Karnataka new Cabinet ministers : ದೆಹಲಿಯಲ್ಲಿರುವ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಜೊತೆಯಲ್ಲಿ ಸಂಪುಟ ರಚನೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಶೀರ್ಘದಲ್ಲೆ ಹೊಸ ಸಚಿವರ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ.
ಮತದಾನಕ್ಕೂ ಮುನ್ನ ಸಿಎಂ ಬೊಮ್ಮಾಯಿ ಪೂಜೆ. ಗಾಯತ್ರಿ ತಪೋಭೂಮಿಗೆ ಬೊಮ್ಮಾಯಿ ಭೇಟಿ. ಶಿಗ್ಗಾವಿ ತಾ. ತಡಸ ಗ್ರಾಮದಲ್ಲಿರುವ ತಪೋಭೂಮಿ. ಗಾಯತ್ರಿ ದೇವಿ, ಆಂಜನೇಯನ ದರ್ಶನ ಪಡೆದ ಸಿಎಂ. ಪುತ್ರ ಭರತ್, ಪತ್ನಿ ಚೆನ್ನಮ್ಮ, ಮಗಳು ಅದಿತಿ ಸಾಥ್.
ಮತ ಜಾತ್ರೆಯಲ್ಲಿ ಸ್ಟಾರ್ ನಟರ ವೋಟಿಂಗ್. ನಾವು ಮತ ಹಾಕಿದ್ದೇವೆ.. ನೀವೂ ಮತ ಹಾಕಿ, ಹಾಕಿಸಿ. ಯಾರು ಅಭಿವೃದ್ಧಿ ಮಾಡಿದ್ದಾರೆ ಅವರಿಗೆ ಮತ ಹಾಕಿ. ವೋಟಿಂಗ್ ಮಾಡಿ ಎಂದು ನಟ ಗಣೇಶ್ ಮನವಿ.
ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ. ಕುಟುಂಬಸ್ಥರ ಜೊತೆ ಬಂದು ಲಕ್ಷ್ಮೀ ಮತ ಚಲಾವಣೆ. ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ. ಹೆಬ್ಬಾಳ್ಕರ್ಗೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸಾಥ್. ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಶಾಸಕಿ.
Karnataka Vidhansabha Chunav 2023 Latest Update: ಮತದಾನ ಮಾಡಲು ಹಳೆ ಮಾಟಳ್ಳಿ ಗ್ರಾಮದಿಂದ ತೋಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ಆಗಿದೆ. ಮೃತ ವ್ಯಕ್ತಿಯನ್ನು ಹನೂರು ತಾಲೂಕಿನ ತೋಕರೆ ಗ್ರಾಮದ ಪುಟ್ಟಸ್ವಾಮಿ (42) ಎಂದು ಗುರುತಿಸಲಾಗಿದೆ.
Karnataka Vidhansabha Chunav 2023 Latest Update: ಹುಬ್ಬಳ್ಳಿಯ ಚನ್ನಪೇಟ್ನಲ್ಲಿರುವ ಅಂಬೇಡ್ಕರ್ ನಗರದಲ್ಲಿ ಮತಗಟ್ಟೆಯ ಗೋಡೆಯ ಸುತ್ತ ಭಾರತೀಯ ಸಾಂಪ್ರದಾಯಿಕವಾದ ಚಿತ್ರಕಲೆಗಳ ಆಕರ್ಷಕವಾದ ದೃಶ್ಯಗಳು ಕಂಡು ಬಂದಿದ್ದು ಮತದಾರರನ್ನು ಆಕರ್ಷಿಸಲು ಈ ರೀತಿಯ ವಿಭಿನ್ನ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
Karnataka Vidhansabha Chunav 2023 Latest Update: ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
Karnataka Vidhansabha Chunav 2023 Latest Update: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಹೌದು.. ಒಂದೇ ಮತ ಕೇಂದ್ರದಲ್ಲಿ 400 ಕ್ಕೂ ಅಧಿಕ ಮತದಾರರ ಹೆಸರುಗಳು ಡಿಲೀಟ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಚುನಾವಣೆ 2023: ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಬೆಕ್ಕು ಕೂಡ ಮತಗಟ್ಟೆಗೆ ಬಂದಿರುವ ಘಟನೆ ನಡೆದಿದೆ. ಈ ಬೆಕ್ಕನ್ನು ಕಂಡು ಮತಗಟ್ಟೆ ಸಿಬ್ಬಂದಿ ಅಚ್ಚರಿ ಗೊಂಡಿದ್ದು, ಅದನ್ನು ದೂರ ಕಳುಹಿಸಲು ಕೂಡ ಪ್ರಯತ್ನಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇದೆ. ಮತದಾನ ದಿನದಂದು ರಾಜ್ಯದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತ್ ಗಾಗಿ ಬರೋಬ್ಬರಿ 1.56 ಲಕ್ಷ ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಸಾವಿರ ಪೊಲೀಸರು, 304 ಡಿವೈಎಸ್ಪಿ, 991 ಇನ್ಸ್ಪೆಕ್ಟರ್, 20610 ಪಿಎಸ್ಐ ಹಾಗೂ ಹೊರರಾಜ್ಯದಿಂದ 8,500 ಪೊಲೀಸರು, 650 ಸಿಎಪಿಎಫ್ ತುಕಡಿಗಳು ನಿಯೋಜನೆ ಮಾಡಲಾಗಿದೆ. ಒಟ್ಟು 1.56 ಲಕ್ಷ ಪೊಲೀಸರಿಂದ ಮತದಾನದಿಂದು ಬಂದೋಬಸ್ತ್ ಏರ್ಪಡಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ದಿನ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಸ್ಟಾರ್ ಪ್ರಚಾರಕರು ಹಾಗೂ ಆಯಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರಿಲ್ಲದ ರಾಜಕೀಯ ನಾಯಕರುಗಳೂ ಸೇರಿದಂತೆ ಎಲ್ಲ ಮುಖಂಡರು ಕ್ಷೇತ್ರ ತೊರೆದಿದ್ದು, ಯಾವುದೇ ಅಭ್ಯರ್ಥಿ ಧ್ವನಿ ವರ್ಧಕಗಳನ್ನು ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತಯಾಚಿಸುವಂತಿಲ್ಲ. ಆದರೆ, ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಇಂದು ಸಂಜೆ 6 ಗಂಟೆಯವರೆಗೂ ಮತ ಕೇಳಬಹುದು.
Karnataka Assembly Elections: ಇನ್ನು ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕಾಗಿ ಒಟ್ಟು 58, 282 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಎಪಿಎಫ್ ಹಾಗೂ ಪೊಲೀಸರಿಂದ ಭದ್ರತೆ ನಿಯೋಜನೆ ಮಾಡಲಾಗಿದೆ.
Karnataka Assembly Elections: ನಗರದ 4 ಅಪರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್, ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.