ಚುನಾವಣೆ ಗೆದ್ದ ಬಳಿಕ ಗೆಲುವಿನ ಹರ್ಷದೊಂದಿಗೆ ಹುಬ್ಬಳ್ಳಿಗೆ ಬಂದ ಶೆಟ್ಟರ್: ಸಿದ್ಧಾರೂಢರ ದರ್ಶನ..!

Belgaum Lok Sabha Elections: ಬೆಳಗಾವಿ ಲೋಕಸಭಾ ಚುನಾವಣೆ  ಗೆದ್ದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಆರಾಧ್ಯ ಧೈವ ಸದ್ಗುರು ಸಿದ್ಧಾರೂಢರ ಮಠಕ್ಕೆ ಭೇಟಿ‌‌ ನೀಡಿ ದರ್ಶನ ಪಡೆದರು.

Written by - Yashaswini V | Last Updated : Jun 5, 2024, 04:39 PM IST
  • ಬೆಳಗಾವಿ ಲೋಕಸಭಾ ಚುನಾವಣೆ ಗೆದ್ದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್
  • ಹುಬ್ಬಳ್ಳಿಯ ಆರಾಧ್ಯ ಧೈವ ಸದ್ಗುರು ಸಿದ್ಧಾರೂಢರ ಮಠಕ್ಕೆ ಭೇಟಿ‌‌ ನೀಡಿ ದರ್ಶನ ಪಡೆದ ಜಗದೀಶ ಶೆಟ್ಟರ್
  • ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಶೆಟ್ಟರ್ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಚುನಾವಣೆ ಗೆದ್ದ ಬಳಿಕ ಗೆಲುವಿನ ಹರ್ಷದೊಂದಿಗೆ ಹುಬ್ಬಳ್ಳಿಗೆ ಬಂದ ಶೆಟ್ಟರ್: ಸಿದ್ಧಾರೂಢರ ದರ್ಶನ..! title=

Belgaum Lok Sabha Elections Jagadish Shettar: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು 1ಲಕ್ಷ 80 ಸಾವಿರ ಅಂತರದಿಂದ ಗೆದ್ದಿದ್ದೇನೆ. ಸಾಕಷ್ಟು ಅಲ್ಲಿನ ನಾಯಕರು, ಕಾರ್ಯಕರ್ತರು ಸಹಕಾರ ನೀಡಿದ್ದರಿಂದ ಗೆಲುವಾಗಿದೆ. ನಾನು ಹೊರಗಿನವನು ಅಂತ ಟೀಕೆ ಮಾಡಿದವರಿಗೆ ಜನರು ಉತ್ತರ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಬೆಳಗಾವಿ ಲೋಕಸಭಾ ಚುನಾವಣೆ ( Belgaum Lok Sabha Elections) ಗೆದ್ದ ನಂತರ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಆರಾಧ್ಯ ಧೈವ ಸದ್ಗುರು ಸಿದ್ಧಾರೂಢರ ಮಠಕ್ಕೆ ಭೇಟಿ‌‌ ನೀಡಿ ದರ್ಶನ ಪಡೆದರು.

ಇದನ್ನೂ ಓದಿ- ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ: ಗಡಿ ಜಿಲ್ಲೆಯಲ್ಲಿ ಕೈ ಅಭ್ಯರ್ಥಿಯ ದಾಖಲೆಯ ಜಯ

ಸಿದ್ಧಾರೂಢರ ದರ್ಶನದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಜಗದೀಶ ಶೆಟ್ಟರ್ (Jagadish Shetter)  ಅವರು, ಜನರು ಯಾವುದನ್ನೂ ಮನಸ್ಸಿನಲ್ಲಿ ಇಟ್ಟಿಕೊಳ್ಳದೇ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿಲ್ಲಾ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಅದನ್ನ ನಿಭಾಯಿಸುತ್ತೇನೆ ಎಂದರು.

ಇದನ್ನೂ ಓದಿ- ನಾಯಕರ ಸ್ವಪ್ರತಿಷ್ಠೆಯೇ ಕೋಲಾರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ : ಮುನಿಯಪ್ಪ

ಪ್ರಹ್ಲಾದ್ ಜೋಶಿ (Prahlad Joshi) ಅವರ ಲೀಡ್ ಕಡಿಮೆ ವಿಚಾರವಾಗಿ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಕುರಿತು ನಾನು ಗಮನ ಹರಿಸಿಲ್ಲ ಬೆಳಗಾವಿ ಚುನಾವಣೆಯಲ್ಲಿ ಕಾರ್ಯನಿರತನಾಗಿದ್ದೆ. ಬೆಳಗಾವಿಯ ಸಮಗ್ರ ಅಭಿವೃದ್ಧಿ ಗೆ ಶ್ರಮವಹಿಸಿ ಕೆಲಸ ಮಾಡುವೆ. ನಾಳೆ ದೆಹಲಿಗೆ ಹೋಗಿ ನಮ್ಮ ವರಿಷ್ಠರನ್ನ ಭೇಟಿಯಾಗುವೆ. ಯುಪಿಎದವರಿಗೆ ಮೊದಲು ಎರಡು ಸಲ ಬಹುಮತ ಸಿಕ್ಕಿರಲಿಲ್ಲ. ಆ ವೇಳೆಯಲ್ಲಿ ಅವರು ಸರ್ಕಾರ ರಚನೆ ಮಾಡಿದ್ರು ಎಂದು ಅವರು ಹೇಳಿದರು.

ಈ ಚುನಾವಣೆಯಲ್ಲಿ ನಮ್ಮ ಎನ್ ಡಿಎಗೆ ಬಹುಮತ ಬಂದಿದೆ. ನಮ್ಮ ಪಕ್ಷಕ್ಕೆ ಸೀಟು ಕಡಿಮೆ ಬಂದರೂ ಕೂಡ ನಾವು ಸರ್ಕಾರವನ್ನ ರಚನೆ ಮಾಡ್ತಿವಿ ಎಂದು ಅವರು ಭರವಸೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News