ಪೂಜೆ ಮಾಡುವ ವೇಳೆ ದೇವಾಲಯದ ಗರ್ಭಗುಡಿಯಲ್ಲೇ ಕುಸಿದು ಬಿದ್ದ ಅರ್ಚಕ, ಮುಂದೆ..!

ಮಂಡ್ಯ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Updated: Aug 1, 2020 , 04:24 PM IST
ಪೂಜೆ ಮಾಡುವ ವೇಳೆ ದೇವಾಲಯದ ಗರ್ಭಗುಡಿಯಲ್ಲೇ ಕುಸಿದು ಬಿದ್ದ ಅರ್ಚಕ, ಮುಂದೆ..!

ಮಂಡ್ಯ: ದೇವಸ್ಥಾನದಲ್ಲಿ ಪೂಜೆ ಮಾಡುವ ವೇಳೆ ಗರ್ಭಗುಡಿಯಲ್ಲಿಯೇ ಅರ್ಚಕರು ಕುಸಿದುಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದ ಮಲ್ಲೇಶ್ವರ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗರ್ಭಗುಡಿಯಲ್ಲಿಯೇ ಕುಸಿದು ಬಿದ್ದ ಅರ್ಚಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಂತೆಕಸಲಗೆರೆ ಗ್ರಾಮದ ಚಂದ್ರಶೇಖರ್ (51) ಎಂದು ಗುರುತಿಸಲಾಗಿದೆ.

ಅರ್ಚಕರು ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದ ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಅರ್ಚಕರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಆತಂಕ ಕೊಂಚ ಕಡಿಮೆಯಾದಂತಾಗಿದೆ.