ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸು, 24 ಗಂಟೆ ಭರ್ಜರಿ ಮಳೆಯ ಮುನ್ಸೂಚನೆ

ರಾಜ್ಯದ ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿ 15 ಸೆಂ.ಮಿ ಮಳೆ ದಾಖಲಾಗಿದೆ. ಕಾರ್ಕಳದಲ್ಲಿ 12 ಸೆಂ.ಮಿ, ಕೊಲ್ಲೂರು ಮತ್ತು ಮಂಕಿಯಲ್ಲಿ ತಲಾ 11 ಸೆ.ಮೀ,  ಭಟ್ಕಳ, ಗೋಕರ್ಣ ಮತ್ತು ಮೂಡಬಿದಿರೆಯಲ್ಲಿ ತಲಾ 9 ಸೆಂ.ಮೀ ಮಳೆ ಸುರಿದಿದೆ.   

Written by - Ranjitha R K | Last Updated : Jun 20, 2021, 04:30 PM IST
  • ರಾಜ್ಯಾದ್ಯಂತ ಮುಂಗಾರು ಮಳೆ ಬಿರುಸುಪಡೆದಿದೆ
  • ಕರಾವಳಿ, ಮಲೆನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ.
  • ಬೆಂಗಳೂರಿನಲ್ಲೂ ಯಾವುದೇ ಕ್ಷಣದಲ್ಲಿ ಮಳೆ ಬೀಳಬಹುದಾಗಿದೆ.
ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸು, 24 ಗಂಟೆ ಭರ್ಜರಿ ಮಳೆಯ ಮುನ್ಸೂಚನೆ title=
ರಾಜ್ಯಾದ್ಯಂತ ಮುಂಗಾರು ಮಳೆ ಬಿರುಸುಪಡೆದಿದೆ (file photo)

ಬೆಂಗಳೂರು : ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಮಳೆ ಚುರುಕಾಗಿದೆ. ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Heavy rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ, ಮಲೆನಾಡು ಮತ್ತು ಒಳನಾಡಿನಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ.

ಆಗುಂಬೆಯಲ್ಲಿ ಅತಿ ಹೆಚ್ಚು ಮಳೆ:
ರಾಜ್ಯದ ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿ 15 ಸೆಂ.ಮಿ ಮಳೆ ದಾಖಲಾಗಿದೆ. ಕಾರ್ಕಳದಲ್ಲಿ 12 ಸೆಂ.ಮಿ, ಕೊಲ್ಲೂರು ಮತ್ತು ಮಂಕಿಯಲ್ಲಿ ತಲಾ 11 ಸೆ.ಮೀ,  ಭಟ್ಕಳ, ಗೋಕರ್ಣ ಮತ್ತು ಮೂಡಬಿದಿರೆಯಲ್ಲಿ ತಲಾ 9 ಸೆಂ.ಮೀ ಮಳೆ ಸುರಿದಿದೆ. 

ಇದನ್ನೂ ಓದಿ : Ration Card: ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇದು ಸುಲಭ ಪ್ರಕ್ರಿಯೆ

ಮುಂದಿನ 24 ಗಂಟೆಗಳ ಮುನ್ಸೂಚನೆ:
ಕರಾವಳಿಯ ಬಹುತೇಕ ಎಲ್ಲಾ ಕಡೆ ಕುಂಭದ್ರೋಣ ಮಳೆ ಬೀಳುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಮಳೆಯ ಸಾಧ್ಯತೆ ಇದೆ.  ಮುಂದಿನ 24 ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ (Heavy rain) ಮುನ್ಸೂಚನೆ ನೀಡಲಾಗಿದೆ. 

ಭಾರೀ ಮಳೆಯ ಮುನ್ಸೂಚನೆ
ಸಂಪೂರ್ಣ ಕರಾವಳಿ, ಹಾಸನ( Hassan), ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯ ಮನ್ಸೂಚನೆ ನಿಡಲಾಗಿದೆ. ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ (Fisherman alert) ಸೂಚನೆ ನೀಡಲಾಗಿದೆ. 

ಇದನ್ನೂ ಓದಿ : ಲಾಕ್ ಡೌನ್ ನಲ್ಲಿ ಮತ್ತಷ್ಟು ಸಡಿಲಿಕೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು (Bengaluru) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣ ಇರಲಿದೆ.  ಕೆಲವೊಂದು ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News