ಬೆಂಗಳೂರು: 'ರೋಬೋಟ್ ರೆಸ್ಟೋರೆಂಟ್' ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಇನ್ಮುಂದೆ ರೆಸ್ಟೋರಂಟ್ ನಲ್ಲಿ ರೋಬೋಟ್‌ಗಳು ಆಹಾರ ಸೇವೆಯನ್ನು ಒದಗಿಸುತ್ತವೆ. ಆರಂಭಿಕ ಹಂತವಾಗಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಈ ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಲಾಗಿತ್ತು. ಇಲ್ಲಿ ಕಂಡಿರುವ ಯಶಸ್ಸನ್ನು ನೋಡಿ ಈಗ ಬೆಂಗಳೂರಿನಲ್ಲಿಯೂ ಚಾಲನೆ ನೀಡಲಾಗಿದೆ.
"ರೆಸ್ಟೋರೆಂಟ್ ಇಂದಿರಾ ನಗರದ ಹೈ ಸ್ಟ್ರೀಟ್ 100 ಫೀಟ್ ರಸ್ತೆಯಲ್ಲಿದೆ ಮತ್ತು 50 ಡಿನ್ನರ್ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಮೆನು ಹೆಚ್ಚಾಗಿ ಇಂಡೋ-ಏಷ್ಯನ್ ಅಡುಗೆ ಪದ್ಧತಿಯನ್ನು ಒಳಗೊಂಡಿರುತ್ತದೆ ಮತ್ತು ಮೋಕ್ಟೇಲ್ ಮೆನು ಸಹ ಹೊಂದಿರುತ್ತದೆ" ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ರೆಸ್ಟೋರೆಂಟ್‌ನಲ್ಲಿ 6 ರೋಬೋಟ್‌ಗಳ ತಂಡವಿದೆ, ಪ್ರತಿ ಟೇಬಲ್‌ಗೆ ಟ್ಯಾಬ್ಲೆಟ್ ಅಳವಡಿಸಲಾಗುವುದು, ಇದರಿಂದ ಡೈನರ್‌ಗಳು ತಮ್ಮ ಆದೇಶವನ್ನು ನೀಡಬಹುದು. ಇದಾದ ನಂತರ ರೋಬೋಟ್ ಆಹಾರ ಸೇವೆಯನ್ನು ಒದಗಿಸುತ್ತವೆ. ರೋಬೋಟ್‌ಗಳು ವಿಶೇಷ ಸಂದರ್ಭಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಅವರು ಕೊರುತ್ತವೆ.
ಈಗ ರೋಬೋಟ್ ರೆಸ್ಟೋರೆಂಟ್ ಸಂಸ್ಥಾಪಕ ವೆಂಕಟೇಶ್ ರಾಜೇಂದ್ರನ್ ಮಾತನಾಡಿ 'ಬೆಂಗಳೂರು ಈಗಾಗಲೇ ಹಲವಾರು ಬಗೆಯ ಪಾಕಶಾಲೆಯ ಅನುಭವಗಳನ್ನು ಹೊಂದಿದೆ ಮತ್ತು ಈಗ ರೋಬೋಟ್‌ಗಳನ್ನು ಬೆಂಗಳೂರಿನಲ್ಲಿ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ನಾವು ನಂಬಿದ್ದೇವೆ ಎಂದರು.