ಬಿಜೆಪಿ ʼಪೇ ಸಿಎಂ ಅಭಿಯಾನʼ ಕಾಂಗ್ರೆಸ್‌ ಕಾಪಿ, ಇದನ್ನು ಜನ ನಂಬಲ್ಲ : ಶೆಟ್ಟರ್‌ ವ್ಯಂಗ್ಯ

ಬಿಜೆಪಿ ಪೇ ಸಿಎಂ ಅಭಿಯಾನ ಕಾಂಗ್ರೆಸ್ ಕಾರ್ಬನ್ ಕಾಪಿ ಆಗಿದ್ದು‌ cಪೇ ಮುಖ್ಯಮಂತ್ರಿ ಅವತ್ತಿಗೆ ಲೇಟೆಸ್ಟ್. ‌ಈಗ ಕಾಂಗ್ರೆಸ್ ನವರು ಮಾಡಿದ್ದನ್ನೆ ಕಾಪಿ ಮಾಡೋಕೆ ಬಿಜೆಪಿಗರು ಹೊರಟಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.

Written by - Krishna N K | Last Updated : Aug 12, 2023, 03:33 PM IST
  • ಬಿಜೆಪಿ ಪೇ ಸಿಎಂ ಅಭಿಯಾನ ಕಾಂಗ್ರೆಸ್ ಕಾರ್ಬನ್ ಕಾಪಿ.
  • ಪೇ ಸಿಎಂ ಗೆ ಅರ್ಥ ಇಲ್ಲ ಹಾಗೂ ಜನ‌ ಇದನ್ನು ನಂಬಲ್ಲ.
  • ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವ್ಯಂಗ್ಯ.
ಬಿಜೆಪಿ ʼಪೇ ಸಿಎಂ ಅಭಿಯಾನʼ ಕಾಂಗ್ರೆಸ್‌ ಕಾಪಿ, ಇದನ್ನು ಜನ ನಂಬಲ್ಲ : ಶೆಟ್ಟರ್‌ ವ್ಯಂಗ್ಯ title=

ಹುಬ್ಬಳ್ಳಿ : ಬಿಜೆಪಿ ಸರ್ಕಾರ ಬಂದ ನಾಲ್ಕು ವರ್ಷಗಳ ನಂತರ ಪೇ ಸಿಎಂ ಅಭಿಯಾನ ಆರಂಭವಾಗಿತ್ತು. ಆದ್ರೆ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥವಿಲ್ಲ ಎಂದು ಬಿಜೆಪಿ ಪೇ ಸಿಎಂ ಅಭಿಯಾನದ ಕುರಿತು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಇದು ಕಾಂಗ್ರೆಸ್ ಕಾರ್ಬನ್ ಕಾಪಿ ಆಗಿದ್ದು‌ ಪೇ ಸಿಎಂ ಗೆ ಅರ್ಥ ಇಲ್ಲ ಹಾಗೂ ಜನ‌ ಇದನ್ನು ನಂಬಲ್ಲ. ಪೇ ಮುಖ್ಯಮಂತ್ರಿ ಅವತ್ತಿಗೆ ಲೇಟೆಸ್ಟ್. ‌ಈಗ ಕಾಂಗ್ರೆಸ್ ನವರು ಮಾಡಿದ್ದನ್ನೆ ಕಾಪಿ ಮಾಡೋಕೆ ಬಿಜೆಪಿಗರು ಹೊರಟಿದ್ದು, ಜನರು ಇದನ್ನು ನಂಬಲ್ಲ. ಬಿಜೆಪಿ  ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದ್ರೆ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ ಎಂದರು.

ಇದನ್ನೂ ಓದಿ: ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅನಾಥರಾಗಿದ್ದಾರೆ: ಬಿಜೆಪಿ ಟೀಕೆ

ಬಿಜೆಪಿಯಲ್ಲಿದ್ದಾಗ ಎಲ್ಲ‌ ವಿಷಯಗಳನ್ನು ನಾನು ಕೋರ್ ಕಮೀಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗೋದ ವಿಷಯವನ್ನು ಹೇಳಿದ್ದೆ, ಆದ್ರೆ ಅವರು ತಿಳಿದುಕೊಳ್ಳಲಿಲ್ಲ. ದೆಹಲಿಗೆ ನಾನು ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ರು. ಲೋಕಸಭೆಯಲ್ಲಿ ಹೇಗೆ ನಾವ ಗೆಲ್ಲಬೇಕು ಅನ್ನೋ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಯ್ತು. ರಾಜ್ಯ ರಾಜಕಾರಣದ ಅವಲೋಕನ ರಾಹುಲ್ ಗಾಂಧಿ ತಿಳಿದುಕೊಂಡರು. ಯಾವ ಟಾಸ್ಕ್ ಕೊಟ್ಟಿಲ್ಲ ಎಂದು ಹೇಳಿದರು.

ಅಲ್ಲದೆ, ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು, ಎಲ್ಲರದೂ ಒಂದೇ ಗುರಿ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು. ಭಾರತೀಯ ಜನತಾ ಪಕ್ಷ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಲೀಡರ್ ಲೆಸ್ ಪಾರ್ಟಿ ಆಗಿದೆ. ಮೂರು ತಿಂಗಳಿದಾರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ. ಬಿಜೆಪಿ ದಯನೀಯ ಪರಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು ಎಂದು ತಿಳಿಸಿದರು.

ಇದನ್ನೂ ಓದಿ: ಮಹಿಳೆಯಿಂದ ಅತ್ಯಾಚಾರ ಆರೋಪ.. ಸ್ಯಾಂಡಲ್‌ವುಡ್ ಹೀರೊ ಅರೆಸ್ಟ್!   

ನಾನು ನನಗೆ ಸೀಟ್ ಬೇಕು ಯಾವ ಬೇಡಿಕೆಯನ್ನು ಹಾಕಿಲ್ಲ. ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಬಗ್ಗೆ ಚರ್ಚೆ ಆಗಿಲ್ಲ. ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ರು. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಇರಲಿಲ್ಲ. ಸರ್ಕಾರ ಬಂದು ಮೂರು ತಿಂಗಳಾಗಿದೆ, ಗುತ್ತಿಗೆದಾರ ಬಿಲ್ ಬಾಕಿ ಇರೋದು ಕಳೆದ ಸರ್ಕಾರದ್ದು. ಇವಾಗ ಆಪಾದನೆ ಮಾಡೋದು ದುರುದ್ದೇಶದಿಂದ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News