ನಟ ಸುದರ್ಶನ್ ನಿಧನಕ್ಕೆ ಎಚ್ ಡಿ ಡಿ ತೀವ್ರ ಸಂತಾಪ

ಒಬ್ಬ ಒಳ್ಳೆಯ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದು ಕೊಂಡಿದೆ- ದೇವೇಗೌಡ

Last Updated : Sep 8, 2017, 04:41 PM IST
ನಟ ಸುದರ್ಶನ್ ನಿಧನಕ್ಕೆ ಎಚ್ ಡಿ ಡಿ ತೀವ್ರ ಸಂತಾಪ title=

ಬೆಂಗಳೂರು: ಇಂದು ಮಧ್ಯಾಹ್ನ ಮೃತಪಟ್ಟ ಹಿರಿಯ ನಟ ಎಸ್.ಆರ್.ಸುದರ್ಶನ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುದರ್ಶನ್ ಒಬ್ಬ ಅದ್ಭುತ ಕಲಾವಿದ. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಉತ್ತಮ ನಟನೆ ಮಾಡಿ ಸಿನಿ ಪ್ರಿಯರನ್ನು ರಂಜಿಸಿದ್ದಾರೆ. 

ಒಬ್ಬ ಹಿರಿಯ ಕಲಾವಿದನನ್ನು ಸಿನಿಮಾರಂಗ ಇಂದು ಕಳೆದು ಕೊಂಡಿದೆ ಎಂದು ಹಿರಿಯ ನಟ ಸುದರ್ಶನ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ತುಂಬಲಿ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.

Trending News