ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ತುಮಕೂರು ಮೂಲಕದ ಕನ್ನಡಿಗ ಮಧು ಹೇಮೆಗೌಡ ಅವರು ಇಟಲಿಯಲ್ಲಿ ಕೊರೊನಾ ಪೀಡಿತ ಭಾರತೀಯರ ಜೀವ ಉಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಈಗ ಅವರು ಇಟಲಿ ದೇಶದಲ್ಲಿ ವಿನೂತನ ಸಾಧನೆಯನ್ನು ಮಾಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ದೂರದ ಇಟಲಿಯಲ್ಲಿ ಹಾರಿಸಿದ್ದಾರೆ. ಹೌದು,ಈಗ ಅವರು ಇಟಲಿ (Italy) ದೇಶದಲ್ಲಿ ಸರ್ಕಾರಿ ನರ್ಸ್ ಹುದ್ದೆಗಾಗಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟಕ್ಕೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರೆಂದರೆ ಸಾಮಾನ್ಯವಾದ ಕೆಲಸವಲ್ಲ, ಏಕೆಂದರೆ ಸುಮಾರು 5 ಸಾವಿರ ಇಟಲಿ ನರ್ಸ್ ಗಳ ಜೊತೆ ಸ್ಪರ್ಧಿಸಿ ಲಿಖಿತ ಹಾಗೂ ಮೌಖಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹೆಗ್ಗಳಿಕೆ ಅವರದ್ದಾಗಿದೆ, ಅವರು ಇಟಲಿಯಲ್ಲಿ 2009 ರಿಂದ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನರ್ಸ್ ನೌಕರಿಯನ್ನು ಅರಸುತ್ತಾ ಇಟಲಿಗೆ ಹೋಗುವ ಮೊದಲು ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಪದವಿಯನ್ನು ಪಡೆದುಕೊಂಡಿದ್ದರು.ಮುಂದೆ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಅವರು ಸಿಕ್ಕಿನಲ್ಲಿರುವ ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಪಡೆದರು.ಇಟಲಿಯಲ್ಲಿ ಕೇವಲ ನರ್ಸ್ ಹುದ್ದೆಗೆ ಸೀಮಿತವಾಗದ ಅವರು 2015 ರಲ್ಲಿ ಕನ್ನಡಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದರು.ಕೊರೊನಾ (Coronavirus) ಇಟಲಿಯಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅವರು ಭಾರತದ ಹಲವಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಈಗ ಮಧು ಹೇಮೆಗೌಡ ತಮ್ಮ ಸಾಧನೆಯ ಕುರಿತಾದ ಸಂತಸವನ್ನು ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಳ್ಳುತ್ತಾ" ನಾನು ಈಗ ಇಟಲಿಯಲ್ಲಿ ಐದು ಸಾವಿರ ನರ್ಸ್ ಗಳ ಜೊತೆ ಸ್ಪರ್ಧಿಸಿ ಲಿಖಿತ ಹಾಗೂ ಮೌಖಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರನಾಗಿದ್ದೇನೆ, ಒಂದು ಆಸ್ಪತ್ರೆಯಲ್ಲಿ 15 ನೇ ಶ್ರೇಯಾಂಕ ಲಭಿಸಿದ್ದರೆ, ಇನ್ನೊಂದು ಸಾರ್ವಜನಿಕ ಆಸ್ಪತ್ರೆಯಲ್ಲಿ 17ನೇ ಶ್ರೇಯಾಂಕ ದೊರೆತಿದೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.