close

News WrapGet Handpicked Stories from our editors directly to your mailbox

ಗಿರೀಶ್ ಕಾರ್ನಾಡ್ ಆಗಲಿಕೆಗೆ ಗಣ್ಯರ ಸಂತಾಪ

ಗಿರೀಶ್ ಕಾರ್ನಾಡ್ ಅವರ ನಿಧನ ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ ಎಂದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Updated: Jun 10, 2019 , 01:52 PM IST
ಗಿರೀಶ್ ಕಾರ್ನಾಡ್ ಆಗಲಿಕೆಗೆ ಗಣ್ಯರ ಸಂತಾಪ

ಬೆಂಗಳೂರು: ಹಿರಿಯ ಸಾಹಿತಿ, ರಂಗಕರ್ಮಿ, ನಟ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನ ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ. 

ಗಿರೀಶ್ ಕಾರ್ನಾಡರ ನಿಧನಕ್ಕೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.