ಕಲಬುರಗಿ : ಇಂದು ಕಲಬುರಗಿ ಜಿಲ್ಲಾಡಳಿತದಲ್ಲಿ ಭೂ ದಾಖಲೆಗಳ ಆಧುನಿಕರಣ ಯೋಜನೆಗೆ ಚಾಲನೆ ನೀಡಲಾಯಿತು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ
> ಭೂದಾಖಲೆಗಳ ಆಧುನಿಕರಣ ((Modernization of Land Record (MLR)) ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯದ ಎಲ್ಲಾ ಕಂದಾಯ ಕಛೇರಿಗಳ ಅಭಿಲೇಖಾಲಯ ಶಾಖೆಯಲ್ಲಿನ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಡಿಜಿಟೈಜೇಶನ್ ಮಾಡುವ ಮೂಲಕ ದಾಖಲೆಗಳು ಶಿಥಿಲವಾಗುವುದು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದು.
> ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಕೋರಿಕೆಗಳು ರೈತರ ಭೂಮಿಗೆ ಸಂಬಂಧಿಸಿರುವುದರಿಂದ ಸದರಿ ದಾಖಲೆಗಳನ್ನು ಡಿಜಿಟೈಜೇಶನ್ ಮಾಡುವುದು ತುಂಬಾ ಅನಿವಾರ್ಯವೂ ಆಗಿರುತ್ತದೆ. ಅಲ್ಲದೇ ದಾಖಲೆಗಳ ಶಿಥಿಲ ಹಾಗೂ ಅಲಭ್ಯತೆಯಿಂದ ಸಾರ್ವಜನಿಕರು ನ್ಯಾಯಾಲಯದಲ್ಲಿ ದಾವೆ ದಾಖಲಿಸುವುದು ನಿಲ್ಲುತ್ತದೆ.
> ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ದಾಖಲೆಗಳನ್ನು ಗಣಕೀಕರಣ (Digitize) ಗೊಳಿಸುವ ನಿಟ್ಟಿನಲ್ಲಿ ದಾಖಲೆಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಹಾಗೂ ಡಾಟಾ ಎಂಟ್ರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
> ಹೊಸ ತಂತ್ರಾಂಶ - "ಕಂದಾಯ ದಾಖಲೆಗಳ ಗಣಕೀಕರಣ" ವನ್ನು ಮಾನ್ಯ ಕಂದಾಯ ಸಚಿವರು ಅನಾವರಣ ಮಾಡಿರುತ್ತಾರೆ. ಸದರಿ ಅಂತರ್ಜಾಲ ತಾಣದ ವಿಳಾಸ : https://recordroom.karanataka.gov.in ಆಗಿರುತ್ತದೆ
> 'ಕಂದಾಯ ದಾಖಲೆಗಳ ಗಣಕೀಕರಣ' ತಂತ್ರಾಂಶದಲ್ಲಿ ದಾಖಲೆಗಳನ್ನು upload ಮಾಡಲು ರಾಜ್ಯದ ಪ್ರತಿ ಅಭಿಲೇಖಾಲಯದ ವಿಷಯ ನಿರ್ವಾಹಕರ, ಶಿರಸ್ತೇದಾರರ, ತಹಸೀಲ್ದಾರರ ಹಾಗೂ ಸಹಾಯಕ ಆಯುಕ್ತರವರ login ಗಳನ್ನು ಸೃಜಿಸಲಾಗಿದೆ.
> ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ತಾಲ್ಲೂಕು ಕಛೇರಿಯನ್ನು 100 ದಿನಗಳೊಳಗಾಗಿ ಸಂಪೂರ್ಣ ಗಣಕೀಕರಣಗೊಳಿಸಲು ಅಯ್ಕೆ ಮಾಡಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕನ್ನು ಸದರಿ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಳ್ಳಲಾಗಿದೆ.
> ಈ ಸಂಬಂಧ 2023-24 ನೇ ಸಾಲಿಗೆ DILRMP ಯೋಜನೆಯಡಿ ಪ್ರತಿ ತಾಲ್ಲೂಕು ಕಛೇರಿಗೆ 10 Data Entry Operator, 8 ಕಂಪ್ಯೂಟರ್, 3 ಸ್ಕ್ಯಾನರ್ ಗಳನ್ನು ಖರೀದಿಸಲು ಹಾಗೂ ಮಾನವ ಸಂಪನ್ಮೂಲಗಳ ಸೇವೆಯನ್ನು ಪಡೆಯಲು ತಗಲುವ ಅಂದಾಜು ವೆಚ್ಚದ ಆಧಾರದ ಮೇಲೆ ದಿನಾಂಕ: 18.01.2024 ರಂದು ಪ್ರತಿ ಜಿಲ್ಲೆಗೆ ರೂ. 14,67,500/- ಗಳಂತೆ DILRMP Gudelines ಅನ್ವಯ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ.
> ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಭಿಲೇಖಾಲಯದಲ್ಲಿರುವ ಒಟ್ಟು 47813 ಕಡತಗಳು ನೂರು ದಿನಗಳಲ್ಲಿ ಸ್ಕ್ಯಾನಿಂಗ್ ಹಾಗೂ ಗಣಕೀಕರಣ (Digitize) ಮಾಡುವ ಗುರಿ ಹೊಂದಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.