ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಎಂ.ಬಿ.ಪಾಟೀಲ್: ಬಿಜೆಪಿ ಟೀಕೆ

‘ಚುನಾವಣಾ ಸಂದರ್ಭದಲ್ಲಿ ಮತ್ತೆ ವೀರಶೈವ -ಲಿಂಗಾಯಿತ ಸಮುದಾಯದಲ್ಲಿ ಗೊಂದಲ‌ ಮೂಡಿಸುವುದು ನಿಮ್ಮ ಉದ್ದೇಶವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Sep 4, 2021, 03:15 PM IST
  • ‘ದ್ವಿನಾಲಗೆಯ ಎಂ.ಬಿ.ಪಾಟೀಲ್ ಅವರೇ ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ನೀವು #UTurn ತೆಗೆದುಕೊಂಡಿದ್ದೀರಿ’
  • ‘ದಿನನಿತ್ಯ ಶರಣರ ವಚನಗಳನ್ನು ಲೋಕಕ್ಕೆ ಬೋಧಿಸುವ ಎಂ.ಬಿ.ಪಾಟೀಲ್ ನೀವೆಂದಾದರೂ ಅದನ್ನು ಪಾಲಿಸಿದ್ದೀರಾ?’
  • ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಟೀಕಿಸಿದ ಕರ್ನಾಟಕ ಬಿಜೆಪಿ
ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಎಂ.ಬಿ.ಪಾಟೀಲ್: ಬಿಜೆಪಿ ಟೀಕೆ title=
ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಟೀಕಿಸಿದ ಬಿಜೆಪಿ (Photo Courtesy: @Zee News)

ಬೆಂಗಳೂರು: ಪ್ರತ್ಯೇಕ ಧರ್ಮ(Separate Religion)ದ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಕರ್ನಾಟಕ ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಎಂ.ಬಿ.ಪಾಟೀಲ್ ಅವರೇ ಒಂದೆಡೆ ನಿಮ್ಮ ಶಿಷ್ಯವೃಂದ ವೀರಶೈವ ಪದ ಬಳಕೆಯೇ ಬೇಡ ಎನ್ನುತ್ತದೆ. ಇನ್ನೊಂದೆಡೆ ನೀವು ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದೀರಿ’ ಎಂದು ವ್ಯಂಗ್ಯವಾಡಿದೆ.

#ಧರ್ಮವಿಭಜಕಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ(Karnataka BJP) ‘ಚುನಾವಣಾ ಸಂದರ್ಭದಲ್ಲಿ ಮತ್ತೆ ವೀರಶೈವ -ಲಿಂಗಾಯಿತ ಸಮುದಾಯದಲ್ಲಿ ಗೊಂದಲ‌ ಮೂಡಿಸುವುದು ನಿಮ್ಮ ಉದ್ದೇಶವೇ?’ ಎಂದು ಎಂ.ಬಿ.ಪಾಟೀಲ್ ಅವರಿಗೆ ಪ್ರಶ್ನಿಸಿದೆ.

‘ದ್ವಿನಾಲಗೆಯ ಎಂ.ಬಿ.ಪಾಟೀಲ್(MB Patil) ಅವರೇ, ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ನೀವು #UTurn ತೆಗೆದುಕೊಂಡಿದ್ದೀರಿ. ಚುನಾವಣೆಯ ನಂತರ ಮಠಾಧೀಶರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದೀರಿ. ಹಾಗಾದರೆ ನಿಮ್ಮದು ಚುನಾವಣೆಗೆ ಮೊದಲೊಂದು ಧರ್ಮ, ಚುನಾವಣೆಯ ನಂತರ ಇನ್ನೊಂದು ಧರ್ಮವೇ !!?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: 1 ಕೋಟಿ ರೂ. ಮೌಲ್ಯದ ಕಾರಿನಲ್ಲಿ ಮಾಜಿ ಸಿಎಂ ಬಿಎಸ್‍ವೈ ರಾಜ್ಯ ಪ್ರವಾಸ..!

‘ದಿನನಿತ್ಯ ಶರಣರ ವಚನಗಳನ್ನು ಲೋಕಕ್ಕೆ ಬೋಧಿಸುವ ಎಂ.ಬಿ.ಪಾಟೀಲ್ ಅವರೇ, ನೀವೆಂದಾದರೂ ಅದನ್ನು ಪಾಲಿಸಿದ್ದೀರಾ? ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕೆನ್ನುತ್ತದೆ ಶರಣ ಸಂಪ್ರದಾಯ. ಆದರೆ ನಿಮ್ಮ ನಡೆನುಡಿಗಳಲ್ಲಿ ಗೊಂದಲ ತುಂಬಿದೆ. ರಾಜಕೀಯ ಕಾರಣಕ್ಕಾದರೂ ಸ್ಥಿರ ನಿಲುವು ಪ್ರದರ್ಶಿಸಿ’ ಅಂತಾ ಬಿಜೆಪಿ(BJP) ಟ್ವೀಟ್ ಮೂಲಕ ಕುಟುಕಿದೆ.

ಬಿಜೆಪಿ ಟ್ವೀಟ್ ಗೆ ಪ್ರತಿಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ್(MP Patil), ‘ಬಿಜೆಪಿಯವರೆ ನನಗೆ ನಿಮ್ಮಸಂಕಟ ಅರ್ಥವಾಗುತ್ತದೆ. ಮೂಲತಃ ನೀವು ಲಿಂಗಾಯತ-ವೀರಶೈವ ಸಂಸ್ಕೃತಿ ವಿರೋಧಿ.ನಿಮಗೆ ಲಿಂಗಾಯತರ ಮತ ಬೇಕು, ಅವರ ಒಳಿತಲ್ಲ. ಮುಂದಿನ ಬಾರಿ 100% ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ಬಿಜೆಪಿ ಬಹುಮತ ಗಳಿಸಿದರೆ ಬೊಮ್ಮಾಯಿ(Basavaraj Bommai) ಅಥವಾ ಮತ್ಯಾವ ಲಿಂಗಾಯತರು ಮುಖ್ಯಮಂತ್ರಿಯಾಗುವುದಿಲ್ಲವೆಂದು ಬರೆದು ಕೊಡುತ್ತೇನೆ’ ಅಂತಾ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸಿದ್ದು ಸವದಿ ರಕ್ಷಿಸಿದ ಬಿಜೆಪಿಯಿಂದ ಮಹಿಳೆಯರು ರಕ್ಷಣೆ ಬಯಸುವುದು ವ್ಯರ್ಥ: ಕಾಂಗ್ರೆಸ್ ಕಿಡಿ

ಮುಂಬರುವ 2023ರ ವಿಧಾನಸಭಾ ಚುನಾವಣೆಯ ಬಳಿಕ ಜೊತೆಗೂಡಿ ಸಾಮೂಹಿಕ ನಾಯಕತ್ವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದ್ದರು. ಬಳಿಕ ವರಸೆ ಬದಲಿದ್ದ ಅವರು ಪ್ರತ್ಯೇಕ ಧರ್ಮದ ಕೂಗು ಇಲ್ಲ, ನಾನು ಯಾವುದೇ ನಾಯಕತ್ವ ವಹಿಸುವುದಿಲ್ಲವೆಂದು ಹೇಳಿದ್ದರು.  ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡಬೇಕು ಎಂಬುದಷ್ಟೇ ನನ್ನ ಅಭಿಪ್ರಾಯ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲವೆಂದು ಸ್ಪಷ್ಟನೆ ನೀಡಿದ್ದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News