ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

Written by - Bhavya Sunil Bangera | Edited by - Manjunath N | Last Updated : Sep 26, 2024, 06:26 PM IST
  • ಘಟನೆ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಅರ್ಜಿದಾರರ ಧ್ವನಿ ದೃಢವಾಗಿದೆ.
  • ವರದಿಯಲ್ಲಿನ ಅಂಶಗಳನ್ನು ಓದುವುದಕ್ಕೂ ಕಷ್ಟವಾಗಲಿದೆ. ಸಂತ್ರಸ್ತೆಯ ನೋವು, ಗೋಳು ದಾಖಲಾಗಿದೆ.
  • ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕವೂ ಒಪ್ಪಿತ ಲೈಂಗಿಕ ಕ್ರಿಯೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
 ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ title=

ಬೆಂಗಳೂರು : ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ತೀರ್ಪು ಒಟ್ಟಾಗಿ ಪ್ರಕಟಿಸುವುದಾಗಿ ತಿಳಿಸಿದೆ.ವಿಚಾರಣೆ ವೇಳೆ, ಅತ್ಯಾಚಾರ ನಡೆದ ಆರೋಪ ಐದು ವರ್ಷಗಳ ಹಿಂದಿ ನಡೆದಿರುವುದಾಗಿದೆ. ಅತ್ಯಾಚಾರ ನಡೆದಿದೆ ಎಂಬುದಾಗಿ ಆರೋಪಿಸಿದ್ದರೂ, ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಉಳಿದುಕೊಂಡಿದ್ದರು ಎಂದು ಪೀಠ ಕ್ಕೆ ತಿಳಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ಹಿರಿಯವಕೀಲ ಪ್ರೋ.ರವಿವರ್ಮ ಕುಮಾರ್, ಘಟನೆ ಭಯಾನಕವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅರ್ಜಿದಾರ ಆರೋಪಿ ಘಟನೆ ಸಂಬಂಧ ಎಲ್ಲಿಯೂ ಚರ್ಚೆ ನಡೆಸಿದಲ್ಲಿ ಮತ್ತು ಇತರರಿಗೆ ಮಾಹಿತಿ ನೀಡಿದಲ್ಲಿ ವಿಡಿಯೋವನ್ನು ಸಂತ್ರಸ್ತೆಯ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ಘಟನೆ ನಡೆದ ಸಂದರ್ಭದಲ್ಲಿ ಕಿರಿಯ ಮಗಳಿಗೆ ಮದುವೆ ಆಗಿರಲಿಲ್ಲ. ಹಿರಿಯ ಪುತ್ರಿಗೆ ಮಾತ್ರ ಮದುವೆಯಾಗಿತ್ತು. ಅವರ ಭವಿಷ್ಯಕ್ಕೆ ಸಮಸ್ಯೆ ಅಗಲಿದೆ ಎಂಬ ಕಾರಣದಿಂದ ದೂರು ನೀಡಿರಲ್ಲ. ಇದೀಗ ಎಲ್ಲರೂ ನನ್ನೊಂದಿಗೆ ಇದ್ದಾರೆ. ಹೀಗಾಗಿ ದೂರು ದಾಖಲಿಸುವುದಕ್ಕೆ ವಿಳಂಬ ವಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಕ್ರಿಕೆಟ್‌ ನಿವೃತ್ತಿಯ ನಂತರ ಬೀದಿಗೆ ಬಿದ್ದ ಕ್ರಿಕೆಟಿಗರು! ಲಾರಿ ಡ್ರೈವರ್‌, ಸೇಲ್ಸ್‌ಮೆನ್‌ಗಳಾಗಿ ಜೀವನ ಸಾಗಿಸುತ್ತಿರುವ ಆಟಗಾರರಿವರು

ಘಟನೆ ಸಂಬಂಧಿಸಿದಂತೆ ದೂರು ದಾಖಲುವುದಕ್ಕೂ ಒಂದು ವರ್ಷದ ಮುನ್ನ ಅರ್ಜಿದಾರರು ನಿರ್ಬಂಧಕಾಜ್ಞೆ ಆದೇಶವನ್ನು ಪಡೆದುಕೊಂಡಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಚುನಾವಣೆ ನಡೆದ ಬಳಿಕ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಎಲ್ಲ ಮಾಹಿತಿ ಇದ್ದಕಾರಣ ಪ್ರತಿಭಂಧಕಾಜ್ಞೆ ಪಡೆದುಕೊಂಡಿದ್ದು, ಮಾಧ್ಯಮಗಳಲ್ಲಿ ಪ್ರಸಾರಕ್ಕೆ ತಡೆ ಪಡೆದುಕೊಂಡಿದ್ದರು. ಆರೋಪಿಯಾಗಿರುವರ ಕುಟುಂಬ ರಾಜಕೀಯ ಮತ್ತು ಆರ್ಥಿಕವಾಗಿ ಅತ್ಯಂತ ಪ್ರಭಲವಾಗಿದ್ದಾರೆ, ಅತ್ಯಾಚಾರ ಪ್ರಕರಣಗಳು ನಡೆಯಲಿದ್ದು, ಸಾಕ್ಷ್ಯಗಳ ನಾಶ ಪಡಿಸುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದರು.

ಘಟನೆ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಅರ್ಜಿದಾರರ ಧ್ವನಿ ದೃಢವಾಗಿದೆ. ವರದಿಯಲ್ಲಿನ ಅಂಶಗಳನ್ನು ಓದುವುದಕ್ಕೂ ಕಷ್ಟವಾಗಲಿದೆ. ಸಂತ್ರಸ್ತೆಯ ನೋವು, ಗೋಳು ದಾಖಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕವೂ ಒಪ್ಪಿತ ಲೈಂಗಿಕ ಕ್ರಿಯೆ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಜತೆಗೆ, ಸಂತ್ರಸ್ತೆ ಮಹಿಳೆ ಅರ್ಜಿದಾರರ ವಯಸ್ಸಿಗಿಂತಲೂ ಎರಡು ಪಟ್ಟು ದೊಡ್ಡವರಾಗಿದ್ದಾ. ಅಷ್ಟಾದರೂ, ಪ್ರಜ್ವಲ್ ಅವರ ಪಾದಗಳನ್ನು ಹಿಡಿದುಕೊಂಡು ಬೇಡಿಕೊಂಡಿದ್ದಾಳೆ. ಆದರೂ, ಅರ್ಜಿದಾರರ ನಿಯಂತ್ರಣದಲ್ಲಿಯೇ ಉಳಿಯಬೇಕಾಗಿತ್ತು ಎಂದು ಅವರು ವಿವರಿಸಿದರು.

ಇದನ್ನೂ ಓದಿIND vs BAN: ಕಾನ್ಪುರ ಟೆಸ್ಟ್‌ನೊಂದಿಗೆ ʼಈʼ ಲೆಜೆಂಡರಿ ಆಟಗಾರರ ವೃತ್ತಿಜೀವನ ಅಂತ್ಯ... ಮತ್ತೇ ಟೀಂ ಇಂಡಿಯಾಗೆ ಮರಳುವುದಿಲ್ಲವೇ?!  

ಘಟನೆ ಬೆಳಕಿಗೆ ಬರುತ್ತಿದಂತೆ ವಿದೇಶಕ್ಕೆ ತೆರಳಿದ್ದ ಅರ್ಜಿದಾರ ಪ್ರಜ್ವಲ್ ೩೪ ದಿನಗಳ ಕಾಲ ಹೊರಗಿದ್ದು, ಬಳಿಕ ದೇಶಕ್ಕೆ ಹಿಂದಿರುಗಿದ್ದರು ಏಕೆ ಎಂದು ಅವರು ಪೀಠಕ್ಕೆ ತಿಳಿಸಿದರು.ಅರ್ಜಿದಾರರ ಪರ ವಕೀಲರು, ಕೆಲವು ಆಶ್ಲೀಲ ವಿಡಿಯೋಗಳು ಹರಿದಾಡುತ್ತಿದ್ದವು ಇದೇ ಕಾರಣದಿಂದ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಆದೇಶ ಪಡೆದುಕೊಂಡಿದ್ದರು ಎಂದು ತಿಳಿಸಿದರು.ಇದೇ ವೇಳೆ ಸಂತ್ರಸ್ತೆಯ ಪರ ವಕೀಲರು, ಪ್ರಜ್ವಲ್ ರೇವಣ್ಣ ಅವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ ಶಲಿಸಿದ ಪೀಠ ಎಲ್ಲ ಅರ್ಜಿಗಳ ತೀರ್ಪನ್ನು ಪ್ರತ್ಯೇಕವಾಗಿ ಒಂದೇ ದಿನ ಪ್ರಕಟಿಸಲಾಗುವುದು ಎಂದು ಪೀಠ ತಿಳಿಸಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News