ಯಡಿಯೂರಪ್ಪ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ: ಕಾಂಗ್ರೆಸ್

BS Yediyurappa Karnataka Tour: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಬಿಜೆಪಿಯು ಇದೀಗ ಪಕ್ಷ ಸಂಘಟನೆಗೆ ಮತ್ತೆ ಒತ್ತು ನೀಡಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಾಗಿದೆ.

Written by - Puttaraj K Alur | Last Updated : Sep 19, 2023, 08:00 PM IST
  • ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಬಿಜೆಪಿ ಇದೀಗ ಪಕ್ಷ ಸಂಘಟನೆಗೆ ಮತ್ತೆ ಒತ್ತು ನೀಡಿದೆ
  • ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ
  • ಬಿಎಸ್‍ವೈ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ ಎಂದು ಟೀಕಿಸಿದ ಕಾಂಗ್ರೆಸ್
ಯಡಿಯೂರಪ್ಪ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ: ಕಾಂಗ್ರೆಸ್ title=
ಬಿಜೆಪಿ ಮತ್ತೆ ಪಕ್ಷ ಸಂಘಟನೆಗೆ ಒತ್ತು ನೀಡಿದೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳ ಮೇಲಾಯಿತು ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ಬಿಜೆಪಿ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಬಿಜೆಪಿಗೆ ಮುಳುವಾಯಿತು ಅಂತಾ ಹೇಳಲಾಗುತ್ತಿದೆ. ಏನೇ ಇರಲಿ ಹೀನಾಯ ಸೋಲಿನ ನಂತರ ಬಿಜೆಪಿಯು ಇದೀಗ ಪಕ್ಷ ಸಂಘಟನೆಗೆ ಮತ್ತೆ ಒತ್ತು ನೀಡಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಭುಗಿಲೆದ್ದ ಕಾವೇರಿ ಹೋರಾಟ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದೇ ಬಿಎಸ್‍ವೈ ಪ್ರವಾಸಕ್ಕೆ ಚಾಲನೆ ನೀಡಿರುವುದು ವಿಶೇಷ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಎಸ್‍ವೈ ರಾಜ್ಯ ಪ್ರವಾಸ ಕೈಗೊಂಡು ಮತ್ತೆ ಪಕ್ಷ ಸಂಘಟನೆಗೆ ಮೂಂದಾಗಿದ್ದಾರೆ. ಆದರೆ ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ.   

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ.40 ಕಮಿಷನ್ ವಿಧಾನಸೌಧದಲ್ಲಿ ಮಾತ್ರವಲ್ಲ ಜಗನ್ನಾಥ ಭವನದಲ್ಲೂ ಕಮಿಷನ್ ವ್ಯವಹಾರ ಇತ್ತು ಎಂಬುದು “ಟಿಕೆಟ್ ಹಗರಣ”ದಿಂದ ತಿಳಿಯುತ್ತಿದೆ. ಬಿ.ಎಸ್.ಯಡಿಯೂರಪ್ಪನವರು ಸರ್ಕಾರದ ವಿರುದ್ಧ ರಾಜ್ಯ ಪ್ರವಾಸ ಮಾಡುವ ಬದಲು ಕಾಸಿಗಾಗಿ ಟಿಕೆಟ್ ಮಾರಾಟ ಮಾಡುವ ಭ್ರಷ್ಟ ಜನತಾ ಪಾರ್ಟಿಯನ್ನು ಸ್ವಚ್ಛಗೊಳಿಸಲು ಪ್ರವಾಸ ಮಾಡಲಿ’ ಎಂದು ಟೀಕಿಸಿದೆ.

ಇದನ್ನೂ ಓದಿ: ತಮಿಳುನಾಡಿಗೆ ನೀರು ಹರಿಸಲು ಪ್ರಾಧಿಕಾರ ಆದೇಶ

‘ಬಿಜೆಪಿ ಟಿಕೆಟ್ ಹೆಸರಲ್ಲಿ ಕೋಟಿ ಕೋಟಿ ರೂಪಾಯಿಯ ಅಕ್ರಮ ವಹಿವಾಟು ನಡೆದಿದ್ದು, ವಂಚನೆ ನಡೆದಿದ್ದು ಎಲ್ಲವೂ ಸಿ.ಟಿ.ರವಿವರಿಗೆ ಹಾಗೂ ಬಿಜೆಪಿಯ ಬಾಡಿಗೆ ಬಾಷಣಕೋರನಿಗೆ ಮೊದಲೇ ತಿಳಿದಿತ್ತಂತೆ. ಅಕ್ರಮವೊಂದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇಕೆ ಬಿಜೆಪಿ? ಅಥವಾ ಬಿಜೆಪಿ ನಿಜಕ್ಕೂ ಹಣ ವಸೂಲಿ ಮಾಡಿ ಟಿಕೆಟ್ ನೀಡುವ ಕೆಲಸ ಮಾಡಿತ್ತೇ? ಈ ಅಕ್ರಮದಲ್ಲಿ ಯಾರೇ ಬಾಗಿಯಾಗಿದ್ದರೂ ಬಿಡುವುದಿಲ್ಲ, ಸೂಕ್ತ ಸಾಕ್ಷ್ಯಧಾರವಿದ್ದರೆ ಬಿಜೆಪಿಯ ದಂಡನಾಯಕರನ್ನೂ ಬಂಧಿಸಿ ವಿಚಾರಣೆ ನಡೆಸಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ’ವೆಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News