ಅಕ್ಟೋಬರ್ 2 ರಂದು "ಮಾತೃ ಪೂರ್ಣ" ಯೋಜನೆಗೆ ಚಾಲನೆ

1.20 ಮಿಲಿಯನ್ ಮಹಿಳೆಯರಿಗೆ ಯೋಜನೆಯ ಪ್ರಯೋಜನ

Last Updated : Sep 27, 2017, 04:17 PM IST
ಅಕ್ಟೋಬರ್ 2 ರಂದು "ಮಾತೃ ಪೂರ್ಣ" ಯೋಜನೆಗೆ ಚಾಲನೆ title=

ಬೆಂಗಳೂರು: ರಾಜ್ಯದಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಅದಕ್ಕಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಸಿಎಂ ಅಕ್ಟೋಬರ್ 2 ರಂದು ಮತ್ತೊಂದು ಮಹತ್ತರವಾದ ಯೋಜನೆಯನ್ನು ಜಾರಿಗೊಳಿಸಲಿದ್ದಾರೆ ಅದೇ "ಮಾತೃ ಪೂರ್ಣ" ಯೋಜನೆ. 

ಈ ಯೋಜನೆಯ ಮೂಲಕ 1.20 ಮಿಲಿಯನ್ ಗರ್ಭಿಣಿಯರಿಗೆ ಮಧ್ಯಾಹ್ನದ ಬಿಸಿ ಊಟ ದೊರೆಯಲಿದೆ ಎಂದು ತಿಳಿದುಬಂದಿದೆ.

ಪ್ರತಿ ಅಂಗನವಾಡಿಯಲ್ಲೂ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ದಿನನಿತ್ಯ ಮಧ್ಯಾಹ್ನದ ಬಿಸಿ ಊಟ ದೊರೆಯಲಿದೆ. 

Trending News