ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳು ಬಂದ್ !ಸರ್ಕಾರದ ವಿರುದ್ದ ಹೋರಾಟಕ್ಕಿಳಿದ ರುಪ್ಸಾ ಸಂಘಟನೆ

ರುಪ್ಸಾ ಸಂಘಟನೆ ನಾಲ್ಕು ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ. ಈ ಬೇಡಿಕೆ ಈಡೇರದೆ ಹೋದಲ್ಲಿ  ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳನ್ನು  ಬಂದ್ ಮಾಡುವ ಎಚ್ಚರಿಕೆ ನೀಡಿದೆ. 

Written by - Ranjitha R K | Last Updated : Aug 5, 2024, 04:04 PM IST
  • ಶಿಕ್ಷಣ ಇಲಾಖೆ ವಿರುದ್ಧ ಖಾಸಗೀ ಶಾಲೆಗಳ ಆರೋಪ
  • ನಾಲ್ಕು ಬೇಡಿಕೆಗಳಿಗೆ ಒತ್ತಾಯ- 15 ದಿನಗಳ ಗಡುವು
  • ಅಗಸ್ಟ್ 21ರ ನಂತರ ಖಾಸಗಿ ಶಾಲೆ ಬಂದ್ ಮಾಡುವ ಎಚ್ಚರಿಕೆ
ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳು ಬಂದ್ !ಸರ್ಕಾರದ ವಿರುದ್ದ ಹೋರಾಟಕ್ಕಿಳಿದ ರುಪ್ಸಾ ಸಂಘಟನೆ title=

ಬೆಂಗಳೂರು : ಶಿಕ್ಷಣ ಇಲಾಖೆ ವಿರುದ್ಧ ಖಾಸಗೀ ಶಾಲೆಗಳು ಒಂದಿಲ್ಲೊಂದು ಆರೋಪ ಮಾಡುತ್ತಾ ಬಂದಿವೆ. ಇದೀಗ ಮತ್ತೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಡೆ ವಿರುದ್ಧ ಕೆಂಡ ಕಾರುತ್ತಿವೆ. ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ,ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಡೀ ರಾಜ್ಯದ ಖಾಸಗಿ ಶಾಲೆಗಳನ್ನ ಬಂದ್ ಮಾಡಲು ನಿರ್ಧರಿಸಿವೆ. 

 ನಾಲ್ಕು ಬೇಡಿಕೆಗಳಿಗೆ ಒತ್ತಾಯ- 15 ದಿನಗಳ ಗಡುವು!
ಅಧಿಕಾರಿಗಳ ದುರಾಡಳಿತದಿಂದ ರಾಜ್ಯದ ಶಿಕ್ಷಣದ ವ್ಯವಸ್ಥೆ ಹಾಳಾಗುತ್ತಿದೆ ಎಂದು ರುಪ್ಸಾ ಸಂಘಟನೆ ಆರೋಪಿಸಿದೆ.ಇಲಾಖೆಯಲ್ಲಿರುವ ಕೆಲ ಭ್ರಷ್ಟಾಡಳಿದ ಅಧಿಕಾರಿಗಳಿಂದ ಶಾಲೆಗಳ ಮಕ್ಕಳ ಶೈಕ್ಷಣಿಕ ಜೀವನವೇ ಸರ್ವನಾಶ ಆಗುತ್ತಿದೆ. ಜೊತೆಗೆ ಶಾಲೆಗಳ ನವೀಕರಣಕ್ಕೆ ಇಲಾಖೆಯ 64 ಅಂಶಗಳನ್ನ ನಿಗದಿಪಡಿಸಿದ್ದು, ಅವುಗಳ ದಾಖಲೆ ಕೇಳಿದೆ.ಇದೆಲ್ಲವೂ ಶಿಕ್ಷಣ ಇಲಾಖೆ ಆಕ್ಟ್ ವಿರುದ್ಧದ ನಡೆಯಾಗಿದೆ ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಹಾಲುನೂರು ಎಸ್ ಲೇಪಾಕ್ಷಿ ಕೆಂಡಕಾರಿದ್ದಾರೆ.

ಇದನ್ನೂ ಓದಿ : ಪಾದಯಾತ್ರೆ ಪರವಾನಗಿ ಇಲ್ಲ ಎಂಬ ಹೇಳಿಕೆ ವಿಚಾರ

ಹೌದು ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗುತ್ತಿಲ್ಲವಂತೆ.  ಹೀಗಾಗಿ ಸರ್ಕಾರದ ಮುಂದೆ ಪ್ರಮುಖ ನಾಲ್ಕು ಬೇಡಿಕೆಗಳನ್ನ ಮುಂದಿಟ್ಟಿದೆ. ಈ ರೀತಿಯಾಗಿ ಖಾಸಗೀ ಶಾಲಾ ಒಕ್ಕೂಟ ರುಪ್ಸಾ ಹೋರಾಟದ ರೂಪರೇಷಕ್ಕೆ ಸಿದ್ದಪಡಿಸಿದೆ.

ಬೇಡಿಕೆಗಳು : 
-ಕಾನೂನು ಬಾಹಿರವಾಗಿ ಟ್ಯಾಕ್ಸ್ ವಸೂಲಿ ಮಾಡುತ್ತಿದೆ 
-ಶಾಲೆಗಳ ನವೀಕರಣಕ್ಕೆ ಇಲಾಖೆಯ 64 ಅಂಶಗಳನ್ನ ನಿಗದಿಪಡಿಸಿರುವ ಆದೇಶವನ್ನು ರದ್ದು ಮಾಡ್ಬೇಕು
-ಶಾಲಾ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು
-ಉತ್ತರ ಕರ್ನಾಟಕದಲ್ಲಿ ಅನಧಿಕೃತ ಟ್ಯೂಷನ್ ಸೆಂಟರ್ ಹಾವಳಿಯನ್ನು ತಡೆಗಟ್ಟಿಬೇಕು

ಈ ಬೇಡಿಕೆಗಳ ಸಂಬಂಧ ಅಗಸ್ಟ್ 21ರ ಒಳಗೆ ನಮ್ಮ‌ ಜೊತೆ ಸಭೆ ಮಾಡಿ ಬೇಡಿಕೆ ಈಡೇರಿಸಬೇಕು. ಸರ್ಕಾರ ಅಸಡ್ಡೆ ತೋರಿದರೆ,ಅಗಸ್ಟ್ 21 ನಂತ್ರ ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡಿ ಬೆಂಗಳೂರು ಚಲೋ ಮಾದುವುದಾಗಿ ಎಚ್ಚರಿಕೆ ನೀಡಿದೆ‌.

ಇದನ್ನೂ ಓದಿ : ಕೂಲಿಂಗ್ ಗ್ಲಾಸ್ ಹಾಕಿ ರಗಡ್ ಆಗಿ ಎಂಟ್ರಿ ಕೊಟ್ಟ ಡಿಕೆಶಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News