ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದಿದ್ರೆ ಕ್ಷೇತ್ರಕ್ಕಾಗಿ ಅಲೆದಾಡುತ್ತಿರಲಿಲ್ಲ-ಮುರುಗೇಶ್‌ ನಿರಾಣಿ ಟೀಕೆ

ಕಾರವಾರ : "ತಾವು ಆರಿಸಿ ಬಂದ ಕ್ಷೇತ್ರದಲ್ಲಿಯೇ ಒಳ್ಳೆಯ ಕೆಲಸ ಮಾಡಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇರೆ ಕ್ಷೇತ್ರವನ್ನು ಅಲೆದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಕಾರವಾರದಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.  

Written by - Zee Kannada News Desk | Last Updated : Mar 19, 2023, 12:57 PM IST
  • ಸಿದ್ದರಾಮಯ್ಯನವರು ಒಳ್ಳೆಯದನ್ನು ಮಾಡಿದ್ದರೆ ಈ ರೀತಿ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ
  • ಸಿದ್ದರಾಮಯ್ಯ ಅವರ ಬಗ್ಗೆ ಹೆಚ್ಚಿನದಾಗಿ ಹೇಳುವಷ್ಟು ನಾನು ದೊಡ್ಡ ವ್ಯಕ್ತಿ ಅಲ್ಲ
  • ಇದೀಗ ಕೋಲಾರದಲ್ಲೂ ಗೆಲ್ಲಲು ಸಾಧ್ಯವಿಲ್ಲ ಎಂದು ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ.
ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದಿದ್ರೆ ಕ್ಷೇತ್ರಕ್ಕಾಗಿ ಅಲೆದಾಡುತ್ತಿರಲಿಲ್ಲ-ಮುರುಗೇಶ್‌ ನಿರಾಣಿ ಟೀಕೆ  title=

ಕಾರವಾರದಲ್ಲಿ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ನನ್ನ ಪಾರ್ಟನರ್‌ ಆಗಿದ್ದಾರೆ. ಬಾದಾಮಿ ತಾಲೂಕಿನ ಒಂದು ಭಾಗ ನನ್ನ ಕ್ಷೇತ್ರಕ್ಕೆ ಒಳಪಟ್ಟಿದ್ದು, ಅದು ಅವರು ಸ್ಪರ್ಧಿಸುವ ಕ್ಷೇತ್ರವಾಗಿದೆ. ಇದೀಗ ಕೋಲಾರದಲ್ಲೂ ಗೆಲ್ಲಲು ಸಾಧ್ಯವಿಲ್ಲ ಎಂದು ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿಯೂ ಸಹ ಅವರು ನಿಲ್ಲುವುದು ಗ್ಯಾರಂಟಿ ಇಲ್ಲ ಎಂದು ಟೀಕಿಸಿದ್ದಾರೆ. 

ಸಿದ್ದರಾಮಯ್ಯನವರು ಒಳ್ಳೆಯದನ್ನು ಮಾಡಿದ್ದರೆ ಈ ರೀತಿ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ ಸಿದ್ದರಾಮಯ್ಯನವರು ಬೇರೆಯವರ ಬಗ್ಗೆ ಟೀಕೆ ಮಾಡುವುದನ್ನು ಬಿಡಲಿ, ಇನ್ನೂ ಸಿದ್ದರಾಮಯ್ಯ ಅವರ ಬಗ್ಗೆ ಹೆಚ್ಚಿನದಾಗಿ ಹೇಳುವಷ್ಟು ನಾನು ದೊಡ್ಡ ವ್ಯಕ್ತಿ ಅಲ್ಲ ಎಂದು ಹೇಳುವುದರ ಮೂಲಕ ಸಿದ್ದರಾಮಯ್ಯನವರ ಕಾಲೆಳೇದಿದ್ದಾರೆ. 

ಇದನ್ನೂ ಓದಿ-ಎಕ್ಸ್‌ಪ್ರೆಸ್ ಹೆದ್ದಾರಿಯೋ, ಹೆಮ್ಮಾರಿಯೋ..?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ 

ಇನ್ನು 2005ರಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಸಂಬಂಧ ಮೂಡಿಗೆರೆಯಲ್ಲಿ ರೈತರಿಂದ ಪಡೆಯಲಾದ ಭೂಮಿಗೆ 10 ಲಕ್ಷ ಪ್ರತಿ ಹೆಕ್ಟೇರ್‌ಗೆ ನಿಗದಿ ಮಾಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನ ನಡೆಸಿದ ಕಾರಣ ಇದೀಗ 50 ಲಕ್ಷ ರೂಪಾಯಿ ನೀಡಲು ಸರ್ಕಾರ ತಿರ್ಮಾನಿಸಿದೆ. ಇಂದು ಸಾಂಕೇತಿಕವಾಗಿ 50 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಇನ್ನು ಈ ವಾರದಲ್ಲಿ ಆರ್‌ಟಿಜಿಎಸ್ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.

ನನ್ನ ಬಳಿ ಹಲವು ಶಾಸಕರು ಕೆಲಸಕ್ಕೆಂದು ಬರುತ್ತಾರೆ. ಆದರೆ ಜನರ ಕೆಲಸ, ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಪಟ್ಟು ಹಿಡಿಯುವುದು ನೋಡಿದರೆ ಮಾದರಿ ಶಾಸಕಿ ಎಂದು ಕರೆದರೆ ತಪ್ಪಾಗುವುದಿಲ್ಲ ಏಕೆಂದರೆ ಶಾಸಕಿ ರೂಪಾಲಿ ನಾಯ್ಕ ವಿಭಿನ್ನವಾಗಿದ್ದಾರೆ ಎಂದು ಹೊಗಳಿದರು.

​ಇದನ್ನೂ ಓದಿ-Today Vegetable Price: ಇಂದು ತರಕಾರಿ ದರದಲ್ಲಿ ಏರಿಕೆ.. ಯಾವುದಕ್ಕೆ ಎಷ್ಟು ಬೆಲೆ ಇಲ್ಲಿ ತಿಳಿಯಿರಿ  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News