ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಪ್ರಭಾರ ಭತ್ಯೆ ದುಪ್ಪಟ್ಟು ಹೆಚ್ಚಳ!

ವೇತನ ಶ್ರೇಣಿಯ ಕನಿಷ್ಟ ಹಂತದಲ್ಲಿ ಮೊದಲ ಮೂರು ತಿಂಗಳಿಗೆ ಶೇ.7.5 ಹಾಗೂ ಆ ನಂತರದ ಅವಧಿಗೆ ಶೇ.15 ಪ್ರಭಾರ ಭತ್ಯೆಯನ್ನು ನಿಗದಿ ಮಾಡಿ ಏಪ್ರಿಲ್‌ 30 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

Updated: May 4, 2019 , 06:53 AM IST
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಪ್ರಭಾರ ಭತ್ಯೆ ದುಪ್ಪಟ್ಟು ಹೆಚ್ಚಳ!

ಬೆಂಗಳೂರು: ತಮ್ಮ ಹುದ್ದೆಯ ಜತೆ ಬೇರೊಂದು ಹುದ್ದೆಯ ನಿರ್ವಹಣೆ ಮಾಡುವ, ಪ್ರಭಾರ ನಿರ್ವಹಿಸುವ ಸರ್ಕಾರಿ ನೌಕರರಿಗೆ ಪ್ರಭಾರ ಭತ್ಯೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ನಿಯಮ 32 ಮತ್ತು 68ರ ಅಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ಹುದ್ದೆಯಿಂದ ಕರ್ತವ್ಯದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿ ಇರಿಸಿದ್ದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಟ ಹಂತದಲ್ಲಿ ಮೊದಲ ಮೂರು ತಿಂಗಳಿಗೆ ಶೇ.7.5 ಹಾಗೂ ಆ ನಂತರದ ಅವಧಿಗೆ ಶೇ.15 ಪ್ರಭಾರ ಭತ್ಯೆಯನ್ನು ನಿಗದಿ ಮಾಡಿ ಏಪ್ರಿಲ್‌ 30 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳ ಕೊರತೆಯಿಂದಾಗಿ ಒಂದಕ್ಕಿಂತ್ ಅಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಸ್ತುತ ನೀಡುತ್ತಿರುವ ಶೇ. 7.5 ದರದ ಪ್ರಭಾರ ಭತ್ಯೆ ಕಡಿಮೆ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾರ್ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ ಪರಿಶೀಲಿಸಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. 7 ವರ್ಷಗಳ ಬಳಿಕ ಪ್ರಭಾರ ಭತ್ಯೆಯನ್ನು ಪರಿಷ್ಕರಿಸಲಾಗಿದೆ.