ಬೆಂಗಳೂರು : 2020-21 ನೇ ಸಾಲಿಗೆ ಧಾರವಾಡ ಜಿಲ್ಲೆಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ವರೆಗೆ ತರಬೇತಿ ನೀಡಲು ಪ್ರಕಟಣೆಯಲ್ಲಿ ಅರ್ಜಿಗಳನ್ನು ಅಹ್ವಾನಿಸಿ ದಿನಾಂಕ:31-08-2020 ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು.
ಆದರೆ ಈ ಅವಧಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಸಾಕಷ್ಟು ಅರ್ಜಿಗಳು ಬಾರದೇ 1 ಅರ್ಜಿ ಮಾತ್ರ ಬಂದಿರುತ್ತವೆ. ಅರ್ಜಿ ಸ್ವೀಕರಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಹ ಅಲ್ಪಸಂಖ್ಯಾತರ ಕಾನೂನು ಪದವೀಧರರು ನಿಬಂಧನೆಗಳಿಗೆ ಒಳಪಟ್ಟು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂದಿ ಪ್ಲಾಜಾ, 1 ನೇ ಮಹಡಿ ಕೆ.ಸಿ.ಪಾರ್ಕ್, ಪೋಸ್ಟ್ ಆಫೀಸ್ ಎದುರಿಗೆ ಹಳಿಯಾಳ ರಸ್ತೆ, ಧಾರವಾಡ ಈ ಕಚೇರಿಗೆ ದಿನಾಂಕ:25-09-2020 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಅಪೂರ್ಣವಾದ ಹಾಗೂ ನಿಗದಿಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮಂದಿ ಪ್ಲಾಜಾ, 1 ನೇ ಮಹಡಿ ಕೆ.ಸಿ ಪಾರ್ಕ ಪೋಸ್ಟ್ ಆಫೀಸ್ ಎದುರಿಗೆ ಹಳಿಯಾಳ ರಸ್ತೆ, ಧಾರವಾಡ ದೂರವಾಣಿ ಸಂಖ್ಯೆ: 0836-2971132 ಇಲ್ಲಿ ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.