ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಭಾರಿ ಮಳೆ ಅವಾಂತರ: ತೆಂಗಿನ ಮರಕ್ಕೆ ಸಿಡಿಲು

ಸಿಲಿಕಾನ್ ಸಿಟಿಯಲ್ಲಿ  ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಆರ್ಭಟಕ್ಕೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ನಗರದ ಶ್ರೀರಾಂಪುರ, ಮಲ್ಲೇಶ್ವರಂ, ಗಾಂಧಿನಗರ, ಯಶವಂತಪುರ ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ಮರ ಬಿದ್ದಿರೋ ಬಗ್ಗೆ ವರದಿ ಆಗಿದೆ.

Written by - Yashaswini V | Last Updated : May 2, 2022, 07:58 AM IST
  • ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಭಾರಿ ಮಳೆ ಅವಾಂತರ
  • ಗುಡುಗು ಸಿಡಿಲು ಸಹಿತ ಭಾರೀ ಮಳೆ
  • 75 ವಾರ್ಡ್ ಗಳಲ್ಲಿ 1.5 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿರೋ ಬಗ್ಗೆ ವರದಿ
ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಭಾರಿ ಮಳೆ ಅವಾಂತರ: ತೆಂಗಿನ ಮರಕ್ಕೆ ಸಿಡಿಲು title=
Heavy rain in bengaluru

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಮೇ 01) ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ನಿನ್ನೆ ಸಂಜೆ 6 ರಿಂದ ಶುರುವಾಗಿ ರಾತ್ರಿ  10 ಗಂಟೆವರೆಗೆ ಜಿಲ್ಲೆಯ 75 ವಾರ್ಡ್ ಗಳಲ್ಲಿ 1.5 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಮಧ್ಯೆ, ಬೆಂಗಳೂರು ಉತ್ತರ ಯಲಹಂಕದ ಕೇಂದ್ರೀಯ ವಿಹಾರ ಸಮೀಪ ಗುಡುಗು ಸಹಿತ ಭಾರಿ ಮಳೆ  ಹಿನ್ನಲೆಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿರುವ ಘಟನೆಯೂ ನಡೆದಿದೆ.

ಮಳೆಯ ನಡುವೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರದ ತುತ್ತತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಗುಡುಗು ಸಹಿತ ಸುರಿಯುತ್ತಿದ್ದ ಮಳೆಯ ನಡುವೆ ಭಾರಿ ಶಬ್ದ ಕೇಳಿ ಬಂದಿದ್ದು ಜನ ಏನಾಯಿತೋ ಎಂದು ಹೊರಬಂದು‌ ನೋಡುವಷ್ಟರಲ್ಲಿ ತೆಂಗಿನ ಮರ ಹೊತ್ತಿ ಉರಿಯುತ್ತಿತ್ತು ಎನ್ನಲಾಗಿದೆ. ಇದರಿಂದ ಕೇಂದ್ರೀಯ ವಿಹಾರದ ಅಪಾರ್ಟ್ಮೆಂಟ್ ಜನರಲ್ಲಿ ಕೆಲಕಾಲ ಆತಂಕ‌ದ ವಾತಾವರಣ ಮನೆ ಮಾಡಿತ್ತು.

ಇದನ್ನೂ ಓದಿ- ಗುಡುಗು-ಮಿಂಚಿನಿಂದ ಇಮ್ಮಡಿಗೊಂಡ ಶಾರದಾಂಬೆ ದೇಗುಲದ ಸೌಂದರ್ಯ

ಹಿಂದೆ ಹಿರಿಯರು ಮಳೆ ಬಂದರೆ ಮರದ ಕೆಳೆಗೆ ನಿಲ್ಲಬೇಡಿ ಎಂದು ಹೇಳುತ್ತುದ್ದದ್ದು ಈ ಕಾರಣಗಳಿಂದಲೇ ಇರಬೇಕು. ಆದ್ದರಿಂದ ಮಳೆಗಾಲದ ವೇಳೆ ಜನ ಎಚ್ಚರದಿಂದ ‌ಇರಬೇಕು. ಮಕ್ಕಳು ಹಿರಿಯ ನಾಗರೀಕರು ಹುಷಾರಾಗಿರಬೇಕು ಎಂದು ಕೆಂದ್ರೀಯ ವಿಹಾರದಲ್ಲಿ‌ ಸಿಡಿಲು ಬಡಿದದ್ದನ್ನ ಪ್ರತ್ಯಕ್ಷವಾಗಿ ಕಂಡ ಹಿರಿಯ ನಾಗರೀಕರೊಬ್ಬರು ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟಕ್ಕೆ ಧರೆಗುರುಳಿದ ಮರಗಳು:
ಸಿಲಿಕಾನ್ ಸಿಟಿಯಲ್ಲಿ  ಬಿರುಗಾಳಿ ಸಹಿತ ಸುರಿದ ಭಾರೀ ಮಳೆ ಆರ್ಭಟಕ್ಕೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ನಗರದ ಶ್ರೀರಾಂಪುರ, ಮಲ್ಲೇಶ್ವರಂ, ಗಾಂಧಿನಗರ, ಯಶವಂತಪುರ ಸೇರಿ ಹಲವೆಡೆ ಮರಗಳು ಧರೆಗುರುಳಿವೆ. ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ಮರ ಬಿದ್ದಿರೋ ಬಗ್ಗೆ ವರದಿ ಆಗಿದೆ.

ನಗರದ ಒಟ್ಟು 12 ಕಡೆ  ಮರಗಳು ಬಿದ್ದಿರೋ ಬಗ್ಗೆ ವರದಿ ಆಗಿದೆ. ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ರಾತ್ರಿಯೇ ಆಯಾ ವಲಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಸಿಬ್ಬಂದಿ ಧರೆಗುರುಳಿದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.  

ಇದನ್ನೂ ಓದಿ- Shocking: ಪತ್ನಿಯ ಮೇಲೆ ಸಂದೇಹ, ಪತಿನಿಷ್ಠೆ ಪರೀಕ್ಷಿಸಲು ಅಗ್ನಿ ಪರೀಕ್ಷೆ ನಡೆಸಿದ ಪತಿ ಮಹಾಶಯ

ನಗರದ ಯಾವ್ಯಾವ ಪ್ರದೇಶದಲ್ಲಿ ಎಷ್ಟೆಷ್ಟು ಮಳೆಯಾಗಿದೆ?
ಸಂಪೂರ್ಣ ಬೆಂಗಳೂರಲ್ಲಿ 20 mm ಇಂದ 79 mm ತನಕ ಮಳೆ ಆಗಿದೆ. ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ಎಂದು ತಿಳಿಯಿರಿ...
* ವಿದ್ಯಾಪೀಠ - 79 mm ಮಳೆ
* ಸಂಪಂಗಿ ರಾಮನಗರ - 68 mm ಮಳೆ 
* ರಾಜಮಹಲ್ ಗುಟ್ಟಹಳ್ಳಿ - 67.5 mm ಮಳೆ
* ಬಿಳೇಕಹಳ್ಳಿ 63 mm ಮಳೆ
* ಅರಕೆರೆ - 61 mm ಮಳೆ
* ದೊರೆಸಾನಿ ಪಾಳ್ಯ - 51 mm ಮಳೆ
* ವಿವಿ ಪುರಂ - 51 mm ಮಳೆ
* ದಯಾನಂದ ನಗರ 49.5 mm ಮಳೆ
* ಪುಲಕೇಶಿನಗರ - 47 mm ಮಳೆ
* ನಾಯಂಡಹಳ್ಳಿ - 46.5 mm. ಮಳೆ 
* ಹೆಮ್ಮಿಗೆಪುರ - 42.5 mm ಮಳೆ
* ಕುಮಾರಸ್ವಾಮಿ ಲೇಔಟ್ - 40 mm ಮಳೆ 
* ಉತ್ತರಹಳ್ಳಿ - 32 mm ಮಳೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News