್ದರು. ಆಗಲೇ ಈ ನಟಿಯ ಬಗ್ಗೆ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದೆಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣವೆಂದು ಹೇಳಲಾಗಿತ್ತು.

2 /5

ಹನ್ಸಿಕಾ ವಿರುದ್ಧ ಇದೀಗ ಕೌಟುಂಬಿಕ ದೌರ್ಜನ್ಯದ ಕೇಸ್​ ದಾಖಲಾಗಿದೆ. ನಟಿಯ ವಿರುದ್ಧ ಅತ್ತಿಗೆ ಅಂದರೆ ಆಕೆಯ ಸಹೋದರ ಪ್ರಶಾಂತ್ ಅವರ ಹೆಂಡತಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್​ ಅವರು ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲಿಸಿದ್ದಾರೆ. ಹನ್ಸಿಕಾ ಸೇರಿದಂತೆ ಇಡೀ ಕುಟುಂಬದ ವಿರುದ್ಧವೂ ದೂರು ದಾಖಲಾಗಿದೆ. ಹನ್ಸಿಕಾ ಹಾಗೂ ಅವರ ತಾಯಿ ತಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ, ನನ್ನ ಹಾಗೂ ಗಂಡನ ನಡುವೆ ಪದೇ ಪದೇ ಜಗಳಕ್ಕೆ ಕಾರಣರಾಗುತ್ತಿದ್ದಾರೆಂದು ಆರೋಪಿಸಲಾಗಿದೆ. 

3 /5

ಪತಿ ಪ್ರಶಾಂತ್ ಮೋಟ್ವಾನಿ ಸೇರಿದಂತೆ ಅತ್ತೆ ಮೋನಾ, ನಾದಿನಿ ಹನ್ಸಿಕಾ ವಿರುದ್ಧ ಮುಸ್ಕಾನ್​ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಎಲ್ಲರ ವಿರುದ್ಧವೂ ಎಫ್​ಐಆರ್​ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಅಂದಹಾಗೆ ಮುಸ್ಕಾನ್​ ಮತ್ತು ಪ್ರಶಾಂತ್​ ಅವರು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. 2020ರಲ್ಲಿ ಇವರ ಮದುವೆ ನಡೆದಿತ್ತು. ಆದರೆ ಎರಡೇ ವರ್ಷದಲ್ಲಿ ಅಂದರೆ 2022ರಲ್ಲಿ ಈ ಜೋಡಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. 

4 /5

ಮುಸ್ಕಾನ್​ ಸಹ ಕಿರುತೆರೆ ಕಲಾವಿದೆಯಾಗಿದ್ದು, ಕೆಲವು ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆದವರು. ʼಥೋಡಿ ಖುಷಿ ಥೋಡಿ ಗಮ್ʼ ಸೀರಿಯಲ್​ ಮೂಲಕ ಇವರು ಖ್ಯಾತಿ ಪಡೆದವರು. ಇದೀಗ ʼಬಿಂದಾಸ್‌ʼ ನಟಿ ಮತ್ತು ಅವರ ಕುಟುಂಬಸ್ಥರ ವಿರುದ್ಧ ಮುಸ್ಕಾನ್‌ ಗಂಭೀರ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.   

5 /5

ಹಲವು ದಿನಗಳಿಂದ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಸ್ಥರು ವಂಚನೆ ಮಾಡಿದ್ದಾರೆ. ಪತಿಯ ಕುಟುಂಬಸ್ಥರು ನನ್ನ ಮತ್ತು ಗಂಡನ ಮಧ್ಯೆ ಬರುತ್ತಿದ್ದಾರೆ. ಅವರ ಮಾತು ಕೇಳಿ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ. ದುಬಾರಿ ಗಿಫ್ಟ್​ ಹಾಗೂ ಹಣ ನೀಡುವಂತೆ ನನಗೆ ಪೀಡಿಸುತ್ತಿದ್ದಾರೆ ಅಂತಾ ಮುಸ್ಕಾನ್ ಆರೋಪಿಸಿದ್ದಾರೆ. 2024ರ ಡಿಸೆಂಬರ್ 18ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯದ ಕೇಸ್​​ ದಾಖಲಿಸಿದ್ದು, ಇದೀಗ ಬೆಳಕಿಗೆ ಬಂದಿದೆ.