“ಇದು ಕೇವಲ ಪ್ರಾರಂಭ”- ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

Virat Kohli on Pitch: ವಿರಾಟ್ ಕೊಹ್ಲಿ ಪ್ರಸ್ತುತ 2024 ರ ಟಿ20 ವಿಶ್ವಕಪ್‌’ನಲ್ಲಿ ಭಾಗವಹಿಸಲು ಅಮೆರಿಕಾ ತಲುಪಿದ್ದಾರೆ. ಇಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡುತ್ತಿದೆ. ಇದರೊಂದಿಗೆ ಟೀಂ ಇಂಡಿಯಾ ತನ್ನ ಸಿದ್ಧತೆಯನ್ನು ಪರೀಕ್ಷಿಸಲಿದೆ.

Written by - Bhavishya Shetty | Last Updated : Jun 1, 2024, 08:45 PM IST
    • ಕೊಹ್ಲಿ ಊಹಿಸಿರದ ಸಂಗತಿಯೊಂದು ಸಂಭವಿಸಲಿದೆ.
    • ವಿರಾಟ್ ಕೊಹ್ಲಿ ಪ್ರಸ್ತುತ 2024 ರ ಟಿ20 ವಿಶ್ವಕಪ್‌’ನಲ್ಲಿ ಭಾಗವಹಿಸಲು ಅಮೆರಿಕಾ ತಲುಪಿದ್ದಾರೆ
    • ಅಮೆರಿಕದಲ್ಲಿ ಕ್ರಿಕೆಟ್ ಆಡುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
“ಇದು ಕೇವಲ ಪ್ರಾರಂಭ”-  ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹೀಗಂದಿದ್ದೇಕೆ? title=
virat kohli

Virat Kohli on Pitch: ನಮ್ಮ ಜೀವನದಲ್ಲಿ ಯಾವ ವಿಷಯಗಳು ನಡೆಯುವುದಿಲ್ಲ ಎಂದು ಭಾವಿಸಿರುತ್ತೇವೋ ಅಂತಹದ್ದೇ ಘಟನೆ ಕೆಲವೊಮ್ಮೆ ಸಂಭವಿಸಿರುತ್ತದೆ. ಇದೀಗ ವಿರಾಟ್ ಕೊಹ್ಲಿ ವಿಷಯದಲ್ಲೂ ಹೀಗೇ ಆಗಿದೆ. ಕೊಹ್ಲಿ ಊಹಿಸಿರದ ಸಂಗತಿಯೊಂದು ಸಂಭವಿಸಲಿದೆ.

ಇದನ್ನೂ ಓದಿ: ಒಂದು ಲೋಟ ಬಿಸಿನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ ಸಾಕು: ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್

ವಿರಾಟ್ ಕೊಹ್ಲಿ ಪ್ರಸ್ತುತ 2024 ರ ಟಿ20 ವಿಶ್ವಕಪ್‌’ನಲ್ಲಿ ಭಾಗವಹಿಸಲು ಅಮೆರಿಕಾ ತಲುಪಿದ್ದಾರೆ. ಇಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡುತ್ತಿದೆ. ಇದರೊಂದಿಗೆ ಟೀಂ ಇಂಡಿಯಾ ತನ್ನ ಸಿದ್ಧತೆಯನ್ನು ಪರೀಕ್ಷಿಸಲಿದೆ. ಈ ಪಂದ್ಯದ ಮೊದಲು, ಕೊಹ್ಲಿ ಮಾತನಾಡಿದ್ದು, “ನಾನು ಎಂದಿಗೂ ನಂಬದಿರದ ಒಂದು ಕೆಲಸ ಮಾಡಲಿದ್ದೇನೆ” ಎಂದು ಹೇಳಿದ್ದಾರೆ.

ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಮೆರಿಕದಲ್ಲಿ ಕ್ರಿಕೆಟ್ ಆಡುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನಿಜ ಹೇಳಬೇಕೆಂದರೆ, ಅಮೆರಿಕದಲ್ಲಿ ಕ್ರಿಕೆಟ್ ಆಡುತ್ತೇನೆ, ವಿಶ್ವಕಪ್‌’ನಲ್ಲಿ ಭಾಗವಹಿಸುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಈಗ ಅದು ನಿಜವಾಗಿದೆ. ಕ್ರಿಕೆಟ್ ಅಮೆರಿಕದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ವಿಶ್ವಕಪ್‌’ಗೆ ಸಂಬಂಧಿಸಿದಂತೆ ಈ ಬದಲಾವಣೆಯನ್ನು ಒಪ್ಪಿಕೊಳ್ಳಲು ಅಮೆರಿಕ ಸಿದ್ಧವಾಗಿದೆ" ಎಂದಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಬೇಕಾದ್ರೆ ಎಷ್ಟು ಪಂದ್ಯ ಗೆಲ್ಲಬೇಕು?

ಇದು ಉತ್ತಮ ಆರಂಭ

“ಇದು ಅಮೆರಿಕಕ್ಕೆ ಉತ್ತಮ ಆರಂಭ. ಇದು ಭಾರಿ ಪರಿಣಾಮ ಬೀರುತ್ತದೆ. ಡೊಮಿನೊ ಎಫೆಕ್ಟ್‌’ನ ಪ್ರಾರಂಭವಾಗಿದ್ದು, ದೀರ್ಘಕಾಲ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಕೊಹ್ಲಿ ಹೇಳಿದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News