ಜಾಮಿಯಾ ಮಸೀದಿಯಲ್ಲಿ ದೇಗುಲ! ಇಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ

ದೇಶದಲ್ಲಿ ಜ್ಞಾನವ್ಯಾಪಿ ಮಸೀದಿಯ ವಿವಾದ ಆರಂಭವಾದ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದವೂ ಸಹ ಭುಗಿಲೆದ್ದಿದೆ.

Written by - Yashaswini V | Last Updated : Jun 4, 2022, 07:12 AM IST
  • ಒಂದು ಕಡೆ ಹಿಂದೂ ಪರ ಸಂಘಟನೆಗಳು ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ
  • ಇನ್ನೊಂದು ಕಡೆ ಈ ಚಲೋವನ್ನು ತಡೆಯಲು ಮಂಡ್ಯ ಜಿಲ್ಲಾಡಳಿತ ಸಜ್ಜು
  • ಶ್ರೀರಂಗಪಟ್ಟಣದಲ್ಲಿ ಪೊಲೀಸರ ಹೈ ಅಲರ್ಟ್
ಜಾಮಿಯಾ ಮಸೀದಿಯಲ್ಲಿ ದೇಗುಲ! ಇಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ  title=
Srirangapatna Chalo

ಶ್ರೀರಂಗಪಟ್ಟಣ: ಜ್ಞಾನವಾಪಿ ಮಸೀದಿಯ ವಿವಾದ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನದಿಂದ ದಿನಕ್ಕೆ ತಾರಕ್ಕೆ ಏರಿದೆ. ಈ ನಿಟ್ಟಿನಲ್ಲಿ ಇಂದು ವಿಹೆಚ್‌ಪಿ ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತವು ಸಹ ಯೋಜನೆ ರೂಪಿಸಿದೆ.

ಜಾಮಿಯಾ ಮಸೀದಿ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. 1784ರಲ್ಲಿ ಟಿಪ್ಪು ಸುಲ್ತಾನ್ ಆಂಜನೇಯಸ್ವಾಮಿ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದಕ್ಕೆ ಪೂರಕವೆಂಬಂತೆ ಜಾಮಿಯಾ ಮಸೀದಿಯ ಒಳಬಾಗಿದಲ್ಲಿ ಇರುವ ದೇವಸ್ಥಾನದ ಕಂಬಗಳು, ಕಲ್ಯಾಣಿ, ಗೋಪುರದ ಕಳಶಗಳು ಸಾಕ್ಷ್ಯಗಳಾಗಿವೆ. ಹೀಗಾಗಿ ಮಸೀದಿಯನ್ನು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನಾಗಿ ಪರಿವರ್ತನೆ ಮಾಡಬೇಕೆಂದು  ಹಿಂದೂ ಸಂಘಟನೆಗಳು  ಆಗ್ರಹಿಸಿವೆ.

ಈ ವಿವಾದವನ್ನು ನಾವು ನ್ಯಾಯಾಂಗದಲ್ಲೆ ಬಗೆಹರಿಸಿಕೊಳ್ಳುತ್ತೇವೆ, ಕೋರ್ಟ್ ನಮಗೆ ನ್ಯಾಯವನ್ನು ನೀಡುತ್ತದೆ ಎಂದು ಭಜರಂಗ ಸೇನೆ ನ್ಯಾಯಾಂಗದ ಮೆಟ್ಟಿಲು ಏರುತ್ತಿದೆ. ಇತ್ತ ನ್ಯಾಯಾಂಗದ ಹೋರಾಟದ ಜೊತೆ ಪ್ರತಿಭಟನೆಯ ಹೋರಾಟವು ಇರಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಪದಾಧಿಕಾರಿಗಳು ಶ್ರೀರಂಗಪಟ್ಟಣದ ಚಲೋಗೆ ಇಂದು ಕರೆ ನೀಡಿವೆ. ಈ ಶ್ರೀರಂಗಪಟ್ಟಣ ಚಲೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ಪಾಲ್ಗೊಳ್ಳಲಿದ್ದು, ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಜಾಮಿಯಾ ಮಸೀದಿಯ ಒಳಭಾಗಕ್ಕೆ ಪ್ರವೇಶ ಮಾಡಿ ಅಲ್ಲಿ ಆಂಜನೇಯನ ಪೂಜೆ ಮಾಡುತ್ತೇವೆ ಎಂದು ಹಿಂದೂ ಸಂಘಟನೆಯ ಪದಾಧಿಕಾರಿಗಳು ಹೇಳುತ್ತಿದ್ದು, ಈ ಬಗ್ಗೆ ಜಿಲ್ಲೆಯಾದ್ಯಾಂತ ಕರಪತ್ರಗಳನ್ನು ಸಹ ಹಂಚಿದ್ದಾರೆ.

ಇದನ್ನೂ ಓದಿ- ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿಚಾರದಲ್ಲಿ ತಹಶೀಲ್ದಾರ್ ಎಡವಟ್ಟು!

ಜಿಲ್ಲಾಡಳಿತಡ ನಡೆ:
ಒಂದು ಕಡೆ ಹಿಂದೂ ಪರ ಸಂಘಟನೆಗಳು ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದರೆ, ಇನ್ನೊಂದು ಕಡೆ ಈ ಚಲೋವನ್ನು ತಡೆಯಲು ಮಂಡ್ಯ ಜಿಲ್ಲಾಡಳಿತ ಸಜ್ಜುಗೊಂಡಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಶುಕ್ರವಾರ ಸಂಜೆ 6 ಗಂಟೆಯಿಂದ ಜೂನ್ 5ರ ಸಂಜೆ 6 ಗಂಟೆಯವರಗೆ ನಿಷೇದಾಜ್ಞೆ ಜಾರಿಗೊಳಿಸಿದ್ದು, ಈ ದಿನಗಳಂದು ಯಾರು ಗುಂಪುಗಟ್ಟುವುದು ಮತ್ತು ಪ್ರತಿಭಟನೆ ಮಾಡುವುದು ಮಾಡಬಾರದು. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಶುಕ್ರವಾರ ಸಂಜೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ಗಂಟೆಯವರಗೆ ಮದ್ಯ ಮಾರಟಕ್ಕೂ ಸಹ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇನ್ನೂ ಮುಂಜಾಗ್ರತ ಕ್ರಮವಾಗಿ ಶ್ರೀರಂಗಪಟ್ಟಣದ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೂಡ ಕಲ್ಪಿಸಲಾಗಿದೆ.

ಶ್ರೀರಂಗಪಟ್ಟಣದಲ್ಲಿ  ಪೊಲೀಸರ ಹೈ ಅಲರ್ಟ್:-
ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಜಾಮಿಯಾ  ಮಸೀದಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಇದಲ್ಲದೆ, ಜಾಮಿಯಾ ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಿ ಭದ್ರತ ಕೈಗೊಳ್ಳಲಾಗಿದ್ದು ಜಾಮಿಯಾ ಮಸೀದಿ ರಕ್ಷಣೆಗೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ವಿಧಿಸಿ ನಿಷೇಧಾಜ್ಞೆ ‌ಜಾರಿಗೊಳಿಸಲಾಗಿದ್ದು ಶ್ರೀರಂಗಪಟ್ಟಣದ 5 ಕಿ.ಮೀ ಸುತ್ತಲೂ ನಿಷೇದಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಇದಲ್ಲದೆ, ಹೊರಗಿನ ವ್ಯಕ್ತಿಗಳಿಗೆ ಶ್ರೀರಂಗಪಟ್ಟಣ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು ಶ್ರೀರಂಗಪಟ್ಟಣಕ್ಕೆ ಬರುವ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು  ಹೆದ್ದಾರಿಯಲ್ಲಿ ತಡೆದು ಬಂಧಿಸಿಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ- ಬೀಜ, ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸಿ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ

ಒಟ್ಟಾರೆ, ಹಿಂದೂಪರ ಕಾರ್ಯಕರ್ತರ ಹೋರಾಟ ಹಿನ್ನೆಲೆ ಶ್ರೀರಂಗಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇಂದು ಹಿಂದೂಪರ ಕಾರ್ಯಕರ್ತರ ಹೋರಾಟ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News