ಇಂದಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಗಲಿದೆ 'ಪಿಂಕ್' ಟ್ಯಾಕ್ಸಿ!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಟರ್ಮಿನಲ್ ಹೊರಗಡೆ ವಾಹನಗಳನ್ನು ಒದಗಿಸಲು ಪಾಲುದಾರರಾಗಿದ್ದಾರೆ.

Last Updated : Jan 7, 2019, 08:39 AM IST
ಇಂದಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಗಲಿದೆ 'ಪಿಂಕ್' ಟ್ಯಾಕ್ಸಿ! title=
File Image

ಬೆಂಗಳೂರು: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ 10 ಮಹಿಳಾ ಚಾಲಕಿಯರು ಇರುವ ‘ಪಿಂಕ್‌’ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಲು ಕೆಎಸ್‌ಟಿಡಿಸಿ ಸಜ್ಜಾಗಿದ್ದು, ಇಂದು ಬೆಳಿಗ್ಗೆ 9:15ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಓಡಾಟಕ್ಕೆ ಚಾಲನೆ ಸಿಗಲಿದೆ. ಸೇವೆಯು 24x7 ಲಭ್ಯವಿರುತ್ತದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಹಿಳೆಯರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಈ ಹೊಸ ಹೆಜ್ಜೆ ಇಟ್ಟಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ 10 ಮಹಿಳಾ ಚಾಲಕಿಯರು ಇರುವ ‘ಪಿಂಕ್‌’ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಲು ಕೆಎಸ್‌ಟಿಡಿಸಿ ಸಜ್ಜಾಗಿದೆ. ಜೂನ್ ನಿಂದ ಇದನ್ನು 50ಕ್ಕೆ ವಿಸ್ತರಿಸಲು ಯೋಜಿಸಲಾಗಿದೆ.

ಟ್ಯಾಕ್ಸಿ ಒದಗಿಸುವವರು ಈಗಾಗಲೇ ಕಳೆದ ಮೂರು ವರ್ಷಗಳಿಂದ ಮಹಿಳಾ-ಮಾತ್ರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದ್ದಾರೆ, ಆದರೆ ಸ್ಪಾಟ್ ಬುಕಿಂಗ್ ಮಾಡುವ ಸ್ಥಳದಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಮೊದಲ ಬಾರಿಗೆ ಈ ಸೇವೆ ಲಭ್ಯವಾಗಲಿದೆ.

ಟ್ಯಾಕ್ಸಿ ಕಾಯ್ದಿರಿಸಲು 080–44664466 ಅಥವಾ ಕೆಎಸ್‌ಟಿಡಿಸಿ ಆ್ಯಪ್ ಸಂಪರ್ಕಿಸಬಹುದು. ಪ್ರಯಾಣ ದರ (ಪ್ರತಿ ಕಿ.ಮೀಗೆ) ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ 21.50 ರೂ., ಮಧ್ಯರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ 23.50ರೂ. ನಿಗದಿ ಪಡಿಸಲಾಗಿದೆ.

ಈ ಟ್ಯಾಕ್ಸಿಗಳಿಗೆ ಗುಲಾಬಿ ಬಣ್ಣ ಬಳೆಯಲಾಗಿದ್ದು, ಸುಲಭವಾಗಿ ಅದನ್ನು ಗುರುತಿಸಬಹುದಾಗಿದೆ. ಜಿಪಿಎಸ್ ಸಾಧನ, ಎಂಡಿಟಿ ಸಾಧನ ಹಾಗೂ ಪ್ಯಾನಿಕ್ ಬಟನ್ ಸೇವೆ ಸಹ ಟ್ಯಾಕ್ಸಿಯಲ್ಲಿ ಲಭ್ಯವಿದೆ. ಟ್ಯಾಕ್ಸಿಗಳ ಮೇಲೆ ದಿನದ 24 ಗಂಟೆಯೂ ನಿಗಾವಹಿಸುವ ವ್ಯವಸ್ಥೆ ಇದೆ ಎಂದು ಕೆಎಸ್‌ಟಿಡಿಸಿ ತಿಳಿಸಿದೆ.

Trending News