ಬಿಜೆಪಿಯಿಂದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು!

PM Narendra Modi Union Cabinet: ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರವು ಕಾಂಗ್ರೆಸ್‌, ಕೇಂದ್ರ ಸಚಿವ ಸಂಪುಟ ರಚಿಸಿರುವ ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ! ಎಂದ ಟೀಕಿಸಿದೆ.

Written by - Puttaraj K Alur | Last Updated : Jun 10, 2024, 10:55 PM IST
  • ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ!
  • ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮಂತ್ರಿಗಿರಿ ಇಲ್ಲ, ಲಿಂಗಾಯತರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ಇಲ್ಲ
  • ಲಿಂಗಾಯತರು, ದಲಿತರು, ಹಿಂದುಳಿದವರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಎಂದ ಕಾಂಗ್ರೆಸ್
ಬಿಜೆಪಿಯಿಂದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು! title=
ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟವು ಪ್ರಧಾನಿ ಮೋದಿ ಸೇರಿದಂತೆ 72 ಮಂದಿಯ ಸಚಿವ ಸಂಪುಟ ರಚಿಸಲಾಗಿದೆ. ಸದ್ಯ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆಯಾಗಿದೆ. ಕೇಂದ್ರ ಸಂಪುಟದಲಿಲ ರಾಜ್ಯದ ಐವರಗೆ ಸಚಿವ ಸ್ಥಾನ ಲಭಿಸಿದೆ. ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರಿಗೆ ೩ನೇ ಅವಧಿಗೂ ಹಣಕಾಸು ಖಾತೆ ನೀಡಲಾಗಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಲಾಗಿದೆ.   

ಪ್ರಹ್ಲಾದ್‌ ಜೋಶಿಗೆ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀಡಲಾಗಿದೆ. ವಿ.ಸೋಮಣ್ಣಗೆ ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಖಾತೆ ನೀಡಲಾಗಿದೆ. ಅದೇ ರೀತಿ ಶೋಭಾ ಕರಂದ್ಲಾಜೆಗೆ ರಾಜ್ಯ ಸಣ್ಣ, ಮಧ್ಯಮ ಕೈಗಾರಿಕೆ ಮತ್ತು ಕಾರ್ಮಿಕ ಖಾತೆ ನೀಡಲಾಗಿದೆ. ಕೇಂದ್ರ ಸಚಿವ ಸಂಪುಟ ರಚನೆ ವಿಚಾರವಾಗಿ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿದೆ. 

ಇದನ್ನೂ ಓದಿ: ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರವು ಕಾಂಗ್ರೆಸ್‌, ಕೇಂದ್ರ ಸಚಿವ ಸಂಪುಟ ರಚಿಸಿರುವ ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ! ಎಂದ ಟೀಕಿಸಿದೆ. ದಲಿತರಿಗೆ ಮಂತ್ರಿಗಿರಿ ಇಲ್ಲ, ಹಿಂದುಳಿದ ವರ್ಗದವರಿಗೆ ಮಂತ್ರಿಗಿರಿ ಇಲ್ಲ, ಲಿಂಗಾಯತರಿಗೆ ರಾಜ್ಯ ಖಾತೆ ಬಿಟ್ಟರೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ಇಲ್ಲವೆಂದು ಟೀಕಿಸಿದೆ.

ಮಾಜಿ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿಯವರಿಗೆ ಕೇಂದ್ರ ಸಚಿವ ಸ್ಥಾನ ಗಗನ ಕುಸುಮವಾಗಿದೆ! ಲಿಂಗಾಯತರು, ದಲಿತರು, ಹಿಂದುಳಿದವರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಬಿಜೆಪಿʼ ಎಂದು ಕಾಂಗ್ರೆಸ್‌ ಕುಟುಕಿದೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಒಂದೇ ದಿನದಲ್ಲಿ ಹೆಚ್ಚಳವಾಯ್ತು ನೀರಿನ ಮಟ್ಟ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News