ನಿಪ್ಪಾಣಿ ಶ್ರೀರಾಮ ಮಂದಿರ : ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ 2 ಪತ್ರಗಳು ದೇವಸ್ಥಾನದಲ್ಲಿ ಲಭ್ಯ

ನಿಪ್ಪಾಣಿಯ ಐತಿಹಾಸಿಕ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ 2 ಪತ್ರಗಳು ದೇವಸ್ಥಾನದಲ್ಲಿ ಲಭಿಸಿದೆ.

Written by - Zee Kannada News Desk | Last Updated : Mar 9, 2024, 06:58 PM IST
  • ಫೆಬ್ರವರಿ 7ರಂದು ಮತ್ತು ಫೆಬ್ರವರಿ 28ರಂದು ಜನರ ಕೈಗೆ ಎರಡು ಪತ್ರಗಳು ದೊರಕಿವೆ ಮತ್ತು ಮಾರ್ಚ್ 7 ರಂದು ನಿಪ್ಪಾಣಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ
  • ಈ ರೀತಿ ಬೆದರಿಕೆ ಹೋಗಿರುವ ಕಾರಣ 13cctv ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಮತ್ತು ಪೊಲೀಸರ ಕಾವಲನ್ನು ನಿಯೋಜನೆ ಮಾಡಲಾಗಿದೆ
  • ಈ ರೀತಿಯ ಎರಡು ಪತ್ರಗಳು ದೊರಕಿದ್ದು, ಮಾರ್ಚ್ 20 ಅಥವಾ 21ರಂದು ಮಂದಿರವನ್ನು ಸ್ಫೋಟಿಸಾಗುವುದು ಎಂದು ಪತ್ರದಲ್ಲಿ ಬರೆದಿದ್ದಾರೆ
ನಿಪ್ಪಾಣಿ ಶ್ರೀರಾಮ ಮಂದಿರ : ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ 2 ಪತ್ರಗಳು ದೇವಸ್ಥಾನದಲ್ಲಿ ಲಭ್ಯ title=

Nippani Sriram Mandir : ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿರುವ ಐತಿಹಾಸಿಕ ಶ್ರೀ ರಾಮ ಮಂದಿರದಲ್ಲಿ ಬಾಂಬ್ ಸ್ಪೋಟಿಸುವ ಕುರಿತು ಬೆದರಿಕೆ ಒಡ್ಡುವ ಎರಡು ಪತ್ರಗಳು ದೇವಸ್ಥಾನದಲ್ಲಿ ಸಿಕ್ಕಿವೆ

ದೇವಸ್ಥಾನದಲ್ಲಿ ಎರಡು ಪತ್ರಗಳು ದೊರಕಿದ್ದು , ಫೆಬ್ರವರಿ 7ರಂದು ಮತ್ತು ಫೆಬ್ರವರಿ 28ರಂದು ಜನರ ಕೈಗೆ ಎರಡು ಪತ್ರಗಳು ದೊರಕಿವೆ ಮತ್ತು ಮಾರ್ಚ್ 7 ರಂದು ನಿಪ್ಪಾಣಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ

ಮೊದಲ ಪತ್ರ ಫೆಬ್ರವರಿ 7ರಂದು ಮಧ್ಯಾಹ್ನ 1.30ಕ್ಕೇ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪಾಕೆಟ್ ನಲ್ಲಿ ಮಂದಿರದ ಪೂಜಾರಿ ಸುರೇಶ್ ದೇಶಪಾಂಡೆ ಅವರಿಗೆ ಸಿಕ್ಕಿದೆ ಎರಡನೆಯ ಪತ್ರ ಫೆಬ್ರವರಿ 28ರಂದು ಬೆಳಿಗ್ಗೆ 6.30ಕ್ಕೆ ಶ್ರೀರಾಮ ಮಂದಿರದ ಎದುರು ಇರುವ ಹನುಮ ಮಂದಿರದ ಕಟ್ಟೆಯ ಮೇಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ

ಇದನ್ನು ಓದಿ : Rameswaram Cafe Blast Case : ಬಾಂಬರ್ ನ ಭಾವಚಿತ್ರಗಳನ್ನು ಬಿಡುಗಡೆ ಮಾಡಿದ ರಾಷ್ಟ್ರೀಯ ತನಿಖಾ ದಳ

ಈ ರೀತಿ ಬೆದರಿಕೆ ಹೋಗಿರುವ ಕಾರಣ 13cctv ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಮತ್ತು ಪೊಲೀಸರ ಕಾವಲನ್ನು ನಿಯೋಜನೆ ಮಾಡಲಾಗಿದೆ ಜನರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಪಿಐ ಬಿ ಎಸ್ ತಳವಾರ್ ಹೇಳಿದ್ದಾರೆ

ನಮ್ಮ ಬಾಬರಿ ಮಸೀದಿಯನ್ನು ನೀವು ನೆಲಸಮಗೊಳಿಸಿದ್ದೀರಿ.  ನಾವು ಸುಮ್ಮನೆ ಹೇಗೆ ಕುಳಿತುಕೊಳ್ಳಲು ಸಾಧ್ಯ . ಮೋದಿ ಮೋದಿ ಎಂದು ಏಕೆ ಗುಂಗು ಹಚ್ಚಿಕೊಂಡಿದ್ದೀರಿ? ಅಲ್ಲಾಹ ಇಚ್ಚಿಸಿದ್ದಲ್ಲಿ ಭಾಷಣ ಮಾಡುವಾಗ ದಾಳಿಗೆ ತುತ್ತಾಗಿ ಮೋದಿ ಸಾಯುವನು. ನೀವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದೀರಿ. ಆದರೆ ಇಲ್ಲಿ ಮೆರವಣಿಗೆ ತೆಗೆದು ನಮ್ಮ ಗಲ್ಲಿಯಲ್ಲಿ ಬಂದು ಜೈರಾಮ ಘೋಷಣೆಗಳನ್ನು ಕೂಗಿ ನಮ್ಮನ್ನು ಕೆರೆಗಿಸುತ್ತೀರಿ. ಈಗ ಸಾಕು ಮಾಡಿ ಕರ್ನಾಟಕ ಪೂರ್ಣ ಭಾರತದ ವಿನಾಶ ನಿಪ್ಪಾಣಿಯಿಂದ ಆರಂಭಗೊಳ್ಳಲಿದೆ. ಈ ಮಂದಿರವನ್ನು ನಾವು ಸ್ಪೋಟಿಸುತ್ತೇವೆ. ಈ ಮಂದಿರದ ಸಮಿತಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಕೇಳಿದ್ದೇವೆ ಈ ಮಂದಿರದ ಎಲ್ಲರಿಗೂ ಗುಂಡು ಹಾರಿಸಲಿದ್ದೇವೆ .ಇದು ಬಿಜೆಪಿ ಆರ್ ಎಸ್ ಎಸ್ ಗಳ ಅಡ್ಡೆಯಾಗಿದೆ, ನಿಮಗೆ ನಮ್ಮ 10 ನಿಮಿಷ ಅಜಾನ ನ ಲೋಡ್ ಸ್ಪೀಕರ್ ಇಷ್ಟ ಆಗುವುದಿಲ್ಲ, ನೀವು ದೊಡ್ಡ ಸೌಂಡ್ ಹಾಕಿ ಕುಣಿಯುವುದು ನಿಮಗೆ ಸರಿ ಅನಿಸುತ್ತದೇಯೇ? ದೇಶ ಸ್ವತಂತ್ರ ಬಂದಾಗಿನಿಂದ ನಾವು ಇಲ್ಲೇ ಇದ್ದೇವೆ. ಈಗ ಏಕಾಏಕಿ ನಿಮಗೆ ಶತ್ರುಗಳು ಆಗಿದ್ದೇವೆಯೇ ಎಂದು ಫೆಬ್ರುವರಿ 7ರಂದು ದೊರಕಿದ ಪತ್ರದಲ್ಲಿ ಬರೆಯಲಾಗಿದೆ. 

ಇದನ್ನು ಓದಿ : ಕಳೆದ ವರ್ಷ 300, ಈ ವರ್ಷ 365 ಪುರುಷರು..!ಈ ಹೆಣ್ಣಿನ ಪ್ರತಿಜ್ಞೆ ಕೇಳಿದರೆ ಶಾಕ್‌ ಗ್ಯಾರಂಟಿ..!!

ಈಗ ಶುರುವಾಗಿದೆ ಇನ್ನು ಮುಂದೆ ಹೆಚ್ಚಿನಲ್ಲಿ ಆಗಲಿದೆ ಮಂದಿರದ ಮುಖ್ಯಸ್ಥರಿಗೆ ನಾವು ನಿಧಾನವಾಗಿ ಸಾಯುವ ವಿಷ ಕೊಟ್ಟಿದ್ದೇವೆ. ಅವನಂತೂ ಸಾಯುತ್ತಾನೆ ಬಾಕಿ ಜನರು ಇದ್ದಾರೆ. ಮಂದಿರದ ಮುಖ್ಯಸ್ಥ ನಾಯಿ ಇದ್ದಹಾಗೆ ಅವನಿಗೆ, ಪೂಜಾರಿಗೆ, ಕಮಿಟಿ ಸದಸ್ಯರಿಗೆ ಪ್ರಸಾದದಲ್ಲಿ ವಿಷ ಸೇರಿಸಿ ಕೊಡಲಾಗುವುದು ಯಾರಿಗೂ ಗೊತ್ತು ಆಗುವುದಿಲ್ಲ. ಮಂದಿರದ ಹತ್ತಿರದಲ್ಲೇ ಪೆಟ್ರೋಲ್ ಪಂಪ್ ಇದೆ. ಸ್ಫೋಟಗೊಂಡಾಗ ದೊಡ್ಡ ರೀತಿಯಲ್ಲಿ ಆಗಲಿದೆ.  ಅಲ್ಲಾಹನಿಗೆ ನಾವು ಕುರುಬಾನಿ ಕೊಡಬೇಕಿದೆ ಅವರಿಗೆ ಬ್ರಾಹ್ಮಣ ಇಷ್ಟವಾಗುತ್ತಾರೆ ಅವರನ್ನೇ ಕುರುಬಾನಿ ಕೊಡುತ್ತೇವೆ ಎಂದು ಎರಡನೇ ಪತ್ರದಲ್ಲಿದೆ ಎರಡನೇ ಪತ್ರದಲ್ಲಿ ಸಂಜಯ್ ಕುನ್ನೂರೆ ಒಳ್ಳೆಯ ಮನುಷ್ಯ ಇದ್ದಾನೆ ಎಂಬ ಸಾಲು ಇದೆ ಮತ್ತು ದೊರಕಿರುವ ಎರಡು ಪತ್ರಗಳು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ

ಈ ರೀತಿಯ ಎರಡು ಪತ್ರಗಳು ದೊರಕಿದ್ದು, ಮಾರ್ಚ್ 20 ಅಥವಾ 21ರಂದು ಮಂದಿರವನ್ನು ಸ್ಫೋಟಿಸಾಗುವುದು ಎಂದು ಪತ್ರದಲ್ಲಿ ಬರೆದಿದ್ದಾರೆ. ನೂರು ವರ್ಷ ಹಳೆಯದಾದ ಈ ಮಂದಿರಕ್ಕೆ ಪೊಲೀಸರು ಈಗ ಭದ್ರತೆ ಒದಗಿಸಿದ್ದಾರೆ ಮತ್ತು ಬೆದರಿಕೆ ಪತ್ರದ ಸಂಗತಿ ಶನಿವಾರ ಬಹಿರಂಗವಾಗಿದೆ ಈ ಕಾರಣದಿಂದ ನಗರದ ಜನ ಆತಂಕಕ್ಕೆ ಒಳಗಾಗಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News