ಕಾರವಾರ : ವಯುಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬಳಿ ಬಂದಿದ್ದ ವಿವಾಹಿತ ಮಹಿಳೆಗೆ ದೈವದ ಹೆಸರಿನಲ್ಲಿ ಮದುವೆಯಾಗುವುದಾಗಿ ದೈವ ನರ್ತಕ ಅಭಯವಿತ್ತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಂಬಾರಕೊಡ್ಲೆಯಲ್ಲಿ ನಡೆದಿದೆ.
ಬೆಳಗಾವಿಯಿಂದ ಅಂಕೋಲಕ್ಕೆ ತನ್ನ ವಯುಕ್ತಿಕ ಸಮಸ್ಯೆ ನಿವಾರಣೆಗೆ ಕಾಲಭೈರವ ದೇವರ ಬೆಳಗಾವಿ ಮೂಲದ ಮಹಿಳೆ ಬಳಿ ಬಂದಿದ್ದರು. ಈ ವೇಳೆ ಮದುವೆಯಾದ ಮಹಿಳೆಯನ್ನ ತಾನೇ ವರಿಸುವುದಾಗಿ ದೈವ ನರ್ತಕ ಪಾತ್ರಿ ವಾಗ್ದಾನವಿತ್ತಿದ್ದಾರೆ. ಇದೀಗ ಕಾಂತಾರ ಸ್ಟೈಲ್ನಲ್ಲಿ ಮದುವೆಯಾಗುವುದಾಗಿ ದೈವ ನರ್ತಕ ಹೇಳಿದ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: “ದೇವೇಗೌಡರ ಇಬ್ಬರು ಮಕ್ಕಳು… ಅವರಿಗೆ ಇಬ್ಬರು ಹೆಂಡಂದಿರು!”
ಇನ್ನು ವಿಡಿಯೋದಲ್ಲಿ, ದೈವ ನರ್ತಕ, ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲದೆ, ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ.. ಇದು ಸತ್ಯ ಸತ್ಯ ಎಂದು ನರ್ತಕ ಹೇಳಿದ್ದಾರೆ.
ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈ ಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತಾ, ಕಾಂತಾರ ಸ್ಟೈಲ್ನಲ್ಲಿ ಓ... ಎಂದು ಕೂಗುತ್ತಿರುವ ದೃಶ್ಯವನ್ನೂ ಸಹ ಕಾಣಬಹುದು. ಇನ್ನು ವಿಡಿಯೋ ವೈರಲ್ ಆಗುತ್ತಿದ್ದು, ವಿವಾಹಿತ ಮಹಿಳೆಯನ್ನ ವರೆಸುವ ಸಲುವಾಗಿ ದೈವದ ಹೆಸರನ್ನ ನರ್ತಕ ಬಳಿಸಿಕೊಂಡನೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ, ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದೆ.
ಇದನ್ನೂ ಓದಿ: ಶಾಲೆ ಮಕ್ಕಳ ಪೇನ್ಸಿಲ್ ಮೇಲೂ ಟ್ಯಾಕ್ಸ್ ಹಾಕಿದ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಆಕೆಯನ್ನು ವರಿಸಲು ದೈವದ ಹೆಸರು ಬಳಸಿ ವಂಚನೆ ಮಾಡಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಅಂಕೋಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ, ಅರ್ಥನಾರೀಶ್ವರ ದೈವ ಮೈಮೇಲೆ ಬರುತ್ತದೆ ಎಂದು ಜನರನ್ನು ದೈವ ನರ್ತಕ ನಂಬಿಸಿದ್ದಾಗಿ ಜನ ದೂರುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.