ಸಿದ್ದರಾಮಯ್ಯ ʼಜನಸ್ಪಂದನೆʼಗೆ ಹೆದರಿ ಬುಡಕ್ಕೆ ಬೆಂಕಿ ಬಿದ್ದವರಂತೆ ಒದ್ದಾಡುತ್ತಿದ್ದಾರೆ : ಬಿಜೆಪಿ

 ಜನಸ್ಪಂದನ ಕಾರ್ಯಕ್ರಮಕ್ಕೆ ಬೇದರಿರುವ ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಹರಿಹಾಯ್ದಿದೆ.

Written by - Krishna N K | Last Updated : Sep 11, 2022, 07:03 PM IST
  • ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಹರಿಹಾಯ್ದಿದೆ.
  • ಭ್ರಷ್ಟರಾಮಯ್ಯ ಜನಸ್ಪಂದನ ಕಾರ್ಯಕ್ರಮಕ್ಕೆ ಬೇದರಿ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ
  • ಸಿದ್ದರಾಮಯ್ಯ ಅವರೇ, ಮುಂದೆ ಹೇಗೆ? ಇನ್ನೂ ಹಲವಾರು ಸಮಾವೇಶದ ರೂಪುರೇಶೆಗಳು ನಡೆಯುತ್ತಿವೆ
ಸಿದ್ದರಾಮಯ್ಯ ʼಜನಸ್ಪಂದನೆʼಗೆ ಹೆದರಿ ಬುಡಕ್ಕೆ ಬೆಂಕಿ ಬಿದ್ದವರಂತೆ ಒದ್ದಾಡುತ್ತಿದ್ದಾರೆ : ಬಿಜೆಪಿ title=

ಬೆಂಗಳೂರು : ಜನಸ್ಪಂದನ ಕಾರ್ಯಕ್ರಮಕ್ಕೆ ಬೇದರಿರುವ ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಹರಿಹಾಯ್ದಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬಿಜೆಪಿ ಪಕ್ಷದ ಒಂದು‌ ಜನಸ್ಪಂದನ ಕಾರ್ಯಕ್ರಮಕ್ಕೆ ಬೆದರಿರುವ ಸಿದ್ದರಾಮಯ್ಯ ಅವರೇ, ಮುಂದೆ ಹೇಗೆ? ಇನ್ನೂ ಹಲವಾರು ಸಮಾವೇಶದ ರೂಪುರೇಶೆಗಳು ನಡೆಯುತ್ತಿವೆ, ಭ್ರಷ್ಟರಾಮಯ್ಯ ಅವರು ಈಗಲೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: 10 ದಿನಗಳಲ್ಲಿ 'ಹೊಸ ಪಕ್ಷ' ಘೋಷಿಸಲಿದ್ದಾರೆ ಗುಲಾಮ್ ನಬಿ ಅಜಾದ್!

ಭಾರತ್ ಜೋಡೋ ಯಾತ್ರೆಯ ಮೂಲಕ‌ ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡಲಾಗುತ್ತಿದೆ. ಸಿದ್ದರಾಮೋತ್ಸವದ ಮೂಲಕ ಸಿಎಂ‌ ಕುರ್ಚಿಗಾಗಿ ವ್ಯಕ್ತಿಪೂಜೆ ನಡೆಯುತ್ತಿದೆ. ಜನ ಸಂವೇದನೆಗೆ, ಜನಸ್ಪಂದನೆಯ ಮೂಲಕ ನಾವು ಬೆಲೆ ನೀಡುತ್ತಿದ್ದೇವೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮದು ಬರೇ ಅಧಿಕಾರ ಕೇಂದ್ರೀಕೃತ ಸಮಾವೇಶಗಳಲ್ಲವೇ? ರಾಜ್ಯ ಕಂಡ ಅತಿ ಭ್ರಷ್ಟಾತಿ ಭ್ರಷ್ಟ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಎಂದು ಗುಡುಗಿದೆ.

ತಾನು ಮಾಡಿದ ಭ್ರಷ್ಟಾಚಾರಗಳು ತನ್ನನ್ನು ಸುತ್ತಿಕೊಳ್ಳುತ್ತದೆ ಎಂಬ ಭಯ ಕಾಡಿದಾಗ ಭ್ರಷ್ಟಾಚಾರ ತನಿಖಾ ಸಂಸ್ಥೆಗೆ ಬಾಗಿಲು ಹಾಕಿದ ಕೀರ್ತಿ ಇಟಲಿ ಪರಿವಾರದ ಈ ಭ್ರಷ್ಟರಾಮಯ್ಯ ಅವರಿಗೆ ಸಲ್ಲುತ್ತದೆ. ನಿಜವಲ್ವೇ 'ರೀಡು'ರಾಮಯ್ಯ? ಜನ್ಮ ದಿನಾಂಕವೇ ಗೊತ್ತಿಲ್ಲ ಎನ್ನುತ್ತಲೇ ಜನನ ದಿನ ದಿನಾಂಕದಲ್ಲೂ ಹಗರಣ ನಡೆಸಿ ಸಿದ್ರಾಮೋತ್ಸವ ಮಾಡಿದ್ದು, ಡಿಕೆಶಿಯನ್ನು ಬೆದರಿಸಲೋ, ನಕಲಿ ಗಾಂಧಿ ಪರಿವಾರವನ್ನು ಬೆದರಿಸಲೋ ಅಥವಾ ಜನಸೇರಿಸಿ‌ ಸಿಎಂ ಆಗುತ್ತೇನೆ ಎಂಬ ಭ್ರಮೆಯಿಂದ ಮಾಡಿದ್ದೋ? 2013 ರಲ್ಲಿ ಭ್ರಷ್ಟರಾಮಯ್ಯ ಸಿಎಂ ಆಗಿದ್ದಲ್ಲ, ಅದು ದಲಿತ‌ ನಾಯಕನಿಂದ ಕಿತ್ತುಕೊಂಡ ಪದಭಿಕ್ಷೆ..! ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಗುಡುಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News