Ration Card E-KYC : ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ!

ಇ-ಕೆವೈಸಿಯನ್ನು ಕಡ್ಡಾಯವಾಗಿ ಜುಲೈ 1 ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭ

Last Updated : Jun 28, 2021, 10:49 AM IST
  • ಕೊರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದುಡಲಾಗಿದ್ದ ಇ-ಕೆವೈಸಿ ಪ್ರಕ್ರಿಯೆ
  • ಇ-ಕೆವೈಸಿಯನ್ನು ಕಡ್ಡಾಯವಾಗಿ ಜುಲೈ 1 ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭ
  • ನ್ಯಾಯಬೆಲೆ ಅಂಗಡಿಗಳಲ್ಲಿ ಜನಸಂದಣಿ, ಉದ್ದನೆಯ ಸರತಿ ಸಾಲು ನಿಲ್ಲದಂತೆ ನೋಡಿಕೊಳ್ಳಬೇಕು
Ration Card E-KYC : ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ! title=

ಹಾವೇರಿ : ಕೊರೋನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದುಡಲಾಗಿದ್ದ ಇ-ಕೆವೈಸಿ ಪ್ರಕ್ರಿಯೆನ್ನು ಪುನರರಾಂಭಿಸಲು ಆದೇಶಿಸಲಾಗಿದ್ದು, ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿ ವರ್ತಕರು ಕಡ್ಡಾಯವಾಗಿ ಅಂಗಡಿಗಳನ್ನು ತೆರೆದು ಅವರ ವ್ಯಾಪ್ತಿಯ ಪಡಿತರ ಚೀಟಿಯಲ್ಲಿನ ಸದಸ್ಯರುಗಳ ಇ-ಕೆವೈಸಿಯನ್ನು ಕಡ್ಡಾಯವಾಗಿ ತಿಂಗಳ 1ನೇ ತಾರೀಖಿನಿಂದ 10ನೇ ತಾರೀಖನ ಅವಧಿಯಲ್ಲಿ ಜುಲೈ 1 ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆರಂಭಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಇ-ಕೆವೈಸಿ(Ration Card E-KYC)ಯನ್ನು ಸೆಪ್ಟೆಂಬರ್-2021ರೊಳಗೆ ಮುಕ್ತಾಯಗೊಳಿಸುವುದು ಆಹಾರ ನಿರೀಕ್ಷಕರು, ಶಿರಸ್ತೇದಾರರ ಜವಾಬ್ದಾರಿಯಾಗಿದೆ. ಇ-ಕೆವೈಸಿ ಮುಕ್ತಾಯ ಮಾಡದ ಆಹಾರ ನಿರೀಕ್ಷಕರು, ಶಿರಸ್ತೇದಾರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ : ಕರಾವಳಿಯಲ್ಲಿ 'ಯಲ್ಲೋ ಅಲರ್ಟ್'​

ನ್ಯಾಯಬೆಲೆ ಅಂಗಡಿಗಳು ಹೊಸದಾಗಿ ಸೃಜಿಸಿದ ಜಿ.ಎಸ್.ಸಿ.ಮಾಡಿದ ಪಡಿತರ ಚೀಟಿ(Ration Card)ಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ ಅನ್ನ(ಎಎವೈ), ಆದ್ಯತಾ (ಪಿಹೆಚ್‍ಹೆಚ್), ಪಡಿತರ ಚೀಟಿದಾರರ ಇ-ಕೆವೈಸಿಯನ್ನು ಮಾಡಬೇಕು. ಇದರ ಜೊತೆಗೆ ಪಡಿತರ ಚೀಟಿಗಳಲ್ಲಿ ಲಿಂಗ, ಸಂಬಂಧ ಮತ್ತು ಮೊಬೈಲ್ ಸಂಖ್ಯೆಗಳು ಇಲ್ಲದ ಪಡಿತರ ಚೀಟಿಗಳ ವಿವರಗಳನ್ನು ತಾಲೂಕು ನ್ಯಾಯಬೆಲೆ ಅಂಗಡಿವಾರು ವರ್ಗೀಕರಿಸಿ ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕು.

ಇದನ್ನೂ ಓದಿ : SSLC Exam 2021 : ನಾಳೆಯೇ 'SSLC' ಪರೀಕ್ಷೆ 2021 ದಿನಾಂಕ ಪ್ರಕಟ!

ಈಗಾಗಲೇ ಇ-ಕೆವೈಸಿ ಆಗಿರುವ ಅಥವಾ 2020 ಫೆಬ್ರುವರಿ ನಂತರ ವಿತರಿಸುವ ಹೊಸ ಪಡಿತರ ಚೀಟಿ/ಜಿ.ಎಸ್.ಸಿ. ಆಗಿರುವ ಪಡಿತರ ಚೀಟಿಗಳ ಇ-ಕೆ.ವೈಸಿ ಆಗಿರುವುದರಿಂದ ಪುನಃ ಇ-ಕೆವೈಸಿ ಮಾಡಿಸುವ ಅಗತ್ಯವಿರುವುದಿಲ್ಲ. ಮೊಬೈಲ್ ಸಂಖ್ಯೆ ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರತಿ ಪಡಿತರ ಚೀಟಿಗೆ ಕನಿಷ್ಟ ಒಬ್ಬ ಸದಸ್ಯರದಾದರೂ ಮೊಬೈಲ್ ಸಂಖ್ಯೆ(Mobile NUmber) ಸಂಗ್ರಹಿಸಬೇಕು. ಒಬ್ಬರಿಗಿಂತ ಹೆಚ್ಚು ಸದಸ್ಯರ ಮೊಬೈಲ್ ಸಂಖ್ಯೆಯನ್ನು ಸಹ ಸಂಗ್ರಹಿಸಬಹುದು. ಒಂದಯ ಕುಟುಂಬದಲ್ಲಿ ಒಂದೇ ಮೊಬೈಲ್ ಸಂಖ್ಯೆ ಇದ್ದರೆ ಎಲ್ಲಾ ಸದಸ್ಯರಿಗೂ ನಮೂದಿಸಬೇಕು.

ಇದನ್ನೂ ಓದಿ : Delta Plus Variant ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಿ, ಕರ್ನಾಟಕಕ್ಕೆ ಕೇಂದ್ರ ಸೂಚನೆ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(National Food Security Act)ಯಂತೆ ಕುಟುಂಬದ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರಾಗಿ ಆಯ್ಕೆಮಾಡಬೇಕು. ಒಂದು ವೇಳೆ ಮಹಿಳಾ ಸದಸ್ಯರು ಇರದಿದ್ದರೆ ಅತ್ಯಂತ ಹಿರಿಯ ಪುರುಷ ಸದಸ್ಯರು ಕುಟುಂಬ ಮುಖ್ಯಸ್ಥರಾಗುತ್ತಾರೆ. ಸಂಬಂಧಗಳನ್ನು ದಆಖಲಿಸುವಾಗ ಕುಟುಂಬದ ಮುಖ್ಯಸ್ಥರೊಂದಿಗೆ ಸದಸ್ಯರಿಗಿರುವ ಕೌಟುಂಬಿಕ ಸಂಬಂಧವನ್ನು ನಿಖರವಾಗಿ ದಾಖಲಿಸಬೇಕು. ಪುರುಷರಿಗೆ-ಎಂ, ಮಹಿಳೆಯರಿಗೆ-ಎಫ್ ಹಾಗೂ ತೃತೋಯ ಲಿಂಗದವರಿಗೆ-ಟಿ ಎಂದು ದಾಖಲಿಸಬೇಕು. ಇ-ಕೆವೈಸಿ ಮಾಡುವಾಗ ಪಡಿತರ ಚೀಟಿದಾರರು ಜಾತಿ ವಿವರ(ಎಸ್‍ಸಿ, ಎಸ್‍ಟಿ, ಇತರೆ) ಎಲ್.ಪಿ.ಜಿ. ವಿವರ ಇ-ಕೆವೈಸಿ ವಿವರ ದಾಖಲಿಸಬೇಕು.

ಇದನ್ನೂ ಓದಿ : Karnataka Govt : ರಾಜ್ಯ ಸರ್ಕಾರದಿಂದ 'ಮದುವೆ ಸಮಾರಂಭ'ಗಳಿಗೆ ಷರತ್ತುಬದ್ಧ ಅನುಮತಿ!

ಯಾವುದೇ ಸದಸ್ಯರ ಇ-ಕೆವೈಸಿಯನ್ನು ಕುಷ್ಟರೋಗ, ವಿಶೇಷ ಚೇತನರು, ಎಂಡೋಸಲ್ಪಾನ್, ಹಾಸಿಗೆ ಹಿಡಿದವರು, ವಯೋವೃದ್ಧರು, ಮರಣ, ಕುಟುಂಬ(Family)ದ ಜೊತೆ ವಾಸವಾಗಿಲ್ಲದ ಕಾರಣಗಳಿಗಾಗಿ ವಿನಾಯಿತಿ ವಿವರಗಳಲ್ಲಿ ನಮೂದಿಸಲು ಅವಕಾಶ ನೀಡಲಾಗಿದೆ. ಜಾತಿ ವಿವರ ನಮೂದಿಸುವಾಗ ಎಸ್.ಸಿ./ಎಸ್.ಟಿ. ಇತರೆ ವರ್ಗಗಳ ವಿವರ ನಮೂದಿಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರು ಜಾತಿ ಪ್ರಮಣಪತ್ರದ ವಿವರಗಳನ್ನು ದಾಖಲಿಸಬೇಕು ಆಗ ಜಾತಿ ಪ್ರಮಾಣದ ವಿವರಗಳು ಎಜೆಎಸ್‍ಕೆಯಿಂದ ದೃಢೀಕರಣವಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರತಿ ನ್ಯಾಯಬೆಲೆ ಅಂಗಡಿಗಳ ಲಾಗಿನ್‍ನಲ್ಲಿ ಪಡಿತರ ಚೀಟಿಗಳ ಪಟ್ಟಿಯನ್ನು ಇಲಾಖೆಯ ತಂತ್ರಾಶದಲ್ಲಿ ನೀಡಲಾಗಿದೆ.

ಇದನ್ನೂ ಓದಿ : Heavy Rain in Karnataka : ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆ!

ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಇ-ಕೆವೈಸಿಯನ್ನು ಏಕಕಾಲಕ್ಕೆ ದಿನಾಂಕ 1-7-2021 ರಿಂದ ಪ್ರಾರಂಭಿಸಬೇಕು. ಒಂದಕ್ಕಿಂತ ಹೆಚ್ಚು ನ್ಯಾಯಬೆಲೆ ಅಂಗಡಿ(Ration Shop) ನಡೆಸುವವರು ಸಹ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಜುಲೈ 1 ರಿಂದ ಕಡ್ಡಾಯವಾಗಿ ಇ-ಕೆವೈಸಿ ಆರಂಭಿಸಬೇಕು. ಇ-ಕೆವೈಸಿ ಬಗ್ಗೆ ಎಲ್ಲಾ ನ್ಯಾಯಬೆಲೆ ಅಂಗಡಿ, ಗ್ರಾಮ ಪಂಚಾಯತಿ, ನಗರ ಸಂಸ್ಥೆಗಳು ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು.

ಇದನ್ನೂ ಓದಿ : Unlock Karnataka: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ನ್ಯಾಯಬೆಲೆ ಅಂಗಡಿಗಳಲ್ಲಿ ಜನಸಂದಣಿ, ಉದ್ದನೆಯ ಸರತಿ ಸಾಲು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿದಿನ ಎಷ್ಟು ಮಂದಿಗೆ ಇ-ಕೆವೈಸಿ ಮಾಡಿಸಬೇಕು, ಪ್ರತಿ ಇ-ಕೆವೈಸಿ(E-KYC) ಸದಸ್ಯರುಗೂ ಎಷ್ಟು ಸಮಯದ ಅಂತರವಿರಬೇಕು ಎಂದು ಸಂಬಂಧಪಟ್ಟ ಆಹಾರ ನಿರೀಕ್ಷಕರು ಮೊದಲೇ ಒಂದು ಕಾರ್ಯಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಹಾಗೂ ಸಂಬಂಧಪಟ್ಟ ಆಹಾರ ನಿರೀಕ್ಷಕರು ನ್ಯಾಯಬೆಲೆ ಅಂಗಡಿಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಸ್ಥಳದಲ್ಲಿಯೇ ಇದ್ದು ನೀಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಆಹಾರ ನಿರೀಕ್ಷಕರನ್ನು ನೇರ ಹಿಣೆಗಾರರನ್ನಾಗಿ ಮಾಡಲಾಗುವುದು.

ಇದನ್ನೂ ಓದಿ : BMTC-KSRTC Bus Service : ವಿಕೇಂಡ್‌ ಕರ್ಫ್ಯೂನಲ್ಲಿಯೂ ಇರಲಿದೆ BMTC,KSRTC ಬಸ್‌ ಸಂಚಾರ

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಸಂದರ್ಭದಲ್ಲಿ ಪಡಿತರ ಚೀಟಿದಾರರ ಬಯೋನೆಟ್ರಿಕ್(Biometric) ಸಂಗ್ರಹಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲಕ್ಕೆ ಹೊರಡಿಸುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಲಿಖಿತವಾಗಿ ಸೂಚನೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News