ಧಾರವಾಡ: ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನ ಕಬ್ಬು ಬೆಳೆಗಾರರಿಗೆ ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆಗೆ ಕಬ್ಬು ಕಟಾವು ಹಾಗೂ ಸಾಗಾಟ ದರವನ್ನು ಹೆಚ್ಚಿಗೆ ನಿಗದಿ ಮಾಡಿದ್ದು ಅದನ್ನು ಪರಿಶೀಲಿಸಿ ಕಡಿಮೆಗೊಳಿಸುವಂತೆ ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆ ಅಧಿಕಾರಿಗಳಿಗೆ ಸಚಿವರಾದ ಸಂತೋಷ ಲಾಡ್ ಸೂಚಿಸಿದರು.
ಇದನ್ನೂ ಓದಿ: ಚಂದ್ರಗ್ರಹಣ :i ಬೆಳಿಗ್ಗೆಯಿಂದ ರಾತ್ರಿಯ ವರೆಗೂ ದೇವಸ್ಥಾನದ ಬಾಗಿಲು ಓಪನ್
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಿದ ಸಚಿವರು ಕಬ್ಬು ಬೆಳೆಗಾರರ ಅಹವಾಲು ನ್ಯಾಯಸಮ್ಮತವಾಗಿದ್ದು ಕಾರ್ಖಾನೆಯು ಕಬ್ಬು ಕಟಾವು ಹಾಗೂ ಸಾಗಾಟ ದರ ರೂ.893 ನಿಗದಿಪಡಿಸಿದೆ. ಕಲಘಟಗಿ, ಅಳ್ನಾವರ, ಧಾರವಾಡ ಸುತ್ತಲಿನ ಕಬ್ಬು ಬೆಳೆಗಾರರಿಗೆ ಹಳಿಯಾಳ ಕಾರ್ಖಾನೆಯ ಕಿ.ಮಿ. ಅಂತರ ಹತ್ತಿರವಾಗಿದ್ದರೂ ಕಾರ್ಖಾನೆಯವರು 110 ಕಿ.ಮಿ. ವ್ಯಾಪ್ತಿಯ ಕಟಾವು ಸಾಗಾಟದ ದರ ರೂ.893 ನಿಗದಿ ಪಡಿಸಿರುವುದು ಸಮಂಜಸವಲ್ಲ. ರೈತರ ಅಹವಾಲು ಮೇಲ್ನೋಟಕ್ಕೆ ನ್ಯಾಯ ಸಮ್ಮತವಾಗಿದ್ದು ಕಾರ್ಖಾನೆಯು ಈ ದರವನ್ನು ಕಡಿಮೆಗೊಳಿಸುವಂತೆ ಸೂಚಿಸಿದರು.
ಇದನ್ನೂ ಓದಿ-Deepika Padukone: ಮಾನಸಿಕ ಖಿನ್ನತೆಗೆ ಒಳಗಾಗಿದ್ರಾ ದೀಪಿಕಾ? ರಹಸ್ಯ ಬಿಚ್ಚಿಟ್ಟ ಪತಿ ರಣವೀರ್ ಸಿಂಗ್!
ಕಾರ್ಖಾನೆ ಅಧಿಕಾರಿಗಳು ತಮ್ಮ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಇನ್ನೇರಡು ದಿನದಲ್ಲಿ ಸದ್ಯದ ದರ ನಿಗದಿಯನ್ನು ಪರಿಶೀಲಿಸಿ ಉತ್ತರ ತಿಳಿಸುವಂತೆ ಸಚಿವರು ಸೂಚಿಸಿದರು.ಈ ಸಮಸ್ಯೆಯನ್ನು ಸಕ್ಕರೆ ಆಯುಕ್ತರು ಹಾಗೂ ಸಕ್ಕರೆ ಸಚಿವರ ಗಮನಕ್ಕೂ ತರುವುದಾಗಿ ಸಚಿವರು ತಿಳಿಸಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೋಲಿಸ್ ವರಿಷ್ಠಾಧಿಕಾರಿ ಡಾ.ಗೊಪಾಲ ಬ್ಯಾಕೊಡ್ ಹಾಗೂ ಕಬ್ಬು ಬೆಳೆಗಾರರ ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.