ನಾನು ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತಿಲ್ಲ- ಸದಾನಂದಗೌಡರ ಟೀಕೆಗೆ HDK ತಿರುಗೇಟು

ನನ್ನದು ಡ್ರಾಮಾ ಕಣ್ಣೀರಲ್ಲ. ಕಣ್ಣೀರು ಹಾಕುವುದು ನಮ್ಮ ಕುಟುಂಬದ ಪೇಟೆಂಟ್ ಎಂದು ಕರೆದರೂ ಪರವಾಗಿಲ್ಲ. ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಟೀಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

Last Updated : Nov 28, 2019, 04:07 PM IST
ನಾನು ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತಿಲ್ಲ-  ಸದಾನಂದಗೌಡರ ಟೀಕೆಗೆ HDK ತಿರುಗೇಟು title=
File Photo

ಮೈಸೂರು: ನಿನ್ನೆ ಕೆ.ಆರ್ ಪೇಟೆಯ ಕಿಕ್ಕೇರಿಯಲ್ಲಿ ಮಗನ ಸೋಲನ್ನ ಕಂಡು ಕಣ್ಣೀರು ಹಾಕಿದ್ದಕ್ಕೆ ಟೀಕೆ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಮಾಡೋದೆ ಎರಡು ಕೆಲಸ ಒಂದು ಕಣ್ಣೀರು ಹಾಕೋದು ಮತ್ತೊಂದು ಭವಿಷ್ಯ ಹೇಳೋದು ಎಂದು ವ್ಯಂಗ್ಯವಾಡಿದ ಡಿ.ವಿ ಸದಾನಂದಗೌಡ(DV SadanandaGowda)ರ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ(HD Kumaraswamy), ನಾನು ನಿಮ್ಮಂತೆ ಎಲ್ಲದಕ್ಕೂ ಹಲ್ಲು ಬಿಟ್ಟುಕೊಂಡು ನಿಂತಿಲ್ಲ ಎಂದು ಕಿಡಿಕಾರಿದರು.

ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಸೋಮಶೇಖರ್ ಪರ ಧರ್ಮಾಪುರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡುತ್ತ ಕೇಂದ್ರ ಸಚಿವ ಸದಾನಂದಗೌಡರ ವಿರುದ್ದ  ಹರಿಹಾಯ್ದ ಅವರು, ನನ್ನದು ಡ್ರಾಮಾ ಕಣ್ಣೀರಲ್ಲ. ಕಣ್ಣೀರು ಹಾಕುವುದು ನಮ್ಮ ಕುಟುಂಬದ ಪೇಟೆಂಟ್ ಎಂದು ಕರೆದರೂ ಪರವಾಗಿಲ್ಲ. ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ. ನಿಮ್ಮ ಯೋಗ್ಯತೆಗೆ ಎಷ್ಟು ಹಳ್ಳಿಗೆ ಭೇಟಿ ಕೊಟ್ಟಿದ್ದೀರಾ.?. ನಮ್ಮ ಮನೆ ಮುಂದೆ ಎಷ್ಟುಬಡವರು ನಿಲ್ತಾರೆ.? ನಿಮ್ಮ ಮನೆ ಮುಂದೆ ಎಷ್ಟು ಜನ ನಿಲ್ತಾರೆ ಹೇಳಿ…? ನಮ್ಮ ಕಣ್ಣೀರು ಭಾವನಾತ್ಮಕ. ಬ ಡವರ ಕಷ್ಟ ನೋಡಿದ ತಕ್ಷಣ ಕಣ್ಣೀರು ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ವಿಶ್ವನಾಥ್ ಹೇಳಿದಂತೆ ನಾನು ನಡೆದುಕೊಂಡಿದ್ರೆ ನನ್ನ ಬಾಯಿಗೆ ಹುಳ ಬೀಳಲಿ!
ಇದೇ ವೇಳೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್(H Vishwanath) ವಿರುದ್ದ ಗುಡುಗಿದ ಹೆಚ್.ಡಿ. ಕುಮಾರಸ್ವಾಮಿ, ಕುರುಬ ಸಮಾಜದ ವಿಚಾರದಲ್ಲಿ ಯಾವತ್ತೂ ಅಗೌರವವಾಗಿ ಮಾತಾಡಿಲ್ಲ. ಹಾಗೆ ಮಾತನಾಡುವುದೂ ಇಲ್ಲ. ವಿಶ್ವನಾಥ್ ಹೇಳಿದಂತೆ ನಾನು ನಡೆದುಕೊಂಡಿದ್ರೆ ನನ್ನ ಬಾಯಿಗೆ ಹುಳ ಬೀಳಲಿ ಎಂದರು.

ಹುಣಸೂರು ಪ್ರತ್ಯೇಕ ಜಿಲ್ಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ವಿಶ್ವನಾಥ್ ಯಾವತ್ತೂ ನನ್ನ ಬಳಿ ಚರ್ಚೆ ಮಾಡಿಲ್ಲ. ಹತ್ತಾರು ಬಾರಿ ನನ್ನ ಜೊತೆ ತಿಂಡಿ ತಿಂದಿದ್ದಾರೆ. ಆದ್ರೆ ಈ ಬಗ್ಗೆ ಚರ್ಚಿಸಿಯೇ ಇಲ್ಲ. ಅವ್ರು ಕೆ.ಎಸ್.ಆರ್.ಟಿ.ಸಿ‌. ಸ್ಕ್ರಾಪ್ ಪದಾರ್ಥ ಖರೀದಿಗಾಗಿ ಅರ್ಜಿ ಹಿಡ್ಕೊಂಡು ಬಂದಿದ್ರು. ಮುಂಬಯಿಯವರಿಗೆ ಕೊಡಿಸಲು ಬಂದಿದ್ರು. ಅದನ್ನ ಹೊರತು ಪಡಿಸಿದ್ರೆ ನನ್ನ ಬಳಿ ಇನ್ಯಾವ  ವಿಚಾರ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಎಂಎಲ್ಎ ಸಿಕ್ಕಿಬಿದ್ದಿದ್ದಾರಲ್ಲ, ಆ ವಿಚಾರ ಯೋಚಿಸಲೂ ಅಸಹ್ಯ ಆಗುತ್ತೆ. ಅರವಿಂದ ಲಿಂಬಾವಳಿ ವಿಚಾರದಲ್ಲಿ ಸ್ಟೇ ತಂದ್ರು. ಇದೀಗ ಮತ್ತೊಬ್ಬ ಶಾಸಕನ ರಾಸಲೀಲೆ ಹೊರಬಂದಿದೆ. ನಾವು ಇದನ್ನೆಲ್ಲಾ ಸಹಿಸಲ್ಲ ಎಂದು ಹೆಚ್.ಡಿಕೆ ಕಿಡಿಕಾರಿದರು.
 

Trending News