ಜನ್ಮದಿನದಂದು ಅನಂತಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಮಂಜೂರು ಮಾಡಿದ ಸರ್ಕಾರ

ಮಾಜಿ ಕೇಂದ್ರ ಸಚಿವ  ಶ್ರೀ ಅನಂತಕುಮಾರ್ ಅವರ ಜನ್ಮದಿನವಾದ ಜುಲೈ 22 ರಂದು (ದಾಖಲೆಗಳ ಪ್ರಕಾರದ ಜನ್ಮದಿನ - ನಿಜವಾದ ಜನ್ಮದಿನ ಸೆಪ್ಟೆಂಬರ್‌ 22) ಅವರ ಸ್ಮರಣಾರ್ಥ ಸಾಮಾಜಿಕ ಸೇವಾಕಾರ್ಯಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನಕ್ಕೆ 3 ಎಕರೆ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

Written by - Prashobh Devanahalli | Edited by - Manjunath N | Last Updated : Jul 22, 2022, 08:58 PM IST
  • ಶ್ರೀ ಅನಂತಕುಮಾರರು ಪ್ರತಿಪಾದಿಸಿದ ಸಸ್ಯಾಗ್ರಹ ಮತ್ತು ಹಸಿರು ಜೀವನ ಶೈಲಿಯ ಅನುಷ್ಠಾನ ಮತ್ತಿತರ ಚಟುವಟಿಕೆಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನವು ಈ ಭೂಮಿಯನ್ನು ಬಳಸಿಕೊಳ್ಳಲಿದೆ.
 ಜನ್ಮದಿನದಂದು ಅನಂತಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಮಂಜೂರು ಮಾಡಿದ ಸರ್ಕಾರ  title=
file photo

ಬೆಂಗಳೂರು: ಮಾಜಿ ಕೇಂದ್ರ ಸಚಿವ  ಶ್ರೀ ಅನಂತಕುಮಾರ್ ಅವರ ಜನ್ಮದಿನವಾದ ಜುಲೈ 22 ರಂದು (ದಾಖಲೆಗಳ ಪ್ರಕಾರದ ಜನ್ಮದಿನ - ನಿಜವಾದ ಜನ್ಮದಿನ ಸೆಪ್ಟೆಂಬರ್‌ 22) ಅವರ ಸ್ಮರಣಾರ್ಥ ಸಾಮಾಜಿಕ ಸೇವಾಕಾರ್ಯಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನಕ್ಕೆ 3 ಎಕರೆ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನೂ ಓದಿ: ಪೃಥ್ವಿ ಅಂಬರ್ ‘ದೂರದರ್ಶನ’ ಅಂಗಳದಿಂದ ಬಂತು ಫಸ್ಟ್ ಪೋಸ್ಟರ್

ಅನಂತಕುಮಾರ್ ಅವರ ಜನ್ಮಸ್ಥಳವಾದ ಹೆಗ್ಗನಹಳ್ಳಿಯಲ್ಲಿರುವ ಜಮೀನನ್ನು ಪ್ರತಿಷ್ಠಾನಕ್ಕೆ ನೀಡಿರುವ ವಿಷಯವನ್ನು ಜಲಸಂಪನ್ಮೂಲ ಖಾತೆ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರು ಅನಂತಪಥ ಮಾಸಪತ್ರಿಕೆಯ ೨೫ನೇ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ತಿಳಿಸಿದರು. 

ಶ್ರೀ ಅನಂತಕುಮಾರರು ಪ್ರತಿಪಾದಿಸಿದ ಸಸ್ಯಾಗ್ರಹ ಮತ್ತು ಹಸಿರು ಜೀವನ ಶೈಲಿಯ ಅನುಷ್ಠಾನ ಮತ್ತಿತರ ಚಟುವಟಿಕೆಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನವು ಈ ಭೂಮಿಯನ್ನು ಬಳಸಿಕೊಳ್ಳಲಿದೆ.

ಇದನ್ನೂ ಓದಿ: ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!

ರಾಜ್ಯಸರ್ಕಾರದ ಈ ಕೊಡುಗೆಗಾಗಿ ಅನಂತಕುಮಾರ್ ಪ್ರತಿಷ್ಠಾನದ ಪರವಾಗಿ ಡಾ. ತೇಜಸ್ವಿನಿ ಅನಂತಕುಮಾರ್ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ, ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್ ಅವರಿಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಅನಂತಕುಮಾರರ ವ್ಯಕ್ತಿತ್ವ-ಕರ್ತೃತ್ವ- ನೇತೃತ್ವಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿ ನಾಯಕತ್ವ ತರಬೇತಿ ನೀಡುವ ನಿಟ್ಟಿನಲ್ಲಿ ಈ ಕೊಡುಗೆ ಸಾರ್ಥಕವಾಗುವುದೆಂಬ ಆಶಯವನ್ನು ಅಧ್ಯಕ್ಷರಾದ ಡಾ. ಪಿ.ವಿ. ಕೃಷ್ಣಭಟ್ಟರು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸದಸ್ಯ ಶ್ರೀ ಪ್ರದೀಪ್ ಓಕ್, ಗ್ರಾಮೀಣ ವಿಶ್ವವಿದ್ಯಾಲಯದ ಕುಲಪತಿ  ಡಾ. ವಿಷ್ಣುಕಾಂತ ಚಟಪಲ್ಲಿ. ಅನಂತಪಥ ಪತ್ರಿಕೆಯ ಸಂಪಾದಕ ಶ್ರೀ ಟಿ.ಎಸ್. ಗೋಪಾಲ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News