ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಾ.ರಾ. ಮಹೇಶ್; 'ಸೆಕ್ಸ್‌ಟಾಕ್‌' ನಡೆಸಿದ್ರಾ ಹಳ್ಳಿಹಕ್ಕಿ!

ನೀವು ನನ್ನ ಯೋಗ್ಯತೆ ಬಗ್ಗೆ ಮಾತನಾಡುವುದು ಬೇಡ. ನಿಮ್ಮಂತೆ ನಾವು ಬದುಕಿದ್ದರೆ, ಕೆರೆಯೋ ಬಾವಿಯೋ ನೋಡಿಕೊಳ್ಳಬೇಕಾಗಿತ್ತು- ಅನರ್ಹ ಶಾಸಕ ವಿಶ್ವನಾಥ್ ಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ತಿರುಗೇಟು

Yashaswini V Yashaswini V | Updated: Sep 23, 2019 , 12:40 PM IST
ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಾ.ರಾ. ಮಹೇಶ್; 'ಸೆಕ್ಸ್‌ಟಾಕ್‌' ನಡೆಸಿದ್ರಾ ಹಳ್ಳಿಹಕ್ಕಿ!

ಮೈಸೂರು: ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹಾಗೂ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿರುವ ಸಾ.ರಾ. ಮಹೇಶ್, ನಟಿಯೊಂದಿಗೆ ವಿಶ್ವನಾಥ್ 'ಸೆಕ್ಸ್‌ಟಾಕ್‌' ನಡೆಸಿದ್ದಾರೆ ಎನ್ನಲಾಗಿದ್ದ ಸಿಡಿಯೊಂದನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಾರೆ.

ನೀಲಿ ಚಿತ್ರ ತೆಗೆಯಲು ಹೋಗಿ ಸಿಕ್ಕಿಹಾಕಿಕೊಂಡವನಲ್ಲ. ಯಾರ ಮನೆಯ ಲೋಟ, ಚಡ್ಡಿ ತೊಳೆದಿಲ್ಲ. ನನ್ನನ್ನು ನಾನು ಯಾರಿಗೂ ಮಾಡಿಕೊಂಡಿಲ್ಲ. ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ಹೆಚ್. ವಿಶ್ವನಾಥ್ ಭಾನುವಾರ ಸಾ.ರಾ. ಮಹೇಶ್ ವಿರುದ್ಧ ಗುಡುಗಿದ್ದರು.

ಸಾ.ರಾ. ಮಹೇಶ್ ಈಸ್ ವೆರಿ ಪಾಯ್ಸನಸ್! ಯಾರನ್ನು ಬೇಕಾದರೂ ಹಾಳು ಮಾಡ್ತಾರೆ: ಎಚ್. ವಿಶ್ವನಾಥ್

ಈ ಹಿನ್ನೆಲೆಯಲ್ಲಿ ಇಂದು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ. ಮಹೇಶ್, ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ, ವಿಶ್ವನಾಥ್ ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತಿದ್ದಾರೆ. ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ನಿಮಗಿಂತ ಹೆಚ್ಚಾಗಿ ಏಕವಚನದಲ್ಲಿ ಮಾತನಾದಬಲ್ಲೇ. ಆದರೆ ನನ್ನ ಹೆತ್ತವರು ನನಗೆ ಸಂಸ್ಕೃತಿ ಕಲಿಸಿದ್ದಾರೆ. ನೀವು ಹಿರಿಯರು ಎಂಬ ಕಾರಣಕ್ಕೆ ನಾನು ಏಕವಶನದಲ್ಲಿ ಮಾತನಾಡುತ್ತಿಲ್ಲ ಎಂದರು.

'ಹೆಚ್. ವಿಶ್ವನಾಥ್ ಬ್ಲೂ ಬಾಯ್':
ಇದೇ ಸಂದರ್ಭದಲ್ಲಿ ಸಿಡಿ ಒಂದನ್ನು ತೋರಿಸಿ, ನಿಮ್ಮ(ವಿಶ್ವನಾಥ್) ಬ್ಲೂ ಫಿಲ್ಮ್ ವಿಡಿಯೋ ಇದು ಎಂದು ಬಾಂಬ್ ಸಿಡಿಸಿದ ಸಾ.ರಾ. ಮಹೇಶ್, ನೀವು ಬ್ಲೂ ಬಾಯ್ ಇದ್ದಂತೆ. ನೀವು ಯಾವ ಹಿರೋಯಿನ್ ಜೊತೆ ಮಾತನಾಡಿದ್ದೀರ ಎಂಬುದು ಗೊತ್ತಿದೆ. ನಿಮಗೆ ಯಾರು ಹಳ್ಳಿಹಕ್ಕಿ ಎಂದು ಹೆಸರಿಟ್ಟರೋ ಗೊತ್ತಿಲ್ಲಾ... ಹಳ್ಳಿಹಕ್ಕಿಗೆ ಬೇಸಿಗೆ, ಮಳೆಗಾಲ, ಚಳಿಗಾಲಕ್ಕೊಂದು ಗೂಡು ಇದೇ ಎಂದು ವ್ಯಂಗ್ಯವಾಡಿದರು.

ನೀವು ನನ್ನ ಯೋಗ್ಯತೆ ಬಗ್ಗೆ ಮಾತನಾಡುವುದು ಬೇಡ ಎಂದು ಹೆಚ್.ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ ಸಾ.ರಾ. ಮಹೇಶ್ ನಿಮ್ಮಂತೆ ನಾವು ಬದುಕಿದ್ದರೆ, ಕೆರೆಯೋ ಬಾವಿಯೋ ನೋಡಿಕೊಳ್ಳಬೇಕಾಗಿತ್ತು ಎಂದು ತಿರುಗೇಟು ನೀಡಿದರು.