ಬೆಂಗಳೂರು : ರಾಜ್ಯ ಸರ್ಕಾರ ಜೂನ್ 7 ರಿಂದ 14ರ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಅನ್ಲಾಕ್ ಪ್ರಕ್ರಿಯೆಗೆ ಸಹ ಸಿದ್ಧತೆ ನಡೆಯುತ್ತಿದೆ.
ಸರ್ಕಾರ ಭಾನುವಾರ ಉಪ ನೋಂದಣಿ ಕಚೇರಿಗಳನ್ನು(Sub-Registrar offices) ತೆರೆಯಲು ಅನುಮಿತಿ ನೀಡಿದೆ. ರಾಜ್ಯದಲ್ಲಿರುವ 243 ಉಪ ನೋಂದಣಿ ಕಚೇರಿಗಳು ಇಂದಿನಿಂದಲೇ ತೆರೆಯಲಿವೆ.
ಇದನ್ನೂ ಓದಿ : S.R. Bommai Birthday: ಐತಿಹಾಸಿಕ ಎಸ್.ಆರ್.ಬೊಮ್ಮಾಯಿ ಪ್ರಕರಣ ಸ್ಮರಿಸುತ್ತಾ...
ಸರ್ಕಾರಕ್ಕೆ ಆದಾಯ ತಂದುಕೊಂಡುವ ಪ್ರಮುಖ ಮೂಲ ಮುದ್ರಾಂಕ ಹಾಗೂ ನೋಂದಣಿ ಶುಲ್ಕ. ಹೀಗಾಗಿ ಉಪ ನೋಂದಣಿ ಕಚೇರಿಗಳ(Sub-Registrar office)ನ್ನು ತೆರೆಯಲು ಒಪ್ಪಿಗೆ ಕೊಡಲಾಗಿದೆ.
ಇದನ್ನೂ ಓದಿ : KSRTC-BMTC : ರಾಜ್ಯದಲ್ಲಿ ಅನ್ಲಾಕ್ ಗೆ ಸಿದ್ಧತೆ : ಸರ್ಕಾರದಿಂದ ಸಾರಿಗೆ ನೌಕರರಿಗೆ ಬುಲಾವ್!
ಈಗಾಗಲೇ ಸರ್ಕಾರ ರಫ್ತು ಆಧಾರಿತ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಿತ್ತು. ಈಗ ಕೋವಿಡ್(COVID-19) ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಲೇ ಕಚೇರಿಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ.
Karnataka Government permitted District Registrar and Sub-Registrar offices to function strictly adhering #COVID19 appropriate behaviour pic.twitter.com/5BNAHiX26P
— ANI (@ANI) June 6, 2021
ಇದನ್ನೂ ಓದಿ : CN Ashwath Narayan : 'ಬಿಎಸ್ವೈ ಸಂಪುಟದಲ್ಲಿ ಶಾಸಕ ಮುನಿರತ್ನಗೆ ಸಿಗುತ್ತೆ ಅವಕಾಶ'
ಮೇ ತಿಂಗಳಿನಲ್ಲಿ ಕೊರೋನಾ ಕರ್ಫ್ಯೂ(Corona Curfew) ಘೋಷಣೆ ಮಾಡಿದ ಬಳಿಕ ಉಪ ನೋಂದಣಿ ಕಚೇರಿಗಳನ್ನು ಮುಚ್ಚಲಾಗಿತ್ತು. ಸರ್ಕಾರ ಲಾಕ್ಡೌನ್ ಅನ್ನು ಜೂನ್ ತನಕ ವಿಸ್ತರಣೆ ಮಾಡಿದ ಹಿನ್ನಲೆ ಕಚೇರಿಗೆ ಬೀಗ ಬಿದ್ದಿತ್ತು.
ಇದನ್ನೂ ಓದಿ : `ಹೈಕಮಾಂಡ್ ಸೂಚಿಸಿದ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ..!'
ಕರ್ನಾಟಕ(Karnataka)ದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಭಾನುವಾರದ ವರದಿಯಂತೆ 12,209 ಹೊಸ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ದರ ಶೇ 7.71ಕ್ಕೆ ಇಳಿಕೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ