ಬೆಂಗಳೂರು: ಲೋಕಸಭಾ ಚುನಾವಣೆಗೆ ಇಂದು ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈ ಹಂತದಲ್ಲಿ ರಾಜ್ಯದ 2,63,38,227 ಮತದಾರರು ಮತಚಲಾಯಿಸಲಿದ್ದಾರೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 30,410 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಒಟ್ಟು ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು-ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಈ 14 ಲೋಕಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ನಿಂದ 10, ಜೆಡಿಎಸ್ ನಿಂದ 4, ಬಿಜೆಪಿಯಿಂದ 13 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 241 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಇಂದು ನಿರ್ಧರಿಸಲಿದ್ದಾನೆ.
ಕ್ಷೇತ್ರ | ಬಿಜೆಪಿ | ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ |
ಬೆಂಗಳೂರು ಗ್ರಾಮಾಂತರ | ಅಶ್ವಥ್ ನಾರಾಯಣ | ಡಿ.ಕೆ. ಸುರೇಶ್ |
ಬೆಂಗಳೂರು ಉತ್ತರ | ಡಿ.ವಿ.ಸದಾನಂದ ಗೌಡ | ಕೃಷ್ಣಬೈರೇಗೌಡ |
ಬೆಂಗಳೂರು ಕೇಂದ್ರ | ಪಿ.ಸಿ. ಮೋಹನ್ | ರಿಜ್ವಾನ್ ಅರ್ಷದ್ |
ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಬಿ.ಕೆ. ಹರಿಪ್ರಸಾದ್ |
ಚಿಕ್ಕಬಳ್ಳಾಪುರ | ಬಿ.ಎನ್. ಬಚ್ಚೇಗೌಡ | ವೀರಪ್ಪ ಮೊಯ್ಲಿ |
ಕೋಲಾರ | ಎಸ್. ಮುನಿಸ್ವಾಮಿ | ಕೆ.ಎಚ್. ಮುನಿಯಪ್ಪ |
ಮೈಸೂರು-ಕೊಡಗು | ಪ್ರತಾಪ್ ಸಿಂಹ | ಸಿ.ಎಚ್.ವಿಜಯಶಂಕರ್ |
ಹಾಸನ | ಎ. ಮಂಜು | ಪ್ರಜ್ವಲ್ ರೇವಣ್ಣ |
ದಕ್ಷಿಣ ಕನ್ನಡ | ನಳಿನ್ ಕುಮಾರ್ ಕಟೀಲ್ | ಮಿಥುನ್ ರೈ |
ಚಿತ್ರದುರ್ಗ | ಎ. ನಾರಾಯಣಸ್ವಾಮಿ | ಬಿ.ಎನ್. ಚಂದ್ರಪ್ಪ |
ತುಮಕೂರು | ಜಿ.ಎಸ್. ಬಸವರಾಜು | ಹೆಚ್.ಡಿ. ದೇವೇಗೌಡ |
ಮಂಡ್ಯ | ಸುಮಲತಾ ಅಂಬರೀಶ್ (ಬಿಜೆಪಿ ಬೆಂಬಲಿತ) |
ನಿಖಿಲ್ ಕುಮಾರಸ್ವಾಮಿ |
ಚಾಮರಾಜನಗರ | ವಿ. ಶ್ರೀನಿವಾಸ ಪ್ರಸಾದ್ | ಆರ್. ಧ್ರುವನಾರಾಯಣ |
ಉಡುಪಿ-ಚಿಕ್ಕಮಗಳೂರು | ಶೋಭಾ ಕರಂದ್ಲಾಜೆ | ಪ್ರಮೋದ್ ಮಧ್ವರಾಜ್ |