ಬರಗಾಲದಲ್ಲೂ ಮಿಶ್ರ ಬೆಳೆ ಬೆಳೆದು ಸಾಧನೆಗೈದ ರೈತ

ಬರಗಾಲದಲ್ಲೂ ಮಿಶ್ರ ಬೆಳೆ ಬೆಳೆದು ಸಾಧನೆಗೈದ ಜಿಲ್ಲೆಯ ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ರೈತರಾದ ಮುದುಕಪ್ಪ ದೇವರ ಹಾಗೂ ಅವರ ಮಗ ವಿನೋದ ದೇವರ ಎಂಬುವವರು ಇತರ ರೈತರಿಗೆ ಮಾದರಿಯಾಗಿದ್ದಾರೆ.

Written by - Manjunath N | Last Updated : Jan 23, 2024, 11:38 PM IST
  • ಬರಗಾಲದಲ್ಲೂ ಕೃಷಿ ಹೊಂಡದ ನೀರು ಬಳಸಿ ಮೂರೂ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದಿರುವುದು ಅಪರೂಪದ ಸಾಧನೆ.
  • ಎಲ್ಲ ರೈತರು ಈ ರೀತಿ ಮಿಶ್ರಬೆಳೆ ಬೆಳೆದಲ್ಲಿ ಆದಾಯ ದ್ವಿಗುಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ
  • ಕೃಷಿ ವಿಸ್ತರಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ.ರವಿ ಅವರ ರೈತರ ಸಾಧನೆಯನ್ನು ಕೊಂಡಾಡಿದ್ದಾರೆ.
ಬರಗಾಲದಲ್ಲೂ ಮಿಶ್ರ ಬೆಳೆ ಬೆಳೆದು ಸಾಧನೆಗೈದ ರೈತ title=

ಕೊಪ್ಪಳ : ಬರಗಾಲದಲ್ಲೂ ಮಿಶ್ರ ಬೆಳೆ ಬೆಳೆದು ಸಾಧನೆಗೈದ ಜಿಲ್ಲೆಯ ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ರೈತರಾದ ಮುದುಕಪ್ಪ ದೇವರ ಹಾಗೂ ಅವರ ಮಗ ವಿನೋದ ದೇವರ ಎಂಬುವವರು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಮುದುಕಪ್ಪ ದೇವರ ರವರು ಒಬ್ಬ ಪ್ರಗತಿಪರ ರೈತ ಹಾಗೂ ಉದ್ಯಮಿಯಾಗಿರುವ ಇವರು ಒಟ್ಟಾರೆ ನೂರಾರು ಎಕರೆ ಜಮೀನು ಹೊಂದಿದ್ದು, ಜೆ.ಸಿ.ಬಿ ಮಾಲೀಕರಾಗಿದ್ದಾರೆ. ಅಲ್ಲದೇ ತಮ್ಮದೇ ಸ್ವಂತ ಜೆ.ಸಿ.ಬಿ ಗ್ಯಾರೇಜ ಹೊಂದಿದ್ದಾರೆ. ಊರಿನ ಮುಖಂಡರಲ್ಲಿ ಒಬ್ಬರಾದ ಮುದುಕಪ್ಪ ದೇವರ ಹಾಗೂ ಮಗ ವಿನೋದ ದೇವರ ಇಬ್ಬರೂ ಇದೇ ಜಮೀನಿನಲ್ಲಿ ಪ್ರತಿ ವರ್ಷ ಮಳೆಯಾಶ್ರಯದಲ್ಲಿ ಕಡಲೆ, ಈರುಳ್ಳಿ, ಕೊತ್ತಂಬರಿ ಹಿಂಗಾರು ಜೋಳ, ಗೋಧಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ.

2023-24ನೇ ಸಾಲಿನಲ್ಲಿ ತೀವ್ರ ಬರಗಾಲವಿದ್ದರೂ 30 ಎಕರೆಗೂ ಹೆಚ್ಚು ಕಡಲೆ, 4 ಎಕರೆ ಸೂರ್ಯಕಾಂತಿ ಬೆಳೆದಿರುತ್ತಾರೆ. ಇದಲ್ಲದೇ 2.5 ಎಕರೆ ಜಮೀನಿನಲ್ಲಿ ಹಿಂಗಾರು ಜೋಳ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳನ್ನು ಒಟ್ಟಿಗೆ ಮಿಶ್ರ ಬೆಳೆಯಾಗಿ ಬೆಳೆದಿರುವುದೇ ಇವರ ಸಾಧನೆ.

ಇದನ್ನೂ ಓದಿ: 160 ಸ್ಕ್ರೀನ್‌ಗಳ ಮೇಲೆ ಶ್ರೀರಾಮಮಂದಿರ ಉದ್ಘಾಟನೆ ನೇರ ಪ್ರಸಾರ..! ಟಿಕೆಟ್‌ ದರ, ಮಾಹಿತಿ ಇಲ್ಲಿದೆ..

ಅಕ್ಟೋಬರ ತಿಂಗಳಿನಲ್ಲಿ ಡಬ್ಬಿ ಮೆಣಸಿನಕಾಯಿ ಜೊತೆ ನಾಸಿಕ ತಳಿಯ ಈರುಳ್ಳಿಯನ್ನು ನಾಟಿ ಮಾಡಿದ್ದಾರೆ. ನವಂಬರನಲ್ಲಿ ಒಂದು ಮಳೆಯಾದಾಗ ಸಾಲುಗಳ ಮಧ್ಯದಲ್ಲಿ ಹಿಂಗಾರು ಜೋಳವನ್ನು ಬಿತ್ತಿದ್ದಾರೆ. ಒಂದು ಸಾರಿ ಕೃಷಿ ಹೊಂಡದ ನೀರನ್ನು ಈ ಬೆಳೆಗಳಿಗೆ ರಕ್ಷಣಾತ್ಮಕವಾಗಿ ನೀರು ಹರಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಈ ಎಲ್ಲ ಬೆಳೆಗಳು ಕಟಾವಿಗೆ ಸಿದ್ದವಾಗಿದ್ದು, ಸುಮಾರು ರೂ. 3 ಲಕ್ಷ ಆದಾಯವನ್ನು ಅವರು ನಿರೀಕ್ಷಿಸಿರುತ್ತಾರೆ. ಇವರ ತೋಟಕ್ಕೆ ವಿಜ್ಞಾನಿಗಳು ಭೇಟಿ ನೀಡಿದಾಗ ಮೂರು ಮಿಶ್ರ ಬೆಳೆಗಳು ಉತ್ತಮವಾಗಿ ಬೆಳೆದಿರುವುದನ್ನು ಕಂಡು ಈ ರೈತರ ಪ್ರಯತ್ನವನ್ನು ಶ್ಲಾಘೀಸಿದ್ದಾರೆ. ಇದೇ ಸಮಯದಲ್ಲಿ ಹೊಲದಲ್ಲಿ ಬೆಳೆದ ಕಡಲೆ, ಸೂರ್ಯಕಾಂತಿ ಹಾಗೂ ಗೋಧಿ ಬೆಳೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುದುಕಪ್ಪನವರು ಸಾಹುಕಾರರಾಗಿದ್ದರೂ, ವಿನಯವಂತಿಕೆಯಿಂದ ಎಲ್ಲ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಬೆರೆಯುತ್ತಾರೆ. ಊರಿನಲ್ಲಿಯೂ ಕೂಡ ಯಾವುದೇ ರೈತರಿಗೆ ಸಂಕಷ್ಟವಾದಾಗ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ಕೊಡಲು ಸಹಕಾರ ನೀಡುತ್ತಾರೆ. ಹೀಗೆ ಮುದುಕಪ್ಪನವರು ಒಬ್ಬ ಪ್ರಗತಿಪರ ರೈತ ಹಾಗೂ ಉದ್ಯಮಿ ಅಷ್ಟೇ ಅಲ್ಲದೇ ಕೃಷಿಯಲ್ಲಿಯೂ ಕೂಡ ಉತ್ತಮ ಪ್ರಯೋಗ ಮಾಡುತ್ತಾ, ಸಾಧನೆಗೈದ ಒಬ್ಬ ಮಾದರಿ ರೈತರೆನಿಸಿಕೊಳ್ಳುತ್ತಾರೆ. ಇವರೇ ಹೇಳುವ ಹಾಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವಿಜ್ಞಾನಿಗಳ ಸಲಹೆಯಂತೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದ್ದು, ತಮ್ಮ ಸಾಧನೆಗೆ ಫಲವತ್ತಾದ ಜಮೀನೇ ಕಾರಣ ಎನ್ನುತ್ತಾರೆ ಮುದುಕಪ್ಪ.

ಇದನ್ನೂ ಓದಿ: ವಿವಿಧೆಡೆ ದಾಳಿ; 04 ಬಾಲಕಾರ್ಮಿಕರ ರಕ್ಷಣೆ

ಬರಗಾಲದಲ್ಲೂ ಕೃಷಿ ಹೊಂಡದ ನೀರು ಬಳಸಿ ಮೂರೂ ಬೆಳೆಗಳನ್ನು ಯಶಸ್ವಿಯಾಗಿ ಬೆಳೆದಿರುವುದು ಅಪರೂಪದ ಸಾಧನೆ. ಎಲ್ಲ ರೈತರು ಈ ರೀತಿ ಮಿಶ್ರಬೆಳೆ ಬೆಳೆದಲ್ಲಿ ಆದಾಯ ದ್ವಿಗುಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೃಷಿ ವಿಸ್ತರಣ ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ.ರವಿ ಅವರ ರೈತರ ಸಾಧನೆಯನ್ನು ಕೊಂಡಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬನ್ನಿಕೊಪ್ಪದ ರೈತ ಮುದುಕಪ್ಪ ದೇವರ ಮೊ.ಸಂ. 9449964291, ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ.ರವಿ., ಮೊ.ಸಂ: 9480247745 ಮತ್ತು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಮೊ.ಸಂ: 8217696837 ಗೆ ಸಂಪರ್ಕಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News