ಬಿಹಾರ ಸಿಎಂ ಆಯ್ಕೆಗೆ ಇಂದು NDA ಸಭೆ: ನಿರ್ಧಾರವಾಗುತ್ತಾ ನಿತೀಶ್ ಕುಮಾರ್ ಭವಿಷ್ಯ

ಮಧ್ಯಾಹ್ನ 12.30ಕ್ಕೆ ಎನ್‌ಡಿಎ(NDA ಶಾಸಕಾಂಗ ಪಕ್ಷದ ಸಭೆ

Last Updated : Nov 15, 2020, 11:31 AM IST
  • ಮಧ್ಯಾಹ್ನ 12.30ಕ್ಕೆ ಎನ್‌ಡಿಎ(NDA ಶಾಸಕಾಂಗ ಪಕ್ಷದ ಸಭೆ
  • ಮಿತ್ರ ಪಕ್ಷ ಬಿಜೆಪಿ ವತಿಯಿಂದ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೋ ಅಥವಾ ದಲಿತ ಮುಖಂಡರಿಗೆ ಡಿಸಿಎಂ ಹುದ್ದೆ ನೀಡಬೇಕೋ
  • ಮುಂದಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರ ಆಯ್ಕೆ, ಮಂತ್ರಿ ಮಂಡಲ ರಚನೆ, ಸಿಎಂ-ಡಿಸಿಎಂ ಮತ್ತು ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಕುರಿತು ಎನ್‍ಡಿಎ ನಾಯಕರು ಮಹತ್ವದ ಚರ್ಚೆ
ಬಿಹಾರ ಸಿಎಂ ಆಯ್ಕೆಗೆ ಇಂದು NDA ಸಭೆ: ನಿರ್ಧಾರವಾಗುತ್ತಾ ನಿತೀಶ್ ಕುಮಾರ್ ಭವಿಷ್ಯ title=

ನವದೆಹಲಿ: ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಲುವಾಗಿ ಇಂದು ಮಧ್ಯಾಹ್ನ 12.30ಕ್ಕೆ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಮಿತ್ರ ಪಕ್ಷ ಬಿಜೆಪಿ ವತಿಯಿಂದ ಸುಶೀಲ್ ಕುಮಾರ್(Sushil Kumar Modi) ಮೋದಿ ಉಪ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೋ ಅಥವಾ ದಲಿತ ಮುಖಂಡರಿಗೆ ಡಿಸಿಎಂ ಹುದ್ದೆ ನೀಡಬೇಕೋ ಎಂಬ ಬಗ್ಗೆ ಮಹತ್ವದ ಚರ್ಚೆಗಳೂ ಮುಂದುವರಿದಿವೆ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರಾಹುಲ್ ಗಾಂಧಿ ಕುರಿತ ಬರಾಕ್ ಒಬಾಮಾ ಅವರ ಹೇಳಿಕೆ ಅಸಹ್ಯಕರ ಎಂದ ಶಿವಸೇನೆ

ಇಂದು ಅಪರಾಹ್ನ 12.30ಕ್ಕೆ ಸಭೆ ಆರಂಭವಾಗಲಿದ್ದು. ಸರ್ಕಾರ ರಚನೆ, ಮುಂದಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರ ಆಯ್ಕೆ, ಮಂತ್ರಿ ಮಂಡಲ ರಚನೆ, ಸಿಎಂ-ಡಿಸಿಎಂ ಮತ್ತು ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಕುರಿತು ಎನ್‍ಡಿಎ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ತೀವ್ರ ಅಪಾಯದ ಮಟ್ಟ ತಲುಪಿದ ವಾಯುಮಾಲಿನ್ಯ

ಈ ಸಭೆಯಲ್ಲಿ ಜೆಡಿಯು ಪಕ್ಷದಿಂದ ನಿತೀಶ್ ಕುಮಾರ್, ಅಶೋಕ್ ಚೌಧರಿ, ವಿಜಯ್ ಚೌಧರಿ ಮತ್ತು ವಿಜೇಂದ್ರ ಯಾದವ್ ಭಾಗವಹಿಸಿದ್ಧಾರೆ. ಬಿಜೆಪಿ ಪರವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, ಸುಶೀಲ್ ಮೋದಿ, ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಮೊದಲಾದವರು ಭಾಗವಹಿಸಿ ಗಹನ ಚರ್ಚೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡ ಬಳಿಕ ಎನ್‍ಡಿಎ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ.

ಡಿಸೆಂಬರ್ 2020 ರ ವೇಳೆಗೆ ಭಾರತಕ್ಕೆ 100 ಮಿಲಿಯನ್ ಅಸ್ಟ್ರಾಜೆನೆಕಾದ COVID-19 ಲಸಿಕೆ

ಇದೇ ವೇಳೆ ಸಂಯುಕ್ತ ಜನತಾದಳದ ಶಾಸಕಾಂಗ ಪಕ್ಷಚ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜೆಡಿಯುಎಲ್‍ಪಿ ಸಭೆಯಲ್ಲಿ ಪಕ್ಷದ 43 ಶಾಸಕರು ಭಾಗವಹಿಸಿದ್ದರು. ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಹಾದಿ ಸುಗಮವಾಗಿದೆ. ನಿನ್ನೆ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಎನ್‍ಡಿಎ ನಾಯಕರು ಸಭೆ ನಡೆಸಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ. ಸಭೆ ನಂತರ ಈ ಬಗ್ಗೆ ಅಕೃತವಾಗಿ ತಿಳಿಸಲಾಗುವುದು ಎಂದು ಹೇಳಿದ್ದರು.

2024 ರ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಬಿಜೆಪಿ ತಯಾರಿ...!

ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ರಾಜ್ಯ ಬಿಜೆಪಿ ಘಟಕದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಬಿಜೆಪಿಎಲ್‍ಪಿ ಸಭೆಯಲ್ಲಿ ನೂತನ 74 ಶಾಸಕರು ಭಾಗವಹಿಸಿದ್ದರು.

ಬಿಹಾರದ ಹೊಸ ಸರ್ಕಾರದಲ್ಲಿ ದಲಿತ ಮುಖಂಡರೊಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಹಿನ್ನಲೆಯಲ್ಲಿ ಈ ಸಭೆಗೆ ಭಾರೀ ಪ್ರಾಮುಖ್ಯತೆ ಲಭಿಸಿದೆ. ಬಿಹಾರದ ಪಕ್ಷದ ಧುರೀಣ ಕಾಮೇಶ್ವರ್ ಚೌಹಲ್ ಉಪ ಮುಖ್ಯಮಂತ್ರಿಯಾಗುತ್ತಾರೋ ಅಥವಾ ಸುಶೀಲ್ ಕುಮಾರ್ ಮೋದಿ ಡಿಸಿಎಂ ಆಗಿ ಮುಂದುವರಿಯುತ್ತಾರೋ ಎಂಬ ಬಗ್ಗೆ ಮಧ್ಯಾಹ್ನ ನಂತರ ತಿಳಿದುಬರಲಿದೆ.

'ಇವತ್ತು ರಾತ್ರಿ ಏನಾಗತ್ತೋ?' ಸರ್ಕಾರ ಹಾಗೂ ಹವಾಮಾನ ತಜ್ಞರು ಆತಂಕದಲ್ಲಿ!

ಎನ್‌ಡಿಎ ಮೈತ್ರಿಕೂಟದ ಪರ ಬಿಜೆಪಿಯು 74 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮಿತ್ರಪಕ್ಷ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧವಾಗಿದೆ. ನಿತೀಶ್ ಕುಮಾರ್ ಅವರೇ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈಗಾಗಲೇ ದೃಢಪಡಿಸಿದ್ದಾರೆ.

ಚೀನಾದ ವಿಸ್ತರಣಾವಾದಿ ನೀತಿ ಮಾನಸಿಕ ಅಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ-ಪ್ರಧಾನಿ ಮೋದಿ

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 10ರಂದು ಪ್ರಕಟಗೊಂಡಿದ್ದು, ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸಿತ್ತು. ಆರ್‌ಜೆಡಿ ನೇತೃತ್ವದ ಮಹಾಗಠಬಂಧನ 110 ಸ್ಥಾನಗಳನ್ನಷ್ಟೇ ಗಳಿಸಿದೆ. 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಿಜೆಪಿ 74 ಹಾಗೂ ಜೆಡಿಯು 43 ಸ್ಥಾನ ಗಳಿಸಿವೆ.

Trending News